ಭಾನುವಾರ, ಮೇ 22, 2022
21 °C

ಪಂಕ್ತಿ ಭೇದ ವಿರುದ್ಧ ಕ್ರಮ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಜಕದ ಕುಂಜಾರು ಗಿರಿಯಲ್ಲಿ ಜಾತಿ ಕೇಳಿ ಊಟದಿಂದ ಹೊರಕಳುಹಿಸಿದ ಘಟನೆ ಅಮಾನವೀಯವಾದುದು. ಪಶ್ಚಿಮ ಕರಾವಳಿ ಸಾಲಿನ ದೇವಸ್ಥಾನಗಳಲ್ಲಿ ಈಗಲೂ ಈ ಅನಿಷ್ಟ ಪದ್ಧತಿ, ಬ್ರಾಹ್ಮಣರು- ಬ್ರಾಹ್ಮಣೇತರ ಪಂಕ್ತಿಭೇದ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇಂಥದೇ ಅನುಭವ, ಕೆಲವು ದೇವಾಲಯಗಳಲ್ಲಿ ನನಗೂ ಆಗಿದೆ.

ಅಪರೂಪಕ್ಕೆ ಯಾರಾದರೂ ಇವರ ಜಾತೀಯತೆಯ ಈ ಕೆಟ್ಟ ಪದ್ಧತಿಯ ಬಗ್ಗೆ ಗಟ್ಟಿಯಾಗಿ ಕೇಳಿದರೆ, ಒಂದು ಸಿದ್ಧ ಉತ್ತರ ಕಾದಿರುತ್ತದೆ. `ವಿಶೇಷ ಪೂಜೆ ಮಾಡಿಸಿದವರು ಅಥವಾ ಹರಕೆ ಹೊತ್ತವರು ತಮ್ಮ ಹಣದಿಂದ ಸಮಾರಾಧನೆ ಮಾಡಿಸುತ್ತಾರೆ. ಅಪರಿಚಿತರು (ಬ್ರಾಹ್ಮಣೇತರರು) ಊಟಕ್ಕೆ ಕೂತರೆ ಎಬ್ಬಿಸಬೇಕಾಗುತ್ತದೆ~ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಹರಕೆ ಹೊತ್ತವರು ಬ್ರಾಹ್ಮಣರೇ ಆಗಿರುತ್ತಾರೆಯೆ? ಹಾಗೊಂದು ವೇಳೆ ಹರಕೆ ಹೊತ್ತವರು ತಮ್ಮ ಹಣದಿಂದಲೇ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಿದರೂ, ಊಟಕ್ಕೆ ಕೂತ ಬ್ರಾಹ್ಮಣೇತರರನ್ನು ಅರ್ಚಕರೇ ನಿರ್ದಾಕ್ಷಿಣ್ಯವಾಗಿ ಎಬ್ಬಿಸುವ ಪದ್ಧತಿಯನ್ನು ಏಕೆ ಪೋಷಿಸಬೇಕು.

ವಾಸ್ತವವಾಗಿ ಅವರು ಹೇಳುವ ಸಹಭೋಜನವೆಂದರೆ, ಬ್ರಾಹ್ಮಣೇತರರಿಗಾಗಿ ಮಾಡಿದ ವ್ಯವಸ್ಥೆ, ಹರಕೆ ಊಟವೆಂದರೆ ದೇವಸ್ಥಾನದವರೇ ದೇವಸ್ಥಾನದ ಹಣದಿಂದ ಬ್ರಾಹ್ಮಣರಿಗೆ ಮಾತ್ರ ಮಾಡಿದ ವ್ಯವಸ್ಥೆ. ಜಾತಿಭೇದವನ್ನು ಆಚರಿಸಲು ಇತ್ತೀಚೆಗೆ ಈ ಅರ್ಚಕರು ಕಂಡುಕೊಂಡ ಉಪಾಯವೇ ಈ ಹರಕೆ ಅಥವಾ ವಿಶೇಷ ಪೂಜೆ ಊಟ. ಮುಜರಾಯಿ ಇಲಾಖೆ ಇಂಥ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.