ಬೆಂಗಳೂರು: ಕಲಾಸಕ್ತರಾಗಿದ್ದ ಅಂಗೀರಸ ಟೊಟೋ ವೆಲ್ಲಾನಿ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಟೊಟೋ ಕಲಾ ಪುರಸ್ಕಾರದ 2012ರ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ನಡೆಯಿತು.

ಕನ್ನಡ ಸೃಜನಾತ್ಮಕ ಬರಹದ ವಿಭಾಗದಲ್ಲಿ ಕವಿತೆಗಳಿಗಾಗಿ ಧಾರವಾಡದ ಕಾವ್ಯ ಪಿ. ಕಡಮೆ, ಇಂಗ್ಲಿಷ್ ಸೃಜನಾತ್ಮಕ ಬರಹ ವಿಭಾಗದಲ್ಲಿ ನಾಟಕಕ್ಕಾಗಿ ರಮಣೀಕ್ ಸಿಂಗ್ ಹಾಗೂ ಕವಿತೆಗಳಿಗಾಗಿ ಜೋಶು ಮುಯಿವಾ ಅವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಛಾಯಾಚಿತ್ರ ವಿಭಾಗದ ಪ್ರಶಸ್ತಿಗಳನ್ನು ಗುರಗಾಂವ್ನ ಅದಿಲ್ ಹಸನ್ ಹಾಗೂ ಬೆಂಗಳೂರಿನ ಇಂದು ಆಂಟನಿ ಅವರಿಗೆ ಮತ್ತು ಸಂಗೀತ ವಿಭಾಗದ ಪ್ರಶಸ್ತಿಯನ್ನು ನವದೆಹಲಿಯ ಪೀಟರ್ ಕ್ಯಾಟ್ ರೆಕಾರ್ಡಿಂಗ್ ಕಂಪೆನಿಗೆ ಪ್ರಶಸ್ತಿ ನೀಡಲಾಯಿತು. ಸಂಗೀತ ವಿಭಾಗದ ಪ್ರಶಸ್ತಿಯು ರೂ 50 ಸಾವಿರ ಮತ್ತು ಉಳಿದ ಎಲ್ಲಾ ವಿಭಾಗಗಳ ಪ್ರಶಸ್ತಿಗಳೂ ರೂ 25 ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.

ಅಂಕಣಕಾರ ಜಯತೀರ್ಥ ರಾವ್ಬಹುಮಾನ ವಿತರಿಸಿದರು. ಅಂತಿಮ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ತಮ್ಮ ಬರಹಗಳನ್ನು ವಾಚಿಸಿದರು. ಬಹುಮಾನಿತ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಸಂಗೀತ ವಿಭಾಗದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ ಧ್ರುವ್ ವಿಶ್ವನಾಥ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 8 ವರ್ಷಗಳಿಂದ ಬರಹ, ಛಾಯಾಚಿತ್ರ, ಸಂಗೀತ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿರುವ ಟೊಟೋ ಕಲಾ ಪ್ರತಿಷ್ಠಾನ ಈ ವರ್ಷದಿಂದ ಕನ್ನಡ ಬರಹಗಳಿಗೂ ಪ್ರವೇಶ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.