ಬೆಂಗಳೂರು: `ಸಾಹಿತ್ಯ ವಲಯವನ್ನು ವಿಸ್ತೃತವಾಗಿ ಚರ್ಚಿಸುವ ಸಂದರ್ಭದಲ್ಲಿ ವಿಮರ್ಶಕರು ಕಾವ್ಯಮೀಮಾಂಸೆಗೆ ನೀಡುವ ಪ್ರಾಧಾನ್ಯತೆಯನ್ನು ನಾಟಕ ಮೀಮಾಂಸೆಯಂತಹ ಪ್ರಮುಖ ಅಂಶಕ್ಕೆ ನೀಡುತ್ತಿಲ್ಲ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯ ಪ್ರಸನ್ನ ಅವರು ಖೇದ ವ್ಯಕ್ತಪಡಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ನವ್ಯೋತ್ತರ ಸಂದರ್ಭದ ಕನ್ನಡ ನಾಟಕಗಳು~ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನಾಟಕಗಳು ಕೇವಲ ಕಲೆಯ ಭಾಗವಾಗದೇ ಚಳವಳಿಯ ವೇದಿಕೆಯಾಗಿ ಬಳಕೆಗೊಂಡಿವೆ. ಹೊಸ ಸಮುದಾಯಕ್ಕೆ ದನಿಯಾಗಿ ನಾಟಕಗಳು ಮರು ರೂಪ ಪಡೆದಿದೆ.

ಆದರೆ ನಾಟಕದಲ್ಲಿರುವ ಕಾವ್ಯಮೀಮಾಂಸೆಯನ್ನು ಮಾತ್ರ ಪ್ರಮುಖವಾಗಿಸಿ ಈ ಬಗ್ಗೆ ಚರ್ಚಿಸಲಾಗುತ್ತದೆ ಹೊರತು ನಾಟಕದ ಸಮಗ್ರ ರೂಪವನ್ನು ವಿಮರ್ಶಿಸುವುದು ವಿರಳ~ ಎಂದು ಅಭಿಪ್ರಾಯಪಟ್ಟರು.

`ಕುವೆಂಪು ಅವರು ತಮ್ಮ ನಾಟಕಗಳು ಜನರ ಮನೋರಂಗದಲ್ಲಿ ಮಾತ್ರ ಬಿಂಬಿತಗೊಳ್ಳಬೇಕು ಎಂದು ಬಯಸಿದ್ದರು. ಇದು ಕಾವ್ಯ ಮೀಮಾಂಸೆಯೆಡೆಗೆ ಅವರಿಗಿದ್ದ ಒಲವನ್ನು ಸೂಚಿಸುತ್ತದೆ. ಎಲ್ಲ ಗೌರವಗಳ ನಡುವೆಯು ಕುವೆಂಪು ಅವರ ಈ ಭಾವವನ್ನು ತಿರಸ್ಕರಿಸಬೇಕಿದೆ.

ಆ ಮೂಲಕ ಹೊಸ ಭಾಷ್ಯ ಬರೆಯಬೇಕಿದೆ~ ಎಂದು ಹೇಳಿದರು. `ನಾಟಕ ರಂಗದಲ್ಲಿ `ರೂಪಾಂತರ~ ಮತ್ತು `ಅನುವಾದ~ಗಳೆಂಬ ತ್ರಿಶಂಕು ಸ್ವರ್ಗವನ್ನು ಅನಾವಶ್ಯಕವಾಗಿ ಸೃಷ್ಟಿಸಲಾಗಿದೆ. ಮಹಾನ್ ನಾಟಕಕಾರರೆಲ್ಲರೂ ಇತರೆ ಭಾಷೆಗಳ ನಾಟಕವನ್ನು ತಮ್ಮ ಸೃಜನಶೀಲತೆಯಿಂದ ಮರು ವ್ಯಾಖ್ಯಾನಗೊಳಿಸಿದ್ದು, ಇದನ್ನು ರೂಪಾಂತರ ಎಂಬ ಕ್ಲೀಷೆಯಿಂದ ಕರೆಯುವ ಅಗತ್ಯವಿಲ್ಲ~ ಎಂದರು.

ವಿಮರ್ಶಕ ಕೆ.ಮರುಳಸಿದ್ಧಪ್ಪ, `ಎಪ್ಪತ್ತರ ದಶಕದಲ್ಲಿ ರಾಜಕೀಯ ಅಂಶಗಳನ್ನಿಟ್ಟುಕೊಂಡು ಮೂಡಿ ಬಂದ ನಾಟಕಗಳು ಪರಿಣಾಮಕಾರಿಯಾಗಿದ್ದವು. ಅಷ್ಟೇ ಜನಪ್ರಿಯತೆ ಪಡೆದುಕೊಂಡವು. ನಾಟಕ ವಲಯದ ಸಮಗ್ರ ವಿಮರ್ಶೆಯನ್ನು ನಡೆಸುವ ಮೂಲಕ ಹೊಸ ದಿಕ್ಕನ್ನು ಕಂಡುಕೊಳ್ಳಬೇಕಿದೆ~ ಎಂದರು.

`ನವ್ಯೋತ್ತರ ಕಾಲಘಟ್ಟದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಬೀದಿ ನಾಟಕಗಳು ವಿಮರ್ಶೆಗೆ ಒಳಪಡದೇ ಇದ್ದರೂ ನಾಟಕದ ಇತಿಹಾಸದಲ್ಲಿಯೇ ಮಹತ್ತರ ಪಾತ್ರವನ್ನು ಪಡೆದುಕೊಳ್ಳುತ್ತವೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಹೆಚ್ಚು ತಿರುವು ಪಡೆದುಕೊಂಡ ಎಪ್ಪತ್ತರ ದಶಕವು ರಂಗಭೂಮಿ ಚಟುವಟಿಕೆಗಳನ್ನು ಹೆಚ್ಚು ಜನಪ್ರಿಯಗೊಳಿಸಿತು~ ಎಂದರು.

ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಪ್ರಾದೇಶಿಕ ಕಾರ್ಯದರ್ಶಿ ಎ.ಎಸ್.ಇಳಂಗೋವನ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.