ದೂರದರ್ಶಕ, ಸೂಕ್ಷ್ಮ ದರ್ಶಕದ ಬಗ್ಗೆ ಮಾತನಾಡಿದ್ದಾಯಿತು. ಈ ಬಾರಿ ಇವುಗಳ ಮತ್ತೊಂದು ಸಹವರ್ತಿ ಬೈನಾಕ್ಯುಲರ್ ಅಲಿಯಾಸ್ ದುರ್ಬೀನಿನ ಬಗ್ಗೆ ಮಾತನಾಡೋಣ.

ದೂರದಲ್ಲಿರುವ ವಸ್ತುಗಳ ಗಾತ್ರವನ್ನು ದೊಡ್ಡದಾಗಿ ತೋರಿಸುವ, ಎರಡು ಕಣ್ಣುಗಳಿಗೆ ಒಂದೊಂದರಂತೆ ಎರಡು ಪುಟ್ಟ ದೂರದರ್ಶಕಗಳನ್ನು ಒಂದು ಚೌಕಟ್ಟಿನೊಳಗೆ (ಫ್ರೇಮ್) ಅಳವಡಿಸಿರುವ ಸಾಧನವೇ ಬೈನಾಕ್ಯುಲರ್. ಆಡುಮಾತಿನಲ್ಲಿ ದುರ್ಬೀನು ಎಂದೇ ಕರೆಯಲಾಗುವ ಬೈನಾಕ್ಯುಲರ್ಗೆ ‘ಇಕ್ಕಣ್ಣ ದೂರದರ್ಶಕ’ ಎಂಬ ಹೆಸರೂ ಇದೆ.

ಸೂಕ್ಷ್ಮದರ್ಶಕಕ್ಕೆ ಹೋಲಿಸಿದರೆ, ದುರ್ಬೀನಿಗೆ ದೂರದರ್ಶಕ ಹೆಚ್ಚು ಹತ್ತಿರದ ಸಂಬಂಧಿ. ದೂರದಲ್ಲಿರುವ ವಸ್ತುಗಳನ್ನು ನೋಡಲು ಬೈನಾಕ್ಯುಲರ್ ಬಳಕೆಯಾಗುವುದರಿಂದ ಒಂದರ್ಥದಲ್ಲಿ ಇದು ದೂರದರ್ಶಕದ ಇನ್ನೊಂದು ರೂಪ. ದೂರದರ್ಶಕದ ಕಾರ್ಯನಿರ್ವಹಣೆಗೂ, ಬೈನಾಕ್ಯುಲರ್ನ ಕಾರ್ಯನಿರ್ವಹಣೆಗೂ ದೊಡ್ಡ ವ್ಯತ್ಯಾಸ ಇಲ್ಲ. ಹಾಗಾಗಿ, ಇದನ್ನು ‘ಅವಳಿ ದೂರದರ್ಶಕ’ ಎಂದೂ ಕರೆಯಲಾಗುತ್ತದೆ.

ಬೈನಾಕ್ಯುಲರ್ನ ಇತಿಹಾಸ 17ನೇ ಶತಮಾನದಿಂದ ಆರಂಭವಾಗುತ್ತದೆ. ಜಗತ್ತಿನ ಮೊದಲ ದೂರದರ್ಶಕ ಯಾವಾಗ ರೂಪುಗೊಂಡಿತ್ತೋ, ಅಂದೇ ಪರೋಕ್ಷವಾಗಿ ದುರ್ಬೀನು ಕೂಡ ರೂಪು ತಳೆದಿತ್ತು.

ಹಾಗೆ ನೋಡಿದರೆ, ದೂರದರ್ಶಕಕ್ಕಿಂತ ಸ್ವಲ್ಪ ಹೆಚ್ಚಿನ ಅನುಕೂಲ ಬೈನಾಕ್ಯುಲರ್ನಲ್ಲಿತ್ತು. ದೂರದರ್ಶಕಗಳಲ್ಲಿ ವಸ್ತುಗಳನ್ನು ವೀಕ್ಷಿಸಬೇಕಾದರೆ ಒಂದು ಕಣ್ಣನ್ನು ಮುಚ್ಚಿ ಮತ್ತೊಂದು ಕಣ್ಣಿನಿಂದ ನೋಡಬೇಕಿತ್ತು. ಆದರೆ, ಬೈನಾಕ್ಯುಲರ್ನಲ್ಲಿ ಎರಡೂ ಕಣ್ಣುಗಳ ಮೂಲಕ ವಸ್ತುಗಳನ್ನು ನೋಡಲು ಸಾಧ್ಯವಾಗುವುದರಿಂದ, ಮೂರು ಆಯಾಮಗಳ ದೃಶ್ಯ ವೀಕ್ಷಣೆ ಸಾಧ್ಯವಾಗಿತ್ತು.

