ವಾಷಿಂಗ್ಟನ್ (ಪಿಟಿಐ): ರಹಸ್ಯ ಮಾಹಿತಿ ಸಂಗ್ರಹಿಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) ನಡೆಸಿದ ವಿವಾದಾತ್ಮಕ ದೂರವಾಣಿ ಕದ್ದಾಲಿಕೆಯು ಸಂವಿಧಾನ ಬಾಹಿರ ಕೃತ್ಯ ಎಂದು ಇಲ್ಲಿನ ನ್ಯಾಯಾಲಯ ಹೇಳಿದೆ. ಇದರಿಂದ ಅಧ್ಯಕ್ಷ ಒಬಾಮ ಅವರ ಆಡಳಿತಕ್ಕೆ ಹಿನ್ನಡೆ ಆಗಿದೆ.

‘ದೂರವಾಣಿ ಕದ್ದಾಲಿಕೆಯು ಅಂಕೆ ಮೀರಿದ ಮತ್ತು ವಿವೇಚನಾ ರಹಿತ ಕಾರ್ಯ. ಇದು ಖಾಸಗಿತನವನ್ನು ಅತಿ ಕ್ರಮಿಸುವ ಕೃತ್ಯ’ ಎಂದು ವಾಷಿಂಗ್ಟನ್ ಡಿಸಿ ಜಿಲ್ಲಾ ನ್ಯಾಯಾಲಯ ಹೇಳಿದೆ.

ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತ ಲ್ಯಾರಿ ಕ್ಲೇಮ್ಯಾನ್ ಅವರು ಎನ್ಎಸ್ಎ ಮಾಡುತ್ತಿರುವ ರಹಸ್ಯ ಮಾಹಿತಿ ಸಂಗ್ರಹವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಜಿಲ್ಲಾ ನ್ಯಾಯಾಧೀಶ ರಿಚರ್ಡ್ ಲಿಯೋನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಬೇಹುಗಾರಿಕಾ ಸಂಸ್ಥೆ ಗಳು ಸಂಗ್ರಹಿಸಿದ ರಹಸ್ಯ ಮಾಹಿತಿ ಗಳನ್ನು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ (ಸಿಐಎ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೊಡೆನ್ ಅವರು ಬಯಲು ಮಾಡಿದ ನಂತರ ರಹಸ್ಯ ಮಾಹಿತಿ ಕಲೆಹಾಕುತ್ತಿದ್ದ ವಿಷಯವು ಬೆಳಕಿಗೆ ಬಂತು.

ಇನ್ನೊಂದು ಸುದ್ದಿ...

*ಬ್ರೆಜಿಲ್ಗೆ ಸ್ನೊಡೆನ್ ಭರವಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.