ಗುರುವಾರ , ಮೇ 13, 2021
24 °C

ಚಂದ ಪದ್ಯ

ಚಂದ್ರಿಕಾ ಹೆಗಡೆ Updated:

ಅಕ್ಷರ ಗಾತ್ರ : | |

ಹೊಟ್ಟೆ-ಕೊಟ್ಟೆ

ಪಕ್ಕದ ಮನೆಯಲಿ

ಹಬ್ಬಕೆ ಕರೆದರೆ

ಸುಬ್ಬಂಗೆರಡು ಹೊಟ್ಟೆ

ಲೆಕ್ಕ ಇಡದೆ ತಿನ್ನುತ್ತಾನೆ

ನಾಲ್ಕ್ ನಾಲ್ಕ್ ಕಡುಬಿನ ಕೊಟ್ಟೆ!

ಪಾಪಚ್ಚಿ

ಅಯ್ಯೋ ಪಾಪ ಅಳ್ತಾ ಇತ್ತು

ಪ್ಯಾಂ... ಪ್ಯಾಂ... ಎಂದು ಪಾಪಚ್ಚಿ

ಅಮ್ಮನು ಬಂದು ಲಾಲಿ ಹಾಡಲು

ಮಲ್ಕೊಂಡು ಬಿಡ್ತು ಕಣ್ಮುಚ್ಚಿ.

ಗಟ್ಟಿ ರೊಟ್ಟಿ

ತಟ್ಟಿ ತಟ್ಟಿ ಅಕ್ಕಿರೊಟ್ಟಿ

ತಿನ್ನಲು ಕೊಟ್ಟಳು ಅಜ್ಜಿ.

ಮುಟ್ಟಿ ನೋಡಿ ಮೂತಿ ತಿರುವಿ

ಓಡಿ ಹೋದಳು ಪುಟ್ಟಿ-

ರೊಟ್ಟಿ ಬಹಳ ಗಟ್ಟಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.