ಮುಂಬೈ (ಪಿಟಿಐ): ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ ಬಿಜೆಪಿಯ ಮುಖಂಡ ನಿತಿನ್ ಗಡ್ಕರಿ ಅವರನ್ನು ನಿಪುಣ ‘ವ್ಯಾಪಾರಿ’ ಎಂದು ಶಿವಸೇನೆ ಬುಧವಾರ ಟೀಕಿಸಿದೆ.

ಗಡ್ಕರಿ ಹಾಗೂ ರಾಜ್ ಠಾಕ್ರೆ ನಡುವಣ ಇತ್ತೀಚಿನ ಭೇಟಿಯ ಬಗ್ಗೆ ಅತೃಪ್ತಿ ಸೂಚಿಸಿದ್ದರೆನ್ನಲಾದ ಶಿವ ಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಗಡ್ಕರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಗಡ್ಕರಿ ಅವರು ತುಂಬಾ ನಿಪುಣರು. ಅವರು ಯಾವುದೇ ‘ದಕ್ಷಿಣೆ’ ನೀಡದೇ ಎಂಎನ್ಎಸ್ ಮುಖ್ಯಸ್ಥರ ಬೆಂಬಲ ಕೋರಿದ್ದಾರೆ. ಗಡ್ಕರಿ ಅವರು ನಿಪುಣ ವ್ಯಾಪಾರಿ ಎಂಬ ಬಗ್ಗೆ ಮಹಾರಾಷ್ಟ್ರದ ಜನತೆಯ ಮನದಲ್ಲಿ ಯಾವುದೇ ಸಂದೇಹ ಉಳಿದಿಲ್ಲ. ರಾಜಕೀಯ ಕ್ಷೇತ್ರದಲ್ಲೂ ಯಾವುದೇ ಬಂಡವಾಳ ಹೂಡಿಕೆ ಇಲ್ಲದೇ ತನಗೆ ಬೇಕಾದುದ್ದನ್ನು ಪಡೆಯುವ ಜಾಣತನವನ್ನು ಅವರು ಬೆಳೆಸಿಕೊಂಡಿದ್ದಾರೆ’ ಎಂದು ಉದ್ಧವ್ ಹೇಳಿರುವುದಾಗಿ ‘ಸಾಮ್ನಾ’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.