ಪೋರ್ಟ್ ಆಫ್ ಸ್ಪೇನ್ (ಐಎಎನ್ಎಸ್): ಕೆರಿಬಿಯನ್ ಕಡಲು ಪ್ರದೇಶದ ದ್ವೀಪ ರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬಾಗೊದಾದ್ಯಂತ ಶನಿವಾರ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.

ಇಲ್ಲಿನ ಮಹಾತ್ಮ ಗಾಂಧಿ ಸಂಸ್ಕೃತಿ ಮತ್ತು ಸಹಕಾರ ಕೇಂದ್ರದಲ್ಲಿ ನಡೆದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಮಲಯ್ ಮಿಶ್ರಾ ಪಾಲ್ಗೊಂಡಿದ್ದರು. ಇಲ್ಲಿ ಈ ಹಬ್ಬಕ್ಕೆ ಸರ್ಕಾರಿ ರಜೆ ಇಲ್ಲದ ಕಾರಣ, ಸರ್ಕಾರಿ ರಜೆ ದಿನವಾದ ಭಾನುವಾರದಂದು ಹಬ್ಬವನ್ನು ಆಚರಿಸಲಾಯಿತು.

`ಈ ಹಬ್ಬದ ನೆಪದಲ್ಲಿ ಹಿಂದೂಗಳೆಲ್ಲ ಒಟ್ಟಿಗೆ ಸೇರುತ್ತೇವೆ. ಮಕ್ಕಳ ಭವಿಷ್ಯದ ಕುರಿತು ಚಿಂತಿಸಲು ಹೋಳಿ ಹಬ್ಬ ನೆರವಾಗುತ್ತದೆ~ ಎಂದು ಟ್ರಿನಿಡಾಡ್ ಮತ್ತು ಟೊಬಾಗೊ ರಾಷ್ಟ್ರದ ಪ್ರಧಾನಿ ಕಮಲಾ ಪ್ರಸಾದ್ ಬಸ್ಸೇಸಾರ್ ಅಭಿಪ್ರಾಯಪಟ್ಟಿದ್ದಾರೆ

`ಶತಮಾನದ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇಲ್ಲಿಗೆ ಬಂದು ನೆಲಸಿದ ಪೂರ್ವಿಕರಿಗೆ ಈ ಹಬ್ಬದ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ~ ಎಂದು ಹಣಕಾಸು ಸಚಿವ ವಿನ್ಸ್ಟನ್ ಡೂಕೆರಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.