ಬುಧವಾರ, ಮಾರ್ಚ್ 3, 2021
19 °C

ನಗರದ ಚೋರಿಯರಿಗೆ ಶಾರುಖ್ ಭೇಟಿ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಚೋರಿಯರಿಗೆ ಶಾರುಖ್ ಭೇಟಿ ಯೋಗ

ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅಭಿನಯದ `ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾ ಪ್ರಚಾರದ ಭರಾಟೆ ಜೋರಾಗುತ್ತಿದೆ. ಆ ಸಿನಿಮಾದಲ್ಲಿ `ಸೀರೆ ಪಾರ್ಟ್‌ನರ್' ಆಗಿರುವ ಚೆನ್ನೈ ಮೂಲದ ಪಲಮ್ ಸಿಲ್ಕ್ಸ್ ತನ್ನ ಹತ್ತನೇ ವರ್ಷದ ಆಚರಣೆಗಾಗಿ ವಿನೂತನ ಕಾರ್ಯಕ್ರಮವೊಂದನ್ನು ನಗರದ ಗರುಡಾ ಮಾಲ್‌ನಲ್ಲಿ ಹಮ್ಮಿಕೊಂಡಿತ್ತು.`ಮೀನಾ ಹಂಟ್' ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಯುವತಿಯರು ನಟಿ ದೀಪಿಕಾ ಪಡುಕೋಣೆ `ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಯಾವ ರೀತಿಯ ಉಡುಗೆ ತೊಟ್ಟಿದ್ದರೋ ಅದೇ ರೀತಿಯ ಉಡುಗೆ ತೊಟ್ಟು, ಅವರ ಹಾವಭಾವದಲ್ಲಿ ಕಾಣಿಸಿಕೊಂಡರು. ಸಿನಿಮಾದಲ್ಲಿ ದೀಪಿಕಾ ತೊಟ್ಟಂಥ ತೊಡುಗೆಯನ್ನು ಹೋಲುವ ಪ್ಯಾಂಟ್ ಟಿ-ಶರ್ಟ್, ಸೀರೆಗಳನ್ನು ಧರಿಸಿ ಬಂದ ಸ್ಪರ್ಧಿಗಳಿಗೆ ರ‌್ಯಾಂಪ್ ವಾಕ್ ಮಾಡುವಂತೆ ನಿರ್ದೇಶಿಸಲಾಯಿತು. ರ‌್ಯಾಂಪ್‌ವಾಕ್ ಮಾಡುವಾಗ ತಮಗೂ ದೀಪಿಕಾಗೂ ಇರುವ ಹೋಲಿಕೆಯನ್ನು ಅವರು ಸಾರಬೇಕಿತ್ತು. ಅವರಲ್ಲಿ ಆಯ್ಕೆಯಾದ ಹತ್ತು ಜನರು ಸಿನಿಮಾದ ಹಾಡುಗಳೊಂದಿಗೆ ನೃತ್ಯ ಮಾಡಿ ಪ್ರತಿಭೆ ಮೆರೆದರು. ತೀರ್ಪುಗಾರರಾಗಿ ಆಗಮಿಸಿದ್ದ ಆರ್‌ಜೆ ಪ್ರೀತಿ ಈ ಹಾಡುಗಳನ್ನು ಆಯ್ಕೆ ಮಾಡುತ್ತಿದ್ದರು.ಕೊನೆಯ ಸುತ್ತಿಗೆ ನಂದಿತಾ ಸಂದೀಪ್ ಹಾಗೂ ಕಾವ್ಯಾ ಆಯ್ಕೆಯಾದರು. ಅಂತಿಮ ಸುತ್ತಿನಲ್ಲಿ ಬೇರೆ ಬೇರೆ ಗತಿಯ ಹಾಡುಗಳಿಗೆ ಸ್ಪರ್ಧಾಳುಗಳು ನೃತ್ಯ ಮಾಡಿ, ಸೊಂಟ ಬಳುಕಿಸಬೇಕಿತ್ತು. ಕೊನೆಗೂ `ಮೀನಾ ಹಂಟ್' ಕಿರೀಟ ಧರಿಸಿದ ಕಾವ್ಯಾ ಸಂತೋಷದಿಂದ ಬೀಗಿದರು. ಚಿತ್ರನಟಿ ಸಿಂಧು ಲೋಕನಾಥ್, ಕಾವ್ಯಾ ಅವರನ್ನು ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಯಶಸ್ಸು ಗಳಿಸಿದ ನಂದಿತಾ ಹಾಗೂ ಕಾವ್ಯಾ ಚೆನ್ನೈಗೆ ತೆರಳಿ ದೀಪಿಕಾ ಹಾಗೂ ಶಾರುಖ್ ಖಾನ್ ಅವರನ್ನು ಭೇಟಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.