ಪಾವಗಡ: ತಾಲ್ಲೂಕಿನ ರಾಜವಂತಿಯಲ್ಲಿ ಹತ್ತು ವರ್ಷಗಳ ಹಿಂದೆ ಅಳವಡಿಸಿದ್ದ ಕುಡಿಯುವ ನೀರು ಶುದ್ಧೀಕರಣ ಘಟಕ ದುರಸ್ತಿ ಹೆಸರಿನಲ್ಲಿ ಸ್ಥಗಿತಗೊಂಡಿದೆ. ಇದರಿಂದ ಶುದ್ಧ ನೀರು ಕುಡಿಯುವ ಗ್ರಾಮಸ್ಥರ ಕನಸು ಈಡೇರಿಲ್ಲ.

ಫ್ಲೋರೈಡ್ ಅಧಿಕವಾಗಿರುವ ಗ್ರಾಮಗಳನ್ನು ಗುರುತಿಸಿ ಶುದ್ಧೀಕರಣ ಘಟಕ ಅಳವಡಿಸಲು ರಾಜ್ಯ ಸರ್ಕಾರ 2002-03ರಲ್ಲಿ ಅನುದಾನ ಮಂಜೂರು ಮಾಡಿದೆ. ಘಟಕವೊಂದಕ್ಕೆ ರೂ. 6 ಲಕ್ಷ ವೆಚ್ಚದಲ್ಲಿ ಖಾಸಗಿ ಕಂಪೆನಿ ಸಹಭಾಗಿತ್ವದಲ್ಲಿ 21 ಗ್ರಾಮಗಳಲ್ಲಿ ಶುದ್ಧೀಕರಣ ಘಟಕ ಅಳವಡಿಸಲಾಗಿದೆ.

ಈ ಘಟಕಗಳಲ್ಲಿ ರಿವರ್ಸ್ ಆಸ್ಮೊಸಿಸ್ ತಂತ್ರಜ್ಞಾನದ ಬಹುತೇಕ ಘಟಕ ಕಾರ್ಯ ನಿರ್ವಹಿಸುತ್ತಿವೆಯಾದರೂ; ರಾಜವಂತಿಯಲ್ಲಿ ಅಳವಡಿಸಿರುವ ಅನ್ಯ ತಂತ್ರಜ್ಞಾನದ ಘಟಕ ಆರಂಭದಿಂದಲೂ ನಿರುಪಯುಕ್ತವಾಗಿದೆ.

ಹತ್ತು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮದಲ್ಲಿ ಅಳವಡಿಸಿದಾಗ ತಮಗೆ ನಿರಂತರವಾಗಿ ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಇದರಿಂದ ಗಂಟಲು, ಮೂಳೆಗಳಿಗೆ ಸಂಬಂಧಿಸಿದ ರೋಗ ಮಾಯವಾಗುತ್ತವೆ ಎಂಬ ಜನರ ಆಶಾಗೋಪುರ ಘಟಕ ಸ್ಥಾಪನೆಯಾದ 15 ದಿನಗಳಲ್ಲೇ ಕುಸಿದು ಬಿದ್ದಿತ್ತು.

ಉದ್ಘಾಟನೆಯಾದ ದಿನದಿಂದಲೂ ಘಟಕ ದುರಸ್ತಿಯಲ್ಲಿದೆ. ಇದನ್ನು ಸರಿಪಡಿಸಲು ತಂತ್ರಜ್ಞರು ಹಾಗೂ ಅಧಿಕಾರಿಗಳು ತಂಡೋಪ ತಂಡವಾಗಿ ಬಂದು ಹೋಗುತ್ತಿದ್ದಾರೆ. ಇದರಿಂದ ಹಣ ಖರ್ಚಾಗುತ್ತಿದೆ ವಿನಾಃ ಚಿಕ್ಕಾಸಿನ ಪ್ರಯೋಜನವೂ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಒಕ್ಕೊರಲ ಆರೋಪ.

