ಸೋಮವಾರ, ಮಾರ್ಚ್ 8, 2021
18 °C

ಜನನಿ ಸುರಕ್ಷಾಗೆ ಅನುದಾನದ ಕೊರತೆ

ಪ್ರಜಾವಾಣಿ ವಾರ್ತೆ/ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಜನನಿ ಸುರಕ್ಷಾಗೆ ಅನುದಾನದ ಕೊರತೆ

ಗಜೇಂದ್ರಗಡ: ತಾಯಂದಿರ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ `ಜನನಿ ಸುರಕ್ಷಾ~ ಯೋಜನೆಗೆ ಆಯ್ಕೆಗೊಂಡ ಅರ್ಹ ನೂರಾರು ಫಲಾನುಭವಿ ಗಳಿಗೆ ಸಹಾಯ ಧನ ದೊರೆತಿಲ್ಲ. ಪರಿಣಾಮ ಸರ್ಕಾರದ ಸಹಾಯ ಧನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳು ಕೈಕೈಹಿಸುಕಿಕೊಳ್ಳು ವಂತಾಗಿದೆ.ರಾಜ್ಯದಲ್ಲಿ ಹೆಚ್ಚುತ್ತಿರುವ ತಾಯಂದಿರ ಮತ್ತು ಶಿಶು ಮರಣ ಪ್ರಮಾಣಕ್ಕೆ ಕಡಿವಾಣ ಹಾಕುವುದರ ಜೊತೆಗೆ ಬಡವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ `ಜನನಿ ಸುರಕ್ಷಾ~ ಎಂಬ ಮಹತ್ವಾ ಕಾಂಕ್ಷಿ  ಯೋಜನೆಯನ್ನು ಜಾರಿಗೊಳಿಸಿತು.`ಜನನಿ ಸುರಕ್ಷಾ~ ಯೋಜನೆ ಜಾರಿಗೊಳ್ಳುವು ದಕ್ಕಿಂತ ಪೂರ್ವದಲ್ಲಿ ರೋಣ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆಯರು ಆರೋಗ್ಯ ಕೇಂದ್ರಗಳಿಗೆ ಸಮರ್ಪಕ ಚಿಕಿತ್ಸೆ ಪಡೆಯದೇ ಮನೆಯಲ್ಲಿಯೇ ಹೆರಿಗೆಗೆ ಒಳಪಡುತ್ತಿದ್ದರು.ಪರಿಣಾಮ ಕೆಲವೊಮ್ಮೆ ಅವೈ ಜ್ಞಾನಿಕ ಹೆರಿಗೆ ಪದ್ದತಿಯಿಂದಾಗಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದ್ದವು. ಯೋಜನೆಯಡಿ ಹೆರಿಗೆ ಮಾಡಿಸಿ ಕೊಂಡ ಗರ್ಭಿಣಿಯರಿಗೆ ಸರ್ಕಾರ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ1,500 ರ ವರೆಗೆ (ವಿವಿಧ ಬಗೆಯ ಹೆರಿಗೆಗೆ ಸಂಬಂಧಿಸಿದಂತೆ) ಸಹಾಯ ಧನ ನೀಡಲಾರಂಭಿಸಿತು.ಇದರಿಂದ ಆಕರ್ಷಿತರಾದ ಗರ್ಭಿಣಿಯರು ಗರ್ಭಾವಸ್ಥೆಯ ಆರಂಭದ ದಿನಗಳಿಂದಲ್ಲೂ ಸರ್ಕಾರಿ ಆಸ್ಪತ್ರೆ ಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕೇಂದ್ರಗಳಲ್ಲಿಯೇ ಹೆರಿಗೆಗೆ ಮುಂದಾಗುತ್ತಿದ್ದಾರೆ. ಆದರೆ, ಯೋಜನೆಯಡಿಯಲ್ಲಿನ ಸಹಾಯ ಧನ ಸಕಾಲಕ್ಕೆ ಫಲಾನುಭವಿಗಳ ಕೈಸೇರದಿರುವುದು ಫಲಾನುಭವಿಗಳಲ್ಲಿ ಬೇಸರ ಮೂಡಿಸಿದೆ. 275 ಫಲಾನುಭವಿಗಳಿಗೆ ಸಹಾಯ ಧನವಿಲ್ಲ: ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಒಟ್ಟು 275 ಫಲಾನುಭವಿಗಳಿಗೆ `ಜನನಿ ಸುರಕ್ಷಾ~ ಯೋಜನೆಯಡಿಯಲ್ಲಿ ಸಹಾಯ ಧನ ದೊರೆತಿಲ್ಲ. ಇದರಲ್ಲಿ 27 ಪರಿಶಿಷ್ಟ ಜಾತಿ, 04 ಪರಿಶಿಷ್ಟ ಪಂಗಡ ಹಾಗೂ 244 ಇತರೆ ವರ್ಗದ ಫಲಾನುಭವಿಗಳಿದ್ದಾರೆ. ಈ ಎಲ್ಲ ಫಲಾನುಭವಿ ಗಳಿಗೆ ಸರ್ಕಾರ ಒಟ್ಟು 2,10,300 ರೂ. ಸಹಾಯ ಧನ ನೀಡಬೇಕಾಗಿದೆ.  