ಮಂಗಳವಾರ, ಮಾರ್ಚ್ 9, 2021
18 °C
ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಶಾಸಕ ಶಿವಲಿಂಗೇಗೌಡ ಕಿವಿಮಾತು

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ

ಅರಸೀಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸದಸ್ಯರು ಇತರೆ ಪಕ್ಷಗಳ ಮುಖಂಡರು ನೀಡುವ ಆಸೆ, ಅಮಿಷಗಳಿಗೆ ಬಲಿಯಾಗದೆ, ತಮ್ಮನ್ನು ಗೆಲ್ಲಿಸಿದ ಪಕ್ಷ , ಮುಖಂಡರು, ಹಾಗೂ ಕಾರ್ಯಕರ್ತರಿಗೆ ಋಣಿಯಾಗಿದ್ದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ  ಜಯಗಳಿಸಿದ ಸದಸ್ಯರಿಗೆ ಗುರುವಾರ ಸಲಹೆ ನೀಡಿದರು.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಜೆಡಿಎಸ್‌ ಪಕ್ಷ ಆಯೋಜಿಸಿದ್ದ ಗ್ರಾಮ ಪಂಚಾಯಿತಿ  ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು ಚುನಾವಣೆ ಸಣ್ಣವರಾಗಿದ್ದು ಚುನಾವಣೆ ಮುಗಿದ ನಂತರ ಅವರು ದೊಡ್ಡವರಾಗುತ್ತಾರೆ. ಯಾರ ಮಾತು ಕೇಳದೆ ಗೆಲ್ಲಿಸಿದವರನ್ನೇ ಮರೆಯುತ್ತಾರೆ ಎಂದರು.ಆದ್ದರಿಂದ ಸದಸ್ಯರು ಈ ರೀತಿ ಮಾಡದೆ ನಿಮ್ಮ ಗೆಲುವಿನ ಹಿಂದೆ ಪಕ್ಷದ ಮುಖಂಡರ ಕಾರ್ಯಕರ್ತರ ಮತ್ತು ಶಾಸಕರ ಶ್ರಮವಿದೆ ಎಂಬುದನ್ನು ಯಾವ ಕಾರಣಕ್ಕೂ ಮರೆಯಬಾರದು. ಏಕೆಂದರೆ ಬೇರೆ ಪಕ್ಷದವರು ಇಲ್ಲ–ಸಲ್ಲದ ಆಸೆ ಅಮಿಷ ತೋರಿಸಿ ನಿಮ್ಮನ್ನು ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಾರೆ. ಗೆದ್ದ ಮೇಲೆ ಬೇರೆಯವರ ಹಿಂದೆ ಬೀಳದೆ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿರಬೇಕು ಎಂದು ಅವರು ಕಿವಿ ಮಾತು ಹೇಳಿದರು.330 ಮಂದಿ ಜೆಡಿಎಸ್‌ ಬೆಂಬಲಿತ ಸದಸ್ಯರ ಆಯ್ಕೆ:  ಜಾವಗಲ್‌ ಹೋಬಳಿ ಹೊರತು ಪಡಿಸಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ 35 ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್‌ ಬೆಂಬಲಿತ 330 ಮಂದಿ ಸದಸ್ಯರು ಆಯ್ಕೆಯಾಗಿದ್ದು, ಇದು ಕಳೆದ ಬಾರಿಗಿಂತ ಉತ್ತಮ ಸಾಧನೆಯಾಗಿದೆ. ಇದರಲ್ಲಿ ಸುಳ್ಳೇನು ಇಲ್ಲ, ಏಕೆಂದರೆ ಎಲ್ಲಾ ಸದಸ್ಯರು ಇಲ್ಲಿಯೇ ಇದ್ದಾರೆ ಎಂದು ಸ್ಪಷ್ಟ ಪಡಿಸಿದರು. ಶಾಸಕರ ಅಭಯ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯ ನಂತರ ಗೆಲುವು ಸಾಧಿಸಿ ತಮ್ಮನ್ನು ಅಭಿನಂದಿಸಲು ತಮ್ಮ ನಿವಾಸಕ್ಕೆ ಬಂದಿದ್ದರು. ಆದರೆ, ಪ್ರತಿಯಾಗಿ ತಾವು ಇಂದು ಎಲ್ಲಾ ಗೆದ್ದ ಸದಸ್ಯರಿಗೆ ಪಕ್ಷದ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸುತ್ತಿರುವುದಾಗಿ ತಿಳಿಸಿದ ಅವರು ಪಕ್ಷಕ್ಕೆ ಗ್ರಾಮೀಣ ಭಾಗದ ಜನರು ತೆನೆಹೊತ್ತ ಮಹಿಳೆಯನ್ನು ಕೈಹಿಡಿದು ನೆಲೆ ಒದಗಿಸಿದ್ದಾರೆ.ಇದಕ್ಕೆ ನಿಮ್ಮ ಗೆಲುವೇ ಸಾಕ್ಷಿ. ಅಲ್ಲದೆ ಪಕ್ಷ ಅಧಿಕಾರದಲ್ಲಿ ಇಲ್ಲ ಎಂದು ಯೋಚನೆ ಮಾಡಬೇಡಿ. ಜನರ ಕುಂದು–ಕೊರತೆ, ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಆಡಳಿತಾತ್ಮಕವಾಗಿ ಏನೇ ಸಮಸ್ಯೆಗಳಿದ್ದರು ನನ್ನ ಗಮನಕ್ಕೆ ತಂದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.ಜೆಡಿಎಸ್‌ ಮುಖಂಡ ಗೊಲ್ಲರಹಳ್ಳಿ ಹನುಮಪ್ಪ, ತಾಲ್ಲೂಕು ಪಂಚಾಯಿತಿ  ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ತಾಲ್ಲೂಕು ಪಂಚಾಯಿತಿ  ಮಾಜಿ ಸದಸ್ಯ ಗಂಗಾಧರ್‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ  ಸದಸ್ಯ ಹುಚ್ಚೇಗೌಡ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಮೀವುಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾನಸಾ, ಮಾಜಿ ಅಧ್ಯಕ್ಷ ಎತ್ತಿನಮನೆ ಲಕ್ಷ್ಮಣ, ಮುಖಂಡ ಕೇಶವಮೂರ್ತಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.