ಕೂಡ್ಲಿಗಿ (ಬಳ್ಳಾರಿ): ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭಾನುವಾರ ಮಧ್ಯಾಹ್ನ ತೈಲ ಟ್ಯಾಂಕರ್ ಉರುಳಿಬಿದ್ದು, ಸೋರಿಹೋಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ಗೆ ಜನ ಮುಗಿಬಿದ್ದ ಘಟನೆ ನಡೆದಿದೆ.

ಹಾಸನದಿಂದ ಹೊಸಪೇಟೆಗೆ ಹೊರಟಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಟ್ಯಾಂಕರ್ನಿಂದ ಸೋರುತ್ತಿದ್ದ ಡೀಸೆಲ್, ಪೆಟ್ರೋಲ್ ಅನ್ನು ಜನತೆ ಮುಗಿಬಿದ್ದು ಕೈಗೆ ಸಿಕ್ಕ ಪಾತ್ರೆ, ಕ್ಯಾರಿಯರ್, ಡಬ್ಬಿಗಳಲ್ಲಿ ತುಂಬಿಕೊಂಡು ಹೋದರು.

ಟ್ಯಾಂಕರ್ನಲ್ಲಿ ಸುಮಾರು 20,000 ಲೀ. ಡೀಸೆಲ್ ಹಾಗೂ ಪೆಟ್ರೋಲ್ ಸಾಗಣೆಯಾಗುತ್ತಿತ್ತೆಂದು ಪೊಲೀಸ್ ಮೂಲಗಳು ತಿಳಿಸಿವೆ. ಟ್ಯಾಂಕರ್ನಿಂದ ಅಂದಾಜು ಶೇ 30-35ರಷ್ಟು ಡೀಸೆಲ್ ಹಾಗೂ ಪೆಟ್ರೋಲ್ ಸೋರಿಕೆಯಾಗಿದೆ ಎನ್ನಲಾಗಿದೆ.

ಅಗ್ನಿಶಾಮಕ ದಳದವರು ಟ್ಯಾಂಕರನ್ನು ಎತ್ತಿ ನಿಲ್ಲಿಸಿ, ಇಂಧನ ಸೋರಿಕೆಯನ್ನು ತಡೆಗಟ್ಟಿದ್ದಾರೆ. ಸ್ಥಳಕ್ಕೆ ಸಿಪಿಐ ಓ.ಬಿ.ಕಲ್ಲೇಶಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.