ಮೊದಲೇ ಹೇಳಿದಂತೆ, 17ನೇ ಶತಮಾನದಲ್ಲಿ ಬೈನಾಕ್ಯುಲರ್ ರೂಪಿಸುವ ಪ್ರಯತ್ನಗಳು ನಡೆಯಿತು. ಆದರೆ, ಇವುಗಳು ಗಾತ್ರದಲ್ಲಿ ದೊಡ್ಡದಾಗಿದ್ದರಿಂದ ಸುಲಭವಾಗಿ ಬಳಸುವಂತಿರಲಿಲ್ಲ. 1650ರ ನಂತರ ಖಗೋಳ ವಿಜ್ಞಾನದ ಬಳಕೆಗಾಗಿ ಪೆಟ್ಟಿಗೆಯಾಕಾರದ ಬೈನಾಕ್ಯುಲರ್ ತಯಾರಿಸಲಾಗುತ್ತಿತ್ತು.

18ನೇ ಶತಮಾನದ ಮೊದಲಾರ್ಧದಲ್ಲಿ ಇಟಲಿಯ ಮಿಲನ್ನಲ್ಲಿ ಪ್ಯಾಟ್ರೊನಿ ಹಾಗೂ ಬರ್ಲಿನ್ನಲ್ಲಿ ಐ.ಎಂ. ಡೊಬ್ಲರ್ ಅವರು ಸ್ವಲ್ಪ ಸುಧಾರಿತ ಬೈನಾಕ್ಯುಲರ್ ತಯಾರಿಸುವ ಪ್ರಯತ್ನ ನಡೆಸಿದರಾದರೂ, ಮಸೂರಗಳ ಗುಣಮಟ್ಟ ಕಡಿಮೆಯಾಗಿದ್ದರಿಂದ ಅವು ಯಶಸ್ವಿಯಾಗಲಿಲ್ಲ.

1740ರಲ್ಲಿ ಸ್ಕಾಟ್ಲೆಂಡ್ನ ಜೇಮ್ಸ್ ಶಾರ್ಟ್ ಅವರು ಮೊದಲ ಬಾರಿಗೆ ಸಣ್ಣ ಗಾತ್ರದ (ಗಿಡ್ಡ) ಬೈನಾಕ್ಯುಲರ್ ಸಿದ್ಧಪಡಿಸಿದರು. 19ನೇ ಶತಮಾನದಲ್ಲಿ ಆಧುನಿಕ ದುರ್ಬೀನುಗಳು ರೂಪುಗೊಂಡವು. ಪ್ಯಾರಿಸ್ ಜೆ.ಪಿ ಲೂಮಿಯರ್ ಅವರು ಎರಡೂ ದೂರದರ್ಶಕಗಳ ನಡುವೆ ಒಂದು ತಿರುಗಣೆ (ಸ್ಕ್ರೂ) ಅಳವಡಿಸಿರುವ ಬೈನಾಕ್ಯುಲರ್ ತಯಾರಿಸಿದರು.

ಏಕಕಾಲಕ್ಕೆ ಎರಡೂ ಕಣ್ಣುಗಳನ್ನು ವಸ್ತುವಿನ ಕಡೆಗೆ ಹೊಂದಿಕೆ ಮಾಡಲು (ಫೋಕಸ್) ಬಳಕೆದಾರರಿಗೆ ಈ ತಿರುಗಣೆ ನೆರವಾಯಿತು. ತನ್ನ ಅಗತ್ಯಕ್ಕೆ ತಕ್ಕಂತೆ ಮಸೂರಗಳನ್ನು ಸರಿ ಹೊಂದಿಸಲು (ಅಡ್ಜೆಸ್ಟ್) ಈ ದುರ್ಬೀನಿನಲ್ಲಿ ಬಳಕೆದಾರರಿಗೆ ಸಾಧ್ಯವಾಯಿತು.

