ಬುಧವಾರ, ಏಪ್ರಿಲ್ 14, 2021
24 °C

ನರಸಿಂಹರಾಜು ಪ್ರಬಂಧ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸ್ಯ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದ ನಟ ದಿವಂಗತ ನರಸಿಂಹರಾಜು ಅವರ 89ನೇ ಜನ್ಮದಿನೋತ್ಸವ ಪ್ರಯುಕ್ತ `ಗೋಲ್ಸ್ ಅಂಡ್ ಡ್ರೀಮ್ಜ~ ಸಂಸ್ಥೆಯು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.ತಮ್ಮ ಹಾಸ್ಯ ನಟನೆಯ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ನಟ ಟಿ.ಆರ್. ನರಸಿಂಹರಾಜು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಪಾತ್ರಗಳು, ಅದರ ವಿಶೇಷತೆ, ಆ ಪಾತ್ರಗಳು ಮಾಡಿದ ಪರಿಣಾಮ ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ಪ್ರಬಂಧ ಸ್ಪರ್ಧೆ ಇರುತ್ತದೆ.`ಹಾಸ್ಯಾಭಿನಯಕ್ಕೆ ನರಸಿಂಹರಾಜು ಅವರ ಕೊಡುಗೆ~ ಮತ್ತು `ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಅವರು ಬೆಳೆದು ಬಂದ ಪರಿ~ ಈ ಎರಡು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಸಂಶೋಧನಾತ್ಮಕ ಪ್ರಬಂಧ ಬರೆಯಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಜು.15ರೊಳಗೆ ಪ್ರಬಂಧ ಬರೆದು ಕಳುಹಿಸಬೇಕು.ಮೊದಲ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ ಎರಡು ಸಾವಿರ ರೂ. ನಗದು ಬಹುಮಾನ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.   ಜು.24ರಂದು ಟೌನ್‌ಹಾಲ್‌ನಲ್ಲಿ ನಡೆಯುವ ನರಸಿಂಹರಾಜು ಜನ್ಮ ದಿನಾಚರಣೆಯಂದು ಬಹುಮಾನ ವಿತರಸಲಾಗುತ್ತದೆ.ಮಾಹಿತಿಗೆ: 94820 71501. narasimharaju.essay@gmail.com.  

.   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.