`ಕಮಿಷನ್ ಆಸೆಗೆ ಸರ್ಕಾರದವ್ರ ಪ್ರೈವೇಟ್ ಕಂಪೆನಿಯವ್ರಿಗೆ ಲಕ್ಷಗಟ್ಟಲೇ ದುಡ್ಡು ಕೊಟ್ಟು ಇದನ್ನು ನಮ್ಮೂರ್ನಲ್ಲಿ ಬಿಗಿಸಕ್ಕೆ ಹೇಳವ್ರೆ. ಬೇರೆ ಕಡೆ ಕೆಟ್ಟು ಹೋಗಿರೋ ಫಿಲ್ಟರ್ಗೆ ಸುಣ್ಣ-ಬಣ್ಣ ಬಳ್ದು ಹೊಸ್ದಾಗಿ ಕಾಣ್ಸೋ ಹಂಗ್ ಮಾಡಿ ನಮ್ಮೂರ್ನಾಗೆ ತಂದು ಬಡಿದವ್ರೆ. ಮೊದಲ್ನಿಂದಲೂ ಬರೀ ರಿಪೇರಿನೇ. ಇಲ್ಲೇಗಂಟ ಇದ್ರಾಗೆ ಒಂದ್ ಲೋಟ ನೀರು ಕುಡಿದಿಲ್ಲ. ಕಣ್ಣು ಮುಚ್ಚೋದ್ರೊಳ್ಗೆ ಇದ್ರ ನೀರು ಕುಡಿತೀನಿ ಅನ್ನೋ ನಂಬ್ಕೆ ನಂಗಿಲ್ಲ' ಎನ್ನುತ್ತಾರೆ ಗ್ರಾಮದ ವೃದ್ಧರೊಬ್ಬರು.

2012ರಲ್ಲಿ ಇನ್ನೂ 14 ಗ್ರಾಮಗಳಲ್ಲಿ ಘಟಕ ಅಳವಡಿಸಲಾಗಿದೆ. ಇವುಗಳಲ್ಲಿ ಬಹುತೇಕ ಘಟಕಗಳ ನೀರು ಸಾಕಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. 2012-13ರಲ್ಲಿ 30 ಘಟಕಗಳಿಗೆ ಅನುದಾನ ಮಂಜೂರಾಗಿದ್ದರೂ; 14 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ವಿದ್ಯುತ್ ಸಮಸ್ಯೆ, ನೀರಿನ ಅಭಾವ, ಘಟಕ ಅಳವಡಿಸಲು ಸ್ಥಳದ ಸಮಸ್ಯೆಯಿಂದ 16 ಘಟಕ ನಿರುಪಯುಕ್ತವಾಗಿವೆ.

ಪ್ರಸ್ತುತ ಸಾಲಿನಲ್ಲಿ 27 ಶುದ್ಧೀಕರಣ ಘಟಕಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. 114 ಘಟಕಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಫ್ಲೋರೈಡ್ ರಹಿತ ನೀರು ಪಡೆಯಲು ಶುದ್ಧೀಕರಣ ಘಟಕ ಅಳವಡಿಸಲಾಗುವುದು. ರಾಜವಂತಿ ಗ್ರಾಮದಲ್ಲಿಯೂ ಶೀಘ್ರವಾಗಿ ರಿವರ್ಸ್ ಆಸ್ಮೋಸಿಸ್ ತಂತ್ರಜ್ಞಾನದ ಘಟಕ ಅಳವಡಿಸಲಾಗುವುದು ಎಂದು ಎಂಜಿನಿಯರ್ ರಾಮಚಂದ್ರ `ಪ್ರಜಾವಾಣಿ'ಗೆ ತಿಳಿಸಿದರು.

ಘಟಕಗಳನ್ನು ಖಾಸಗಿ ಕಂಪೆನಿ 10 ವರ್ಷಗಳ ತನಕ ನಿರ್ವಹಿಸುತ್ತಾರೆ. ನಿರ್ವಹಣಾ ಅವಧಿ ಮುಗಿದ ನಂತರ ಗ್ರಾಮ ಪಂಚಾಯಿತಿ ಸಿಬ್ಬಂದಿ ಶುದ್ಧೀಕರಣ ಘಟಕದ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು. ವೃತ್ತಿ ಪರಿಣಿತರೇ ಸಮರ್ಪಕವಾಗಿ ನಿರ್ವಹಿಸಲಾಗದ ಘಟಕಗಳನ್ನು, ನಿರ್ವಹಣಾ ಕೌಶಲ್ಯದ ಗಂಧ-ಗಾಳಿಯನ್ನೂ ಅರಿಯದ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹೇಗೆ ನಿಭಾಯಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.