ಇಟಲಿಯ ಇಗ್ನಾಶಿಯೊ ಪೊರೊ ಅವರು 1854ರಲ್ಲಿ ಪ್ರಿಸಮ್ (ಅಶ್ರಗ– ಎರಡು ತುದಿಗಳೂ ಸಮಾಂತರ, ಸಮತಲೀಯ ಸದೃಶ, ಸಮರೇಖಾಕೃತಿಗಳಾಗಿಯೂ, ಪಕ್ಕಗಳೆಲ್ಲವೂ ಸಮಾಂತರ ಚತುರ್ಭುಜಗಳಾಗಿಯೂ ಇರುವ ಘನ ಆಕೃತಿ) ಅಳವಡಿಸಿರುವ ಬೈನಾಕ್ಯುಲರ್ ಅಭಿವೃದ್ಧಿ ಪಡಿಸಿ ಅದಕ್ಕೆ ಪೇಟೆಂಟ್ ಪಡೆದರು. ಇದು ದುರ್ಬೀನು ಇತಿಹಾಸದಲ್ಲೇ ಅತ್ಯಂತ ಪ್ರಮುಖ ಘಟನೆಯಾಗಿ ದಾಖಲಾಗಿದೆ.

ಪ್ರಿಸಮ್ ಅಳವಡಿಕೆಯಿಂದಾಗಿ ಬೈನಾಕ್ಯುಲರ್ನ ಗಾತ್ರ ಮತ್ತಷ್ಟು ಚಿಕ್ಕದಾಯಿತು. ದೂರದರ್ಶಕಗಳ ಉದ್ದ ಇನ್ನಷ್ಟು ಕಿರಿದಾಯಿತು. 1870ರಲ್ಲಿ ಕಾರ್ಲ್ ಜೀಸ್ ಕಂಪೆನಿಯ ಅರ್ನ್ಸ್ಟ್ ಅಬೆ ಅವರು ಪ್ರಿಸಮ್ ಬೈನಾಕ್ಯುಲರ್ ಅನ್ನು ಇನ್ನಷ್ಟು ಸುಧಾರಿಸಿದರು. ಇದರಿಂದ ದುರ್ಬೀನಿಗೆ ಅಳವಡಿಸುವ ದೂರದರ್ಶಕಗಳ ಉದ್ದ ಮತ್ತಷ್ಟು ಸಣ್ಣದಾಯಿತು. ಬರಿ ಕೈಯಲ್ಲಿ ಹಿಡಿಯುಷ್ಟರ ಮಟ್ಟಿಗೆ ಬೈನಾಕ್ಯುಲರ್ ಗಾತ್ರ ಕುಗ್ಗಿತು.

ಆ ವೇಳೆಗಾಗಲೇ ಮಸೂರ ತಂತ್ರಜ್ಞಾನ ಸಾಕಷ್ಟು ಮುಂದುವರಿದಿತ್ತು. ನಂತರದ ವರ್ಷಗಳಲ್ಲಿ ಬಳಕೆದಾರರು ತಮಗೆ ಬೇಕಾದ ರೀತಿಯಲ್ಲಿ ನಾಭೀಕರಿಸಲು (ಫೋಕಸ್) ಸಾಧ್ಯವಾಗುವಂತಹ (ಮ್ಯಾನ್ಯುವಲ್ ಅಡ್ಜಸ್ಟ್ಮೆಂಟ್), ಸ್ಥಿರ ಚಿತ್ರಗಳನ್ನು ನೋಡಬಹುದಾದ ದುರ್ಬೀನುಗಳು ತಯಾರಾದವು. ಈಗೀಗ ಬಣ್ಣದ ಲೇಪನಗಳಿರುವಂತಹ, ಮೆಟಾಲಿಕ್ ಮಿರರ್ ಕೋಟಿಂಗ್ಗಳಿರುವಂತಹ ಬೈನಾಕ್ಯುಲರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.