ಗುರುವಾರ , ಮೇ 6, 2021
27 °C

ತಮಿಳುನಾಡು: `ಅಮ್ಮ ' ಶುದ್ಧ ನೀರು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ(ಪಿಟಿಐ): ಮಧ್ಯಮ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯಲ್ಲಿ ಕುಡಿಯುವ ನೀರು ಒದಗಿಸಲು ಜಯಲಲಿತಾ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದಾದ್ಯಂತ `ಅಮ್ಮ ಮಿನರಲ್ ವಾಟರ್' ನೀರು ಶುದ್ಧೀಕರಣದ 9 ಘಟಕಗಳನ್ನು  ಸ್ಥಾಪಿಸಲು ಮುಂದಾಗಿದೆ. ಈ ಘಟಕಗಳಲ್ಲಿ ತಯಾರಿಸಲಾದ ಪ್ರತಿ ಲೀಟರ್ ನೀರಿನ ಬಾಟಲಿಗೆ ರೂ10 ದರ ವಿಧಿಸಲಾಗಿದೆ.



`ಈ ನೀರು ಶುದ್ಧೀಕರಣ ಘಟಕಗಳನ್ನು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಆರಂಭಿಸಲಾಗುವುದು. ಜನರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಈ ಯೋಜನೆ ರೂಪಿಸಲಾಗಿದೆ' ಎಂದು ಮುಖ್ಯಮಂತ್ರಿ ಜಯಲಲಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಈಚೆಗೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯವರು ಕುಡಿಯುವ ನೀರು ನಿಯಮಾವಳಿ ಪ್ರಕಾರ ಪರವಾನಗಿ ಇಲ್ಲದೆ ನಡೆಯುತ್ತಿದ್ದ 92 ನೀರಿನ ಘಟಕಗಳನ್ನು ಮುಚ್ಚಿಸಿದ್ದರು. ಇದರಿಂದ ಚೆನ್ನೈನ ನಾಗರಿಕರು ನೀರಿಗಾಗಿ ಪರಿತಪಿಸುವಂತಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.