ಶುಕ್ರವಾರ, ಏಪ್ರಿಲ್ 23, 2021
32 °C

ಪತ್ನಿಯೇ ಶ್ರೀಮಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಿ.ಕೆ.ಸಿ.ರೆಡ್ಡಿ ಅವರಿಗಿಂತ ಪತ್ನಿಯೇ ಶ್ರೀಮಂತರು. ಗಅವರ ಹೆಸರಿನಲ್ಲಿ ಸ್ವಂತ ಮನೆಯೂ ಇಲ್ಲ ಮತ್ತು ವಾಹನ­ವನ್ನೂ ಹೊಂದಿಲ್ಲ.

ಜಿ.ಕೆ.ಸಿ.ರೆಡ್ಡಿ ₨ 12 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ₨ 31.20 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪುತ್ರಿ ₨ 16.30 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ವಂಶ ಪಾರಂ­ಪರ್ಯವಾಗಿ ಬಂದ ₨ 5 ಲಕ್ಷದಷ್ಟು ಸ್ಥಿರಾಸ್ತಿ ರೆಡ್ಡಿ­ಯವರ ಹೆಸರಿನಲ್ಲಿದ್ದರೆ, ₨ 6 ಲಕ್ಷ ಮೌಲ್ಯದ ಸ್ಥಿರಾಸ್ತಿ ಪತ್ನಿ ಹೆಸರಿನಲ್ಲಿದೆ.ರೆಡ್ಡಿಯವರಿಗಾಗಲಿ ಅಥವಾ ಅವರ ಕುಟುಂಬ ಸದಸ್ಯರಿಗಾಗಲಿ ಬ್ಯಾಂಕ್‌ಗಳಲ್ಲಿ ಯಾವುದೇ ಸಾಲ ಇಲ್ಲ. ರೆಡ್ಡಿಯವರ ಪತ್ನಿ ಬಳಿ ₨ 20 ಸಾವಿರ ಮೌಲ್ಯದ ಹೋಂಡಾ ಎವಿಯೇಟರ್‌ ವಾಹನವಿದ್ದರೆ, ಅವರ ಪುತ್ರಿ ಬಳಿ ₨ 3.67 ಲಕ್ಷ ಮೌಲ್ಯದ ಮಾರುತಿ ಆಲ್ಟೊ ಇದೆ. ಆದರೆ ರೆಡ್ಡಿಯವರ ಬಳಿ ಯಾವುದೇ ವಾಹನವಿಲ್ಲ.ರೆಡ್ಡಿಯವರ ಪತ್ನಿ ಬಳಿ ₨ 25 ಲಕ್ಷ ಮೌಲ್ಯದ 1 ಕೆ.ಜಿ. ಚಿನ್ನ, ₨ 2.40 ಲಕ್ಷ ದ 5 ಕೆ.ಜಿ. ಬೆಳ್ಳಿಯಿದೆ. ಅವರ ಪುತ್ರಿ ಬಳಿ ₨ 12.50 ಲಕ್ಷ ಮೌಲ್ಯದ 500 ಗ್ರಾಂ ಚಿನ್ನ ಇದೆ. ರೆಡ್ಡಿಯವರ ಬಳಿ ಸದ್ಯಕ್ಕೆ ₨ 50 ಸಾವಿರ ನಗದು ಇದ್ದರೆ, ಅವರ ಪತ್