ತಾಜಾತನದ ಚರ್ಮಕ್ಕೆ...

ಬಿಸಿಲು ನೆತ್ತಿಗೇರುತ್ತಿದ್ದಂತೆ, ತಾಪ ಹೆಚ್ಚುತ್ತಲೇ ಹೋಗುತ್ತದೆ. ತಾಪಕ್ಕೆ ಉಡುಗೆಯ ಉದ್ದಗಲಗಳು ಕಡಿಮೆಯಾಗುವುದು ಸಹಜ. ಆದರೆ ಆಗ ಚರ್ಮ ಸುಡುವ ಸಾಧ್ಯತೆಯೇ ಹೆಚ್ಚು.

ಬೇಸಿಗೆಗೆ ಚರ್ಮವು ತೇವಾಂಶ ಕಳೆದುಕೊಂಡು, ಶುಷ್ಕವಾಗುತ್ತದೆ. ಶುಷ್ಕ ಚರ್ಮದಿಂದಾಗಿಯೇ ತುರಿಕೆಯುಂಟಾಗುತ್ತದೆ. ಬೆವರಿನಿಂದಾಗಿ ಕೆಲವೊಮ್ಮೆ ಗಾಯಗಳೂ ಉಂಟಾಗುತ್ತವೆ. ಇವನ್ನೆಲ್ಲ ತಡೆಯುತ್ತವೆ ಎಂದು ಹೇಳುವ ಅನೇಕ ಪ್ರಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಚರ್ಮದ ಆರೋಗ್ಯದಿಂದಲೇ ಸೌಂದರ್ಯ. ಸೌಂದರ್ಯಕ್ಕಾಗಿ ಅಲ್ಲ, ಆರೋಗ್ಯಕ್ಕಾಗಿ ಎಂದು ಹೇಳುವ ವಿಎಲ್ಸಿಸಿ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಮಧ್ಯಮ ವರ್ಗದವರಿಗೆ ಕೈಗೆಟಕುವ ಬೆಲೆಯಲ್ಲಿ ದೊರೆಯುವಂತೆ 95 ರೂಪಾಯಿಗಳಿಂದ 350 ರೂಪಾಯಿಗಳವರೆಗೆ ಪ್ಯಾಕುಗಳನ್ನು ಸಿದ್ಧಗೊಳಿಸಿದೆ.

ಫೇಸ್ ವಾಶ್, ಸ್ಕ್ರಬ್ ಮುಂತಾದವುಗಳೊಂದಿಗೆ ಸನ್ಸ್ಕ್ರೀನ್ ಲೋಷನ್, ಕ್ರೀಮ್ಗಳನ್ನು ಬಿಡುಗಡೆಗೊಳಿಸಿದೆ. ಬೆವರು ಮುಕ್ತ ಎಂದು ಪ್ರಚಾರ ನೀಡಿರುವ ಕಂಪೆನಿಯು ಸ್ವೆಟ್ ಫ್ರೀ ಸನ್ ಬ್ಲಾಕ್ ಲೋಷನ್ ಅನ್ನು ಬಿಡುಗಡೆ ಗೊಳಿಸಿದೆ.

ಸೂರ್ಯನ ಪ್ರಖರ ಬೆಳಕಿನಿಂದಾಗಿ ಯುವಿಎ ಮತ್ತು ಯುವಿಬಿ ಕಿರಣಗಳು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಈ ಕಿರಣಗಳಿಂದಾಗಿ ಚರ್ಮದ ವರ್ಣವು ಕಂದು ಬಣ್ಣಕ್ಕೆ ತಿರುಗುತ್ತದೆ. ಚರ್ಮದ ವರ್ಣ ತಿಳಿಗೊಳಿಸಲು ಈ ಉತ್ಪನ್ನಗಳು ಸಹಾಯಕವಾಗಿವೆ ಎಂಬುದು ವಿ.ಎಲ್.ಸಿ.ಸಿ. ಭರವಸೆಯಾಗಿದೆ.

ಲೋಟಸ್ ಹರ್ಬಲ್ಸ್ ಕಂಪೆನಿ ಸಹ ವೈಟ್ ಗ್ಲೋ ಎಂಬ ಬಾಡಿ ಲೋಷನ್ ಅನ್ನು ಬಿಡುಗಡೆಗೊಳಿಸಿದೆ. ಬಿಸಿಲಿಗೆ ಚರ್ಮ ಕಪ್ಪಾಗಿಸಬೇಡಿ. ಚರ್ಮವನ್ನು ಬೆಳ್ಳಗೆ ಬೆಳಗಿಸಲು ಎಂದರ್ಥ ನೀಡುವಂತೆ ವೈಟ್ನಿಂಗ್ ಅಂಡ್ಬ್ರೈಟ್ನಿಂಗ್ ಬಾಡಿ ಲೋಷನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. 300 ಎಂ.ಎಲ್. ಲೋಷನ್ ಬೆಲೆ 295 ರೂಪಾಯಿ ಎಂದು ಕಂಪೆನಿ ಹೇಳಿದೆ.

ಸೂರ್ಯನಿಗೆ ಅಂಜಿ, ಕೈಗವಸುಗಳನ್ನು ತೊಟ್ಟು, ಮುಖವನ್ನು ಸ್ಕಾರ್ಫಿನಿಂದ ಸುತ್ತಿಕೊಂಡು ಓಡಾಡುವುದನ್ನು ನಿಲ್ಲಿಸಿ. ಈ ಬಾಡಿ ಲೋಷನ್ ಬಳಸಿ ಆರಾಮದಿಂದಿರಿ ಎಂದು ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.