ಸೋಮವಾರ, ಜನವರಿ 20, 2020
18 °C

ನೈರ್ಮಲ್ಯ ಸಮಸ್ಯೆ ನಿವಾರಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಹಿರೇಮಗಳೂರು ಬಡಾವಣೆಯ 3ನೇ ವಾರ್ಡ್‌ಗೆ ಶನಿವಾರ ಭೇಟಿ ನೀಡಿದ್ದ ಪೌರಾಯುಕ್ತ ನಾಗಭೂಷಣ್ ಒಳ­ಚರಂಡಿ ನಿರ್ಮಾಣ ಕಾರ್ಯ, ಕುಡಿ­ಯುವ ನೀರು ಸರಬರಾಜು, ನೈರ್ಮಲ್ಯ ವ್ಯವಸ್ಥೆಯನ್ನು ಪರಿಶೀಲಿಸಿ ಜನರಿಂದ ಸಮಸ್ಯೆ ಆಲಿಸಿದರು.



ಲಕ್ಷ್ಮೀಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ನಿವೇಶನ ವೀಕ್ಷಿಸಿದ ಆಯುಕ್ತರು, ಜನ­ರೊಂದಿಗೆ ಸಮಾಲೋಚನೆ ನಡೆಸಿ­ದರು. ಬಾಕ್ಸ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿಪಡಿಸುವಂತೆ ಜನರು ಮಾಡಿ­ಕೊಂಡ ಮನವಿಗೆ ಸಕರಾತ್ಮಕ­ವಾಗಿ ಸ್ಪಂದಿಸಿದ ಆಯುಕ್ತರು ಮುಂದಿನ ದಿನಗಳಲ್ಲಿ ಈ ಕಾರ್ಯಗಳನ್ನು ಕೈಗೆತ್ತಿ­ಕೊಳ್ಳು­ವುದಾಗಿ ಹೇಳಿದರು.



ಹಿರೇಮಗಳೂರಿನಲ್ಲಿ ಪಕ್ಕಾ ಮನೆ ಯೋಜನೆಯಡಿ ನಿರ್ಮಿಸಿರುವ ಮನೆ­ಗಳನ್ನು ವೀಕ್ಷಿಸಿದರು. ಗುಂಡಿ ಹಟ್ಟಿಯಲ್ಲಿ ಚರಂಡಿ ಮತ್ತು ನೈರ್ಮಲ್ಯ ವ್ಯವಸ್ ಪರಿಶೀಲಿಸಿದರು. ಲಿಂಗಾ­ಯತರ ಬೀದಿಯಲ್ಲಿ ಪಾದಯಾತ್ರೆ­ಯಲ್ಲಿ ಸಾಗಿದ ಅವರು, ಹಲವರಿಂದ ಸಮಸ್ಯೆಗಳನ್ನು ಆಲಿಸಿದರು. ಒಂದೊಂದು ಮನೆಗೆ ಎರಡು ಮೂರು ನಲ್ಲಿ­ಗಳನ್ನು ಹಾಕಿಸಿಕೊಂಡಿದ್ದಾರೆ ಎಂಬ ದೂರನ್ನು ಆಲಿಸಿದ ಅವರು, ಆ ರೀತಿ ಹಾಕಿದ್ದರೆ ತೆಗೆಯುವಂತೆ ನೀರು­ಗಂಟಿಗೆ ಸೂಚಿಸಿದರು.



ಹಂಚಿನಮನೆ ಹತ್ತಿರದಲ್ಲಿ ಚರಂಡಿ­ಯಲ್ಲಿ ತ್ಯಾಜ್ಯ ನೀರು ಹರಿಯದೆ ನಿಂತಿರುವುದನ್ನು ಕಂಡ ಅವರು, ಹೊಸ­ದಾಗಿ ಚರಂಡಿ ನಿರ್ಮಾಣ ಆಗುವ­ವರೆಗೆ ಸ್ವಚ್ಛಗೊಳಿಸುವಂತೆ ಆರೋ­ಗ್ಯಾಧಿ­ಕಾರಿ ಆದೀಶ್‌ಗೆ ಸೂಚಿಸಿದರು.



ಗುಂಡಿನಮ್ಮ ದೇವಾಲಯಕ್ಕೆ ಸಾಗುವ ರಸ್ತೆಗೆ ಡಾಂಬರ್ ಹಾಕು­ವಂತೆ ಹಾಗೂ ಚರಂಡಿ ನಿರ್ಮಿಸಿ­ಕೊಡು­ವಂತೆ ಜನರು ಮನವಿ ಮಾಡಿದರು.



ಕೋದಂಡರಾಮಚಂದ್ರಸ್ವಾಮಿ ಬೀದಿಯಲ್ಲಿ ಸಾಗಿದ ಅವರು, ಒಳಚರಂಡಿ ಕಾಮಗಾರಿ ವೀಕ್ಷಿಸಿದರು. ಪರಿಶಿಷ್ಟರ ಕಾಲೋನಿಯ ಮುತ್ತಿನಮ್ಮ ದೇವಾಲಯ ಎದುರಿನಲ್ಲಿರುವ ನಗರ­ಸಭೆ ನಿವೇಶನದಲ್ಲಿ ಪಾರ್ಕ್ ನಿರ್ಮಿಸಿ ಅಭಿವೃದ್ಧಿಪಡಿಸುವಂತೆ ಎಂಜಿನಿ­ಯರ್‌ಗೆ ಸೂಚಿಸಿದರು.



ಕಾಲೊನಿಯ ಚಿಕ್ಕಮ್ಮ ದೇವಾಲ­ಯದ ಪಕ್ಕದಲ್ಲಿ ಜೀರ್ಣಾ­ವಸ್ಥೆ­ಯಲ್ಲಿರುವ ಸಮು­ದಾಯ ಭವನ­ವನ್ನು ತೆರವುಗೊಳಿಸಿ ಹೊಸ­ದಾಗಿ ನಿರ್ಮಿಸಲು ಉದ್ದೇಶಿಸಿರುವ ಕುರಿತು ನಗರಸಭೆ ಸದಸ್ಯ ಎಚ್.ಎಸ್.­ಪುಟ್ಟ­ಸ್ವಾಮಿ ಆಯುಕ್ತರಿಗೆ ಮಾಹಿತಿ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕುರಿತು ಯಾವುದೇ ದೂರುಗಳು ಸಾರ್ವಜನಿಕರಿಂದ ಬಾರದಂತೆ ನೋಡಿಕೊಳ್ಳಬೇಕು. ಈ ಕಾರ್ಯ­ಗಳಿಗೆ ಪ್ರಥಮಾದ್ಯತೆ ನೀಡ­ಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸ­ಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.



ಅಂಬೇಡ್ಕರ್ ಯುವ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಸಿ.ಗಂಗಾಧರ್, ಕಾರ್ಯದರ್ಶಿ ಪುಷ್ಪರಾಜ್, ಸುರೇಶ್, ಸಂತೋಷ ಇದ್ದರು.

ಪ್ರತಿಕ್ರಿಯಿಸಿ (+)