ಮಂಗಳವಾರ, ಮೇ 11, 2021
20 °C

ತೀಸ್ತಾ ವಿರುದ್ಧ ಹೆಚ್ಚಿನ ತನಿಖೆ ಬೇಡ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಆಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಂಡರವಾಡಾದಲ್ಲಿ 2002ರ ಗಲಭೆಗಳ ಸಂದರ್ಭದಲ್ಲಿ ಅಕ್ರಮ ಶವೋತ್ಖನನದಲ್ಲಿ ವಹಿಸಿದ ಪಾತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ವಿರುದ್ಧ ಹೂಡಲಾಗಿರುವ ಖಟ್ಲೆ ಒಂದು ದುರುದ್ಧೇಶದ ಪ್ರಕರಣ ಎಂದು ಶುಕ್ರವಾರ ಛೀಮಾರಿ ಹಾಕಿದ ಸುಪ್ರೀಂಕೋರ್ಟ್, ಸೆತಲ್ವಾಡ್ ವಿರುದ್ಧ ಹೆಚ್ಚಿನ ತನಿಖೆ ನಡೆಸದಂತೆ ಗುಜರಾತ್ ಸರ್ಕಾರಕ್ಕೆ ಆಜ್ಞಾಪಿಸಿತು.ಏನಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಮೇಲ್ನೋಟಕ್ಕೆ ಅಪರಾಧ ಕಂಡು ಬಂದಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.~ಅಪರಾಧ ಮೇಲ್ನೋಟಕ್ಕೆ ಕಂಡು ಬಂದಿದೆ~ ಎಂದು ಹಿರಿಯ ವಕೀಲ ರವಿಶಂಕರ ಪ್ರಸಾದ್ ನ್ಯಾಯಮೂರ್ತಿಗಳಾದ ಆಫ್ತಾಬ್ ಆಲಂ ಮತ್ತು ರಂಜನಾ ಪ್ರಕಾಶ ದೇಸಾಯಿ ಅವರನ್ನು ಒಳಗೊಂಡ ಪೀಠವು ಹೇಳಿತು.~ನೀವು ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು (ಎಫ್ ಐಆರ್) ಓದಿರಬೇಕು. ಈ ಪ್ರಥಮ ಮಾಹಿತಿ ವರದಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ~ ಎಂದು ಪೀಠವು ಹೇಳಿದಾಗ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದರು.~ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಿದ ಬಗೆ ಮತ್ತು ಅದರಲ್ಲಿ ಇರುವ ಆರೋಪಗಳ ಬಗ್ಗೆ ನಾವು ಅಸಮಾಧಾನಗೊಂಡಿದ್ದೇವೆ. ಈ ಎಫ್ ಐ ಆರ್ ಮಾನವ ಹಕ್ಕುಗಳಿಗೆ ವಿರುದ್ಧವಾದುದು~ ಎಂದು ಪೀಠವು ಹೇಳಿತು.ಗುಜರಾತ್ ಹೈಕೋರ್ಟ್ ತಮ್ಮ ವಿರುದ್ಧ ಕಳೆದ ವರ್ಷ ಮೇ 27ರಂದು ನೀಡಿದ ತೀರ್ಪಿನ ವಿರುದ್ಧ ಸೆತಲ್ವಾಡ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಿಚಾರಣೆಗೆ ಎತ್ತಿಕೊಂಡಿತ್ತು.ಪನಂ ನದಿಯ ಬಳಿ ಸ್ಮಶಾನದಲ್ಲಿ ಶವೋತ್ಖನನ ನಡೆಸಿದ್ದರ ವಿರುದ್ಧ ರಾಜ್ಯದ ಪಂಚಮಹಲ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಸೆತಲ್ವಾಡ್ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ನ್ನು ರದ್ದು ಪಡಿಸಲು ನಿರಾಕರಿಸಿ ಗುಜರಾತ್ ಹೈಕೋರ್ಟ್ ಮೇ 27ರಂದು ನಿರಾಕರಿಸಿತ್ತು.ಪ್ರಾರಂಭದಲ್ಲಿ ಸೆತಲ್ವಾಡ್ ಅವರು ಪ್ರಕರಣದಲ್ಲಿ ಆರೋಪಿಯಾಗಿರಲಿಲ್ಲ. ಆದರೆ ತನಿಖೆಯ ವೇಳೆಯಲ್ಲಿ ಅವರ ಪಾತ್ರ ಬೆಳಕಿಗೆ ಬಂತು. ಆಕೆಯ ವಿರುದ್ಧದ ಆರೋಪಗಳನ್ನು ಸಮರ್ಥಿಸುವಂಹ ಸ್ವತಂತ್ರ ಸಾಕ್ಷಿಗಳಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಹೇಳಿತು.~ಪ್ರಕರಣವನ್ನು ಆಲಿಸಲು ನ್ಯಾಯಾಲಯ ಒಪ್ಪಿತು. ಆದರೆ ~ಇದೊಂದು ದುರುದ್ದೇಶದ ಪ್ರಕರಣ~ ಎಂದು ಹೇಳಿತು. ~ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಸ್ಥಗಿತಗೊಳಿಸುವಂತೆ  ನಾವು ಇಂದು ನಿಮಗೆ (ರಾಜ್ಯ ಸರ್ಕಾರಕ್ಕ) ಸೂಚಿಸುತ್ತಿದ್ದೇವೆ~ ಎಂದು ನ್ಯಾಯಾಲಯ ಹೇಳಿತು.ಈ ಹಂತದಲ್ಲಿ ಪ್ರಸಾದ್ ಅವರು ~ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಸೆತಲ್ವಾಡ್ ಅವರು ಆರೋಪಿ ಆಗಿ ಇಲ್ಲದೇ ಇದ್ದ ಸಮಯದಲ್ಲಿಯೇ ತನಿಖೆ ನಡೆಸಲಾಗಿತ್ತು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.