ಬುಧವಾರ, ಮೇ 12, 2021
24 °C

ಗುಂಡಿನ ದಾಳಿ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ:  ಕಳೆದ ಬುಧವಾರ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.ರಾಯಬಾಗ ಪೊಲೀಸ್ ಠಾಣೆಯ ವ್ಯಾಪ್ತಿಯ ಕಟಕಬಾವಿ ಕ್ರಾಸ್ ಹತ್ತಿರ ಬುಧವಾರ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ನಾಲ್ವರು ಗಾಯಗೊಂಡಿದ್ದರು.



ಇಟನಾಳ ಗ್ರಾಮದ ನಿಂಗಪ್ಪ ಸೋಮನಿಂಗ ಗೊಂಡಿ,  ಮಹಾಂತೇಶ ಭೂಪಾಲ ಬೆನ್ನಾಳಿ ಹಾಗೂ ಖನದಾಳದ ಸದಾಶಿವ ಮಾರುತಿ ಮೋರೆ, ಶ್ರೀಶೈಲ ಕಲಗೌಡ ಪಾಟೀಲ, ವಕೀಲರಾದ ಶ್ರೀಶೈಲ ಬಾಬು ಹೊಸಟ್ಟಿ ಅವರನ್ನು ಬಂಧಿಸಲಾಗಿದೆ ಎಂದು ರಾಯಬಾಗ ಪೊಲೀಸರು ತಿಳಿಸಿದ್ದಾರೆ.



ಗುಂಡೇಟಿನಿಂದ ಗಾಯಗೊಂಡ ಇಟ್ನಾಳದ ಸದಾಶಿವ ಡಾಂಗೆ ಅವರು 14 ಜನರ ವಿರುದ್ಧ ಪೊಲೀಸರಿಗೆ  ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.