ಪಣಜಿ, ಗೋವಾ (ಪಿಟಿಐ): ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಬೋಲ್ಕರ್ ಅವರ ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಗೋವಾದಲ್ಲಿ ವಶಕ್ಕೆ ಪಡೆದಿದ್ದಾರೆ.

ಇಬ್ಬರು ವ್ಯಕ್ತಿಗಳನ್ನು ಹಳೆಯ ಗೋವಾದಲ್ಲಿ ಡಿಸೆಂಬರ್ 3 ರಂದು ವಶಕ್ಕೆ ಪಡೆಯಲಾಗಿದೆ ಎಂದು ಗೋವಾ ಉಪ ಪೊಲೀಸ್ ಮಹಾನಿರ್ದೇಶಕ ಒ.ಪಿ.ಮಿಶ್ರಾ ಶನಿವಾರ ತಿಳಿಸಿದ್ದಾರೆ.

ಪುಣೆ ಮತ್ತು ಗೋವಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶಾರ್ಪ್ ಶೂಟರ್ಗಳು ಎನ್ನಲಾದ ಮುಂಬೈ ಮೂಲದ ಶಂಕಿತರನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿರುವ ಮಿಶ್ರಾ, ಶಂಕಿತರ ಹೆಸರುಗಳನ್ನು ಬಹಿರಂಗ ಪಡಿಸಲು ಅವರು ನಿರಾಕರಿಸಿದ್ದಾರೆ.

ಉಭಯ ಆರೋಪಿಗಳನ್ನು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ವಾರ್ಷಿಕೋತ್ಸವ ನಡೆಯುತ್ತಿದ್ದ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿತ್ತು. ಅವರನ್ನು ತಕ್ಷಣವೇ ಪುಣೆಗೆ ಕರೆದೊಯ್ಯಲಾಗಿದೆ ಎಂದೂ ಮಿಶ್ರಾ ನುಡಿದಿದ್ದಾರೆ.

ಮೌಢ್ಯ ವಿರೋಧಿ ಹೋರಾಟಗಾರಾಗಿದ್ದ ದಾಬೋಲ್ಕರ್ ಅವರನ್ನು ಪುಣೆಯಲ್ಲಿ ಆಗಸ್ಟ್ 20 ರಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಗೆ ಕೊಲೆ ಮಾಡಿದ್ದರು.

ಪುಣೆ ಪೊಲೀಸರು ಈವರೆಗೂ ಪ್ರಕರಣದ ಅಪರಾಧಿಗಳನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದು, ದಾಬೋಲ್ಕರ್ ಅವರ ಕುಟುಂಬ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದೆ.

ಈ ಮೊದಲು ದಾಬೋಲ್ಕರ್ ಕೊಲೆ ಪ್ರಕರಣ ಹಿಂದೆ ಬಲಪಂಥೀಯ ಉಗ್ರವಾದಿಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು.

ಆದರೆ, ಪ್ರಕರಣ ಹಿಂದೆ ಬಲ ಪಂಥೀಯ ಕೈವಾಡದ ಬಗ್ಗೆ ಸುಳಿವು ನೀಡುವಂತಹ ಸಾಕ್ಷ್ಯಗಳಿಲ್ಲ ಎಂದು ಬಾಂಬೆ ಹೈಕೋರ್ಟ್ಗೆ ಪುಣೆ ಪೊಲೀಸರು ತಿಳಿಸಿದ್ದರು. ಬಾಂಬೆ ಹೈಕೋರ್ಟ್, ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದಿಂದ (ಎನ್ಐಎ) ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.