ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್ ಫೈನಲ್ಗೆ ಸೈನಾ ನೆಹ್ವಾಲ್
ನವದೆಹಲಿ (ಪಿಟಿಐ): ಒಲಿಂಪಿಕ್ಸ್ಗೆ ಸಿದ್ಧರಾಗುತ್ತಿರುವ ಭಾರತದ ಸೈನಾ ನೆಹ್ವಾಲ್ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಿಯು ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 21-17, 21-13ರಲ್ಲಿ ಚೀನಾದ ಲಿ ಹನ್ ಅವರನ್ನು ಸೋಲಿಸಿದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ನೆಹ್ವಾಲ್ಗೆ ಮೊದಲ ಗೇಮ್ನಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಒಂದು ಹಂತದಲ್ಲಿ 12-12 ಪಾಯಿಂಟ್ಗಳಿಂದ ಸಮಬಲ ಸಾಧಿಸಿದ್ದೇ ಅದಕ್ಕೆ ಸಾಕ್ಷಿ. ಬಳಿಕ 17-17ಕ್ಕೆ ಬಂದು ತಲುಪಿದರು. ಈ ಹಂತದಲ್ಲಿ ಮತ್ತಷ್ಟು ಚುರುಕಿನ ಆಟವಾಡಿದ ಸೈನಾ ಆ ನಂತರ ಎದುರಾಳಿಗೆ ಒಂದೇಒಂದು ಪಾಯಿಂಟ್ ಬಿಟ್ಟುಕೊಡಲಿಲ್ಲ.
ಆದರೆ ಎರಡನೇ ಗೇಮ್ನಲ್ಲಿ ಹೆಚ್ಚು ಕಷ್ಟಪಡಬೇಕಾಲಿಲ್ಲ. ಈ ಗೆಲುವಿಗಾಗಿ ಅವರು ಕೇವಲ 42 ನಿಮಿಷ ತೆಗೆದುಕೊಂಡರು.
ಸಿಂಧುಗೆ ಸೋಲು: ಆದರೆ ಭಾರತದ ಮತ್ತೊಬ್ಬ ಆಟಗಾರ್ತಿ ಪಿ.ವಿ.ಸಿಂಧು ಸೋಲು ಕಂಡರು. ಅವರು 12-21, 23-25ರಲ್ಲಿ ಮಾಜಿ ವಿಶ್ವ ಚಾಂಪಿಯನ್ ವಾಂಗ್ ಲಿನ್ಗೆ ಶರಣಾದರು.
ಪುರುಷರ ಡಬಲ್ಸ್ನಲ್ಲಿ ಭಾರತ ಎಸ್.ಸಂಜೀತ್ ಹಾಗೂ ಜಗದೀಶ್ ಯಾದವ್ 12-21, 6-21ರಲ್ಲಿ ಮಲೇಷ್ಯಾದ ಕಾಲ್ವಿನ್ ಜಿಯಾ ಹಾಗೂ ವೀ ಗ್ಲೀನ್ ತನ್ ಎದುರು ಪರಾಭವಗೊಂಡರು. ತರುಣ್ ಹಾಗೂ ಅರುಣ್ ಜೋಡಿ 22-24, 13-21ರಲ್ಲಿ ಇಂಡೋನೇಷ್ಯಾದ ರಿಕಿ ಕರಂದಾ ಹಾಗೂ ಮುಹಮ್ಮದ್ ಉಲಿನುಹಾ ಎದುರು ಸೋಲು ಕಂಡಿತು.
ಮಹಿಳೆಯರ ಡಬಲ್ಸ್ನಲ್ಲಿ ಅಪರ್ಣಾ ಬಾಲನ್ ಹಾಗೂ ಸಿಕ್ಕಿ ರೆಡ್ಡಿ 10-21, 13-21ರಲ್ಲಿ ಚೀನಾದ ಕ್ಸಿಯಾ ಹುವಾನ್ ಜಿನುಹಾ ಎದುರು ಪರಾಭವಗೊಂಡರು.
ಎಂಟರ ಘಟ್ಟಕ್ಕೆ ವರ್ಮ ಸಹೋದರರು: ಪುರುಷರ ಸಿಂಗಲ್ಸ್ನಲ್ಲಿ ವರ್ಮ ಸಹೋದರರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸೌರಭ್ ವರ್ಮ 18-21, 21-13, 22-20ರಲ್ಲಿ ಇಂಡೋನೇಷ್ಯಾದ ಅಲಮ್ಸ್ಯಾ ಯೂನಸ್ ಎದುರೂ, ಸಮೀರ್ ವರ್ಮ 21-18, 21-18ರಲ್ಲಿ ಮಲೇಷ್ಯಾದ ಟೆಕ್ ಜಿ ಸೂ ವಿರುದ್ಧವೂ ಗೆದ್ದರು.
ಭಾರತದ ಮತ್ತೊಬ್ಬ ಆಟಗಾರ ಸಾಯಿ ಪ್ರಣೀತ್ 13-21, 21-18, 22-20ರಲ್ಲಿ ಮಲೇಷ್ಯಾದ ಚೂಂಗ್ ಹನ್ ವಾಂಗ್ ಎದುರು ಗೆದ್ದು ಎಂಟರ ಘಟ್ಟ ತಲುಪಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.