ನವದೆಹಲಿ (ಐಎಎನ್ಎಸ್): ಕಳೆದ ತಿಂಗಳು ರಾಜಧಾನಿಯಲ್ಲಿ ನಡೆದ, ಇಸ್ರೇಲ್ ರಾಜತಾಂತ್ರಿಕ ಕಚೇರಿಗೆ ಸೇರಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹವ್ಯಾಸಿ ಪತ್ರಕರ್ತ ಸೈಯದ್ ಮೊಹಮದ್ ಅಹಮದ್ ಕಜ್ಮಿ ಎಂಬುವವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ ಮೊದಲ ಆರೋಪಿಯಾದ ಅವರನ್ನು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಇದೇ 27ರವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಇದು ಆಕಸ್ಮಿಕ ಘಟನೆಯಲ್ಲ, ಸೂಕ್ತ ಪೂರ್ವ ತಯಾರಿ ನಡೆಸಿಯೇ ಸ್ಫೋಟ ನಡೆಸಲಾಗಿತ್ತು ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ತನಿಖೆಯ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಕಜ್ಮಿ ಬಂಧನದ ವೇಳೆ ಪೊಲೀಸರು ಸೂಕ್ತ ನಿಯಮಗಳನ್ನು ಪಾಲಿಸಲಿಲ್ಲ ಎಂದು ಆರೋಪಿಸಿರುವ ಅವರ ವಕೀಲ ವಿಜಯ್ ಅಗರ್ವಾಲ್, ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸುವುದನ್ನು ತೀವ್ರವಾಗಿ ವಿರೋಧಿಸಿದರು. ಪ್ರಕರಣ ಕುರಿತ ಸಮರ್ಪಕ ದಾಖಲೆಗಳನ್ನು ಪ್ರದರ್ಶಿಸದ ಹೊರತು ಕಜ್ಮಿ ಅವರನ್ನು ಬಂಧಿಸುವಂತಿಲ್ಲ, ಬಂಧಿಸುವ ವೇಳೆ ಪೊಲೀಸರು ಸಮವಸ್ತ್ರವನ್ನೂ ಧರಿಸಿರಲಿಲ್ಲ ಎಂದು ದೂರಿದರು. ಇಷ್ಟೇ ಅಲ್ಲದೆ ಕಜ್ಮಿ ಅವರು ಇರಾಕ್ ಯುದ್ಧ, ಇರಾನ್ಗೆ ಸಂಬಂಧಿಸಿದ ವರದಿ ಮಾಡಿದಂತಹ ಹಿರಿಯ ಪತ್ರಕರ್ತರಾಗ್ದ್ದಿದು, ಪೊಲೀಸರು ಅವರನ್ನು ಅಂತರ ರಾಷ್ಟ್ರೀಯ ಅಪರಾಧಿ ಎಂಬಂತೆ ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದರು. ಆದರೆ ನ್ಯಾಯಾಲಯ ಅವರ ಈ ವಾದವನ್ನು ಮಾನ್ಯ ಮಾಡಲಿಲ್ಲ.

ಇರಾನ್ನ ನಿಯತಕಾಲಿಕವೊಂದಕ್ಕೆ ವರದಿಗಾರರಾಗಿದ್ದ ಕಜ್ಮಿ , ಸ್ಫೋಟ ನಡೆದ ಕಾರಿಗೆ ಅಯಸ್ಕಾಂತೀಯ ಬಾಂಬ್ ಜೋಡಿಸಿದನೆನ್ನಲಾದ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದರು. ಮಾತ್ರವಲ್ಲ, ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ನಿಗಾ ವಹಿಸುವಲ್ಲಿಯೂ ನೆರವು ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.