ತರೀಕೆರೆ: ತಾಲ್ಲೂಕಿನ ವಿವಿಧ ಭಾಗಗಳಿಂದ ಪಟ್ಟಣದ ಕಾಲೇಜು ಮತ್ತು ಶಾಲೆಗಳಿಗೆ ಹಾಗೂ ತರಬೇತಿ ಸಂಸ್ಥೆಗಳಿಗೆ ಪ್ರತಿ ದಿನ ಸಂಚರಿಸುವ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೆ ಪರಿತಪಿಸುವುದನ್ನು ತಪ್ಪಿಸಲು ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳನ್ನು ಓಡಿಸುವಂತೆ ಒತ್ತಾಯಿಸಿ ಶುಕ್ರವಾರ ಇಲ್ಲಿನ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿಗಳ ಸೇನೆ ಪ್ರತಿಭಟನೆ ನಡೆಸಿತು.

ತಾಲ್ಲೂಕಿನ ಬಳ್ಳಾವರ, ಕೃಷ್ಣಾಪುರ, ಗುಳ್ಳದಮನೆ, ಮಲ್ಲಿಗೇನಹಳ್ಳಿ, ನಂದಿಹೊಸಳ್ಳಿ, ಸುಣ್ಣದಹಳ್ಳಿ, ಬೈರಾಪುರ, ಕರಕುಚ್ಚಿ ಎ ಮತ್ತು ಬಿ ಕಾಲೊನಿ, ಬರಗೇನಹಳ್ಳಿ, ಕ್ವಾರ್ಟರ್ಸ್ ದುಗ್ಲಾಪುರ, ಎ.ರಂಗಾಪುರ, ಲಕ್ಷ್ಮಿ ಸಾಗರ, ಇಟ್ಟಿಗೆ, ಹಾದಿಕೆರೆ, ಮಿಲ್ಲೇನಹಳ್ಳಿ, ನಾಗೇನಹಳ್ಳಿ, ಕುಂಟಿನಮಡು, ನೇರಲಕೆರೆ, ಹುಣಸಘಟ್ಟ ತಾಂಡ್ಯಾ ಮತ್ತು ಹೊಸಳ್ಳಿತಾಂಡ್ಯ, ಕುಡ್ಲೂರು, ಶಿವಪುರ, ಮುಂಡ್ರೆ, ಚಾಕೋನಹಳ್ಳಿ, ಚಟ್ನಳ್ಳಿ, ಕೋರನಹಳ್ಳಿ ಬೆಟ್ಟದಹಳ್ಳಿ, ಗೇರಮರಡಿ ಮತ್ತು ಹಳಿಯೂರು ಗೇಟ್ ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭಿಸುವಂತೆ ಮನವಿ ಮಾಡಿದರು.
ಸಂಘದ ಸಂಚಾಲಕ ರಾಘವೇಂದ್ರ, ಮಾರುತಿ, ಕಾರ್ಯದರ್ಶಿ ಮೋಹನ್, ಉಪಾಧ್ಯಕ್ಷ ಮುಬಾರಕ್, ನಂದೀಶ್, ಮಂಜುನಾಥ್, ವಸಂತ್, ತಿಪ್ಪೇಶ್ ಮತ್ತು ವಿವಿಧ ಶಾಲಾ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.