ಸೋಮವಾರ, ಜುಲೈ 26, 2021
22 °C

ನೃತ್ಯ ಗಾನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೃತ್ಯ ಗಾನ ಸಂಭ್ರಮ

ಭಾರತ್ ಸಂಚಾರ ನಿಗಮದ ಪ್ರತಿಭಾ ಪ್ರೊತ್ಸಾಹ ಸಮಿತಿ ಮೇ 23 ರಿಂದ 26 ರವರೆಗೆ  ನೃತ್ಯ, ಗಾಯನ ಮತ್ತು ಚಿತ್ರಕಲೆ ವಿಭಾಗಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿದೆ. ಇಲಾಖೆಯ ನೌಕರರಲ್ಲದೆ ಸಾರ್ವಜನಿಕರು ಕೂಡ ಸ್ಪರ್ಧಿಸಬಹುದು. ವಿಜೇತರಿಗೆ ಪಾರಿತೋಷಕ, ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.

ಆಸಕ್ತರು ಅರ್ಜಿಗಳನ್ನು ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್ ಕ್ಯಾಂಟೀನ್‌ನಲ್ಲಿ ಪಡೆದು ಮೇ 20ರ ಒಳಗೆ ಸಲ್ಲಿಸಬೇಕು.ಮಾಹಿತಿಗೆ: 94490 03030, 94808 07422.ಬ್ಯೂಟೀಷಿಯನ್ ತರಬೇತಿ

ವಿಜಯನಗರ ಆರ್‌ಪಿಸಿ ಲೇಔಟ್‌ನ ಪ್ರಿಯದರ್ಶಿನಿ ಇಂದಿರಾ ಮಹಿಳಾ ಸಮಾಜ ಮೇ 5ರಿಂದ ಒಂದು ತಿಂಗಳ ಬ್ಯೂಟೀಷಿಯನ್ ಮತ್ತು ಹತ್ತು ದಿನದ ಮೆಹಂದಿ ತರಬೇತಿ ಶಿಬಿರ ಏರ್ಪಡಿಸಿದೆ.ಸ್ಥಳ: ನಂ. 694, 8ನೇ ಮುಖ್ಯರಸ್ತೆ, 6ನೇ ‘ಎ’ ಅಡ್ಡ ರಸ್ತೆ, ಆರ್‌ಪಿಸಿ ಬಡಾವಣೆ, ವಿಜಯನಗರ 2ನೇ ಹಂತ. ಮಾಹಿತಿಗೆ: ಅಂಬುಜಾ ಪ್ರಕಾಶ್ 99863 39619.ಧಾರ್ಮಿಕ ಶಿಬಿರ

ಶ್ರೀ ರಾಘವೇಂದ್ರ ಗುರುಸೇವಾ ಮಂಡಲಿ ವತಿಯಿಂದ 9 ವರ್ಷದ ಮೇಲ್ಪಟ್ಟವರಿಗಾಗಿ ಮೇ 6ರಿಂದ ಮೇ 15ರವರೆಗೆ ಧಾರ್ಮಿಕ ಬೇಸಿಗೆ ಶಿಬಿರ ನಡೆಯಲಿದೆ. ಸ್ಥಳ: ಶ್ರೀ ರಾಘವೇಂದ್ರ ಗುರುಸೇವಾ ಮಂಡಲಿ, 145, 13ನೇ ಎ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಗೋಕುಲ ಮೊದಲನೇ ಹಂತ. ಬೆಳಿಗ್ಗೆ 8.30ರಿಂದ ಸಂಜೆ 6.30. ಮಾಹಿತಿಗೆ: 94480 69022.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.