ಶುಕ್ರವಾರ, ಏಪ್ರಿಲ್ 16, 2021
20 °C

ಡ್ರಾ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಸಿಎ ಇಲೆವೆನ್ ಮತ್ತು ಬರೋಡ ಕ್ರಿಕೆಟ್ ಸಂಸ್ಥೆ ತಂಡಗಳ ನಡುವಿನ ಶಫಿ ದಾರಾಶಾ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯ ನಿರೀಕ್ಷಿತ ಡ್ರಾದಲ್ಲಿ ಅಂತ್ಯ ಕಂಡಿತು.ಆಲೂರು ಮೈದಾನದಲ್ಲಿ ನಡೆದ ಪಂದ್ಯ ಶನಿವಾರ ಡ್ರಾದಲ್ಲಿ ಕೊನೆಗೊಂಡಾಗ ಬರೋಡ ತಂಡ ತನ್ನ ಎರಡನೇ ಇನಿಂಗ್ಸ್ ನಲ್ಲಿ 52.5 ಓವರ್‌ಗಳಲ್ಲಿ 4 ವಿಕೆಟ್‌ಗೆ 171 ರನ್ ಗಳಿಸಿತ್ತು. ಮಳೆಯಿಂದಾಗಿ ಪಂದ್ಯಕ್ಕೆ ಬೇಗನೇ ತೆರೆ ಎಳೆಯಲಾಯಿತು. ಕೆಎಸ್‌ಸಿಎ ಇಲೆವೆನ್ ಮೊದಲ ಇನಿಂಗ್ಸ್‌ನಲ್ಲಿ 367 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು.ಸಂಕ್ಷಿಪ್ತ ಸ್ಕೋರ್: ಬರೋಡ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 120.2 ಓವರ್‌ಗಳಲ್ಲಿ 354 ಮತ್ತು ಎರಡನೇ ಇನಿಂಗ್ಸ್ 52.5 ಓವರ್‌ಗಳಲ್ಲಿ 4 ವಿಕೆಟ್‌ಗೆ 171 (ಕೇದಾರ್ ದೇವಧರ್ ಔಟಾಗದೆ 60, ಅಂಕಿತ್ ಚವಾಣ್ ಔಟಾಗದೆ 36, ಕೆ. ಗೌತಮ್ 65ಕ್ಕೆ 3). ಕೆಎಸ್‌ಸಿಎ ಇಲೆವೆನ್: ಮೊದಲ ಇನಿಂಗ್ಸ್ 148 ಓವರ್‌ಗಳಲ್ಲಿ 9 ವಿಕೆಟ್‌ಗೆ 367, ಫಲಿತಾಂಶ: ಪಂದ್ಯ ಡ್ರಾ (ಎಸ್‌ಜೆಸಿಇ ಮೈದಾನ, ಮೈಸೂರು) ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್ 97.1 ಓವರ್‌ಗಳಲ್ಲಿ 273 ಮತ್ತು ಎರಡನೇ ಇನಿಂಗ್ಸ್ 80.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 367 (ಕೆ.ಎಲ್. ರಾಹುಲ್ ಬ್ಯಾಟಿಂಗ್ ಔಟಾಗದೆ 200, ಕರುಣ್ ನಾಯರ್ ಔಟಾಗದೆ 156) ರಾಜಸ್ತಾನ ಕ್ರಿಕೆಟ್ ಅಕಾಡೆಮಿ: ಮೊದಲ ಇನಿಂಗ್ಸ್ 126.5 ಓವರ್‌ಗಳಲ್ಲಿ 465. ಫಲಿತಾಂಶ: ಪಂದ್ಯ ಡ್ರಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.