ಶುಕ್ರವಾರ, ಮೇ 29, 2020
27 °C

ದಾಸರಹಳ್ಳಿ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಸರಹಳ್ಳಿ ಕೊಡವ ಸಂಘ ತಂಡದವರು ಇಲ್ಲಿ ಆರಂಭ ವಾದ ಬೆಂಗಳೂರು ಕೊಡವ ಸಮಾಜ ಆಶ್ರಯದ 8ನೇ ಕೊಡವ ಅಂತರ ಸಂಘ ಹಾಕಿ ಟೂರ್ನಿಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.ಸುಲಿವಾನ್ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಾಸರಹಳ್ಳಿ ಕೊಡವ ಸಂಘ ಟೈಬ್ರೇಕರ್‌ನಲ್ಲಿ 9-8 ರಲ್ಲಿ ಕೆಂಗೇರಿ ಕೊಡವ ಸಂಘದ ವಿರುದ್ಧ ಜಯ ಪಡೆಯಿತು.ಇತರ ಪಂದ್ಯಗಳಲ್ಲಿ ಪೊಮ್ಮಲೆ ಕೊಡವ ಸಂಘ, ಮಾರುತಿ ಸೇವಾ ನಗರ 6-3 ರಲ್ಲಿ ಯಲಹಂಕ ಕೊಡವ ಸಂಘ ವಿರುದ್ಧವೂ, ಬಾಣಸವಾಡಿ ಕೊಡವ ಸಂಘ 4-1 ರಲ್ಲಿ ಪ್ರಗತಿ ಕೊಡವ ಸಂಘ, ಕೆಂಪಾಪುರ ಎದುರೂ, ಸುಲ್ತಾನ್ ಪಾಳ್ಯ ಕೊಡವ ಸಂಘ 2-1 ರಲ್ಲಿ ನೆಲ್ಲಕ್ಕಿ ಕೊಡವ ಸಂಘ, ರಾಮಮೂರ್ತಿ ನಗರ ಮೇಲೂ ಜಯ ಪಡೆದವು.ಬುಧವಾರ ನಡೆಯುವ ಪಂದ್ಯಗಳಲ್ಲಿ ಸ್ನೇಹಕೂಟ, ತಿಪ್ಪಸಂದ್ರ- ಕಾವೇರಿ ಕೊಡವ ಸಂಘ, ಕೆ.ಆರ್. ಪುರ, ಕೋರಮಂಗಲ ಕೊಡವ ಸಂಘ- ಇಂದಿರಾನಗರ ಕೊಡವ ಸಂಘ, ಲೋಪಮುದ್ರ ಕೊಡವ ಸಂಘ, ಮಡಿವಾಳ- ಸಂಜಯನಗರ ಕೊಡವ ಸಂಘ ಮತ್ತು ಬ್ರಹ್ಮಗಿರಿ ಕೊಡವ ಸಂಘ, ಮುರುಗೇಶ್‌ಪಾಳ್ಯ- ವಿಜಯನಗರ ಕೊಡವ ಸಂಘ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.