ಜುಬಾ (ಎಎಫ್ಪಿ): ಬಂಡುಕೋರರ ವಿರುದ್ಧ ಕಠಿಣ ಕ್ರಮಕ್ಕೆ ದಕ್ಷಿಣ ಸುಡಾನ್ ಸೇನೆ ಮುಂದಾಗಿರುವುದರಿಂದ ಯುದ್ಧ ಭೀತಿ ಕಾಣಿಸಿಕೊಂಡಿದೆ.

ಶಾಂತಿ, ಸಂಧಾನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಶಾಂತಿ ಯತ್ನಗಳ ಹೊರತಾಗಿಯೂ ಹಿಂಸಾಚಾರ ಮುಂದುವರೆದಿದ್ದು ದೇಶದ ಪದಚ್ಯುತ ಉಪಾಧ್ಯಕ್ಷ ರೀಕ್ ಮಾಚಾರ್ ನೇತೃತ್ವದ ಬಂಡುಕೋರರನ್ನು ಬಗ್ಗುಬಡಿಯಲು ಹಾಲಿ ಅಧ್ಯಕ್ಷ ಸಾಲ್ವಾ ಕೀರ್ ನಿರ್ಧರಿಸಿದ್ದಾರೆ.

ದಕ್ಷಿಣ ಸುಡಾನ್ನಲ್ಲಿ ಒಂದು ವಾರದಿಂದ ಹಿಂಸಾಚಾರ ನಡೆಯು ತ್ತಿದ್ದು ಸಾವಿರಾರು ನಾಗರಿಕರು ತೊಂದರೆಗೆ ಒಳಗಾಗಿದ್ದಾರೆ.
ಬೊರ್ ಹಾಗೂ ಬೆಂಟಿಯು ಪಟ್ಟಣಗಳನ್ನು ತಮ್ಮ ಸೇನೆ ವಶಕ್ಕೆ ತೆಗೆದುಕೊಂಡಿದೆ ಎಂದು ಕೀರ್ ತಿಳಿಸಿದ್ದಾರೆ. ಮತ್ತೊಂದೆಡೆ ಈ ಸಂಬಂಧ ಹೇಳಿಕೆ ನೀಡಿರುವ ಸೇನಾ ವಕ್ತಾರ ಫಿಲಿಪ್ ಅಗ್ವೆರ್, ಬಂಡುಕೋರರ ಮೇಲೆ ಆಕ್ರಮಣ ನಡೆಸಲು ಸೇನೆ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.

‘ಬಂಡುಕೋರರು ಹಿಡಿತ ಸಾಧಿಸಿರುವ ಬೊರ್ ಪಟ್ಟಣವನ್ನು ಮತ್ತೆ ವಶಕ್ಕೆ ಪಡೆಯಲು ನಮ್ಮ ಸೇನೆ ಸನ್ನದ್ಧವಾಗಿದೆ. ಇಲ್ಲಿ ನಾವು ಮತ್ತೆ ಜಯ ಸಾಧಿಸುತ್ತೇವೆ’ ಎಂದು ಫಿಲಿಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಸಂಚಾಲಕ ಟೊಬಿ ಲ್ಯಾಂಜರ್ ಭಾನುವಾರ ಬೊರ್ ಪಟ್ಟಣಕ್ಕೆ ಭೇಟಿ ನೀಡಿದ್ದು, ‘ಸಾವಿರಾರು ಜನ ನಿರಾಶ್ರಿತರಾಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ’ ಎಂದು ಅವರು ಹೇಳಿಕೆ ನೀಡಿದ್ದರು.

ಸುಡಾನ್ ದೇಶದಿಂದ 2011ರಲ್ಲಿ ಸ್ವತಂತ್ರಗೊಂಡ ದಕ್ಷಿಣ ಸುಡಾನ್ನಲ್ಲಿ ತೈಲ ಸಂಪತ್ತು ಹೇರಳವಾಗಿದ್ದು ಅಲ್ಲೀಗ ಹಿಂಸಾಚಾರ ಭುಗಿಲೆದ್ದಿದೆ; ನಿರಾಶ್ರಿತರಾದ ಸಾವಿರಾರು ಜನರಿಗೆ ವಿಶ್ವಸಂಸ್ಥೆಯ ಶಿಬಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಸೇನಾ ಕಾರ್ಯಾಚರಣೆ: ಒಬಾಮ
ವಾಷಿಂಗ್ಟನ್ (ಪಿಟಿಐ): ಹಿಂಸಾಚಾರ ಭುಗಿಲೆದ್ದಿರುವ ದಕ್ಷಿಣ ಸುಡಾನ್ನಲ್ಲಿ ನೆಲೆಸಿರುವ ಅಮೆರಿಕನ್ನರ ಸುರಕ್ಷತೆಗಾಗಿ ಮತ್ತಷ್ಟು ಸೇನಾ ಕಾರ್ಯಾಚರಣೆ ಕೈಗೊಳ್ಳುವುದಾಗಿ ಅಮೆರಿಕ ಹೇಳಿದೆ. ಅಮೆರಿಕ ಸರ್ಕಾರ ಇನ್ನೂ 46 ರಕ್ಷಣಾ ಸಿಬ್ಬಂದಿಯನ್ನು ದಕ್ಷಿಣ ಸುಡಾನ್ಗೆ ಕಳುಹಿಸಿದೆ. ‘ಅಮೆರಿಕನ್ನರ ಹಾಗೂ ಅವರ ಆಸ್ತಿಪಾಸ್ತಿ ರಕ್ಷಣೆ, ನಮ್ಮ ರಾಯಭಾರ ಕಚೇರಿಯ ಸಂರಕ್ಷಣೆಗಾಗಿ ಮತ್ತಷ್ಟು ಸೇನಾ ಕಾರ್ಯಾಚರಣೆ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ಬರಾಕ್ ಒಬಾಮ ಎಚ್ಚರಿಸಿದ್ದಾರೆ.

‘ನಮ್ಮ ಹಾಗೂ ನಮ್ಮ ಮಿತ್ರ ರಾಷ್ಟ್ರದ ನಾಗರಿಕರನ್ನು ಕರೆತರಲು ಈಗಾಗಲೇ ದಕ್ಷಿಣ ಸುಡಾನ್ನ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಹೆಲಿಕಾಪ್ಟರ್ಗಳನ್ನು ಕಳುಹಿಸಿದ್ದು ಈಗಾಗಲೇ ಕೆಲವರು ಬೊರ್ ಪಟ್ಟಣದಿಂದ ಜುಬಾಕ್ಕೆ ಪ್ರಯಾಣ ಬೆಳೆಸಿದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಖಾತೆ ವಕ್ತಾರ ಜೆನ್ ಪಾಸ್ಕಿ ಹೇಳಿದ್ದಾರೆ.

ಈಗಾಗಲೇ ಅಮೆರಿಕದ ಸುಮಾರು 380 ಹಾಗೂ ಇತರ ದೇಶಗಳ 300 ನಾಗರಿಕರನ್ನು ಅಮೆರಿಕದ ಐದು ಸೇನಾ ವಿಮಾನಗಳ ಮೂಲಕ ಕೀನ್ಯಾ ಮತ್ತಿತರ ದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಾಸ್ಕಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.