ಈವರೆಗೂ   ಬಿಡಿಗಾಸು ದೊರೆಯದಿರುವುದು ಫಲಾನುಭವಿ ಗಳ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಹತೆ: ಬಿಪಿಎಲ್ ಪಡಿತರ ಹೊಂದಿದ ಎಲ್ಲ ವರ್ಗದ ಗರ್ಭಿಣಿಯರಿಗೆ ದೊರೆಯುತ್ತದೆ. ವರ್ಷಕ್ಕೆ 17,000 ವಾರ್ಷಿಕ ಆದಾಯ ಹೊಂದಿ ರಬೇಕು. ಮಹಿಳೆ19 ವರ್ಷ ವಯಸ್ಸಾದ ನಂತರ ಗರ್ಭಿಣಿಯಾದರೆ 2 ಜೀವಂತ ಜನನಗಳಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಹೆರಿಗೆಗೆ ಮೊದಲು ಎರಡು ದನುರ್ವಾಯು ಲಸಿಕೆ ಹಾಗೂ ಕಬ್ಬಿನಾಂಶ ಮಾತ್ರೆ ಪಡೆದು ಕೊಳ್ಳಬೇಕು. ಗರ್ಭಿಣಿಯರು ಕನಿಷ್ಠ ಪಕ್ಷ ಮೂರು ಬಾರಿ ಯಾದರೂ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡಿ ರಬೇಕು.    ಸೇವಾ ಯೋಜನೆಗಳೇನು?: ಬಿಪಿಎಲ್ ಪಡಿತರ ಹೊಂದಿರುವ ಕಡು ಬಡ ಕುಟುಂಬಕ್ಕೆ ಸೇರಿದ ಗರ್ಭಿಣಿಯು ಮನೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ 500 ರೂ. ಆರೋಗ್ರ ಕೇಂದ್ರ/ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡ ಮಹಿಳೆಗೆ 700 ರೂ. (500+200) ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಆಸ್ಪತ್ರೆಯ ಸೇವೆ ಗರ್ಭಿಣಿಗೆ ಅಗತ್ಯವಿದ್ದಲ್ಲಿ 200 ಸಾರಿಗೆ ಭತ್ಯ ನೀಡಲಾಗುತ್ತದೆ.  ಸಮುದಾಯ ಆರೋಗ್ರ ಕೇಂದ್ರಗಳಲ್ಲಿ ಗಂಡಾಂತರ ಹೆರಿಗೆ ಮಾಡಿಸಲು ಸರ್ಕಾರಿ ವೈದ್ಯರ ಸೇವೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಂಡು ಸಿಜೇರಿಯನ್ (ಶಸ್ತ್ರ ಚಿಕಿತ್ಸೆ) ಮಾಡಿಸಿಕೊಂಡ ಗರ್ಭಿಣಿ ಮಹಿಳೆಯರಿಗೆ 1,500 ರೂ. ಉದರ ದರ್ಶಕ/ ಟ್ಯುಬೆಕ್ಟಮಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಅಂತವರಿಗೆ 175 ರೂ. ಪರಿಹಾರ ಧನ ನೀಡ ಲಾಗುವುದು. ತಕ್ಷಣ ಅರ್ಹ ಗರ್ಭಿಣಿಗೆ ಹಣ ವಿತರಿಸಲೆಂದು ಪ್ರತಿಯೊಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಬಳಿ 5,000 ರೂ. ಮುಂಗಡ ಹಣ ಇರುತ್ತದೆ. ಈ ಪೈಕಿ 1,500 ರೂ. ನಗದಾಗಿ ಯಾವಾಗಲೂ ಇರುತ್ತದೆ.ಸರ್ಕಾರಿ ನೌಕರರು ವೈದ್ಯಕೀಯ ಸೇವೆ ಪಡೆಯಲು ಅನುಮೋದಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಯೋಜನೆಯಡಿ ಫಲಾನುಭವಿಗಳು ಹೆರಿಗೆ ಸೌಲಭ್ಯ ಪಡೆಯಬಹುದು ಎಂದು ಇಲಾಖೆ ಹೇಳುತ್ತಿದೆಯಾದರೂ ಯಾವುದು ಕಾರ್ಯರೂಪಕ್ಕೆ ಬಾರದಿರುವುದು ಯೋಜನೆಗೆ ಹಿನ್ನಡೆಯನ್ನುಂಟು ಮಾಡಿದೆ.ಫಲಾನುಭವಿಗಳಿಗೆ ವಿತರಿಸಬೇಕಾದ  ಅನುದಾನ ವನ್ನು ಸರ್ಕಾರ ಬಿಡುಗಡೆ ಗೊಳಿಸಿಲ್ಲ. ಅನುದಾನ ದೊರೆತ ಕೂಡಲೇ  ವಿತರಿಸಲಾ ಗುವುದು ಎಂದು ರೋಣ ತಾಲ್ಲೂಕು `ಜನನಿ ಸುರಕ್ಷಾ~ ಯೋಜನಾಧಿಕಾರಿ ಸಿ.ಬಿ.ಮೆಟ್ಟಿಕಲ್ಲಿ `  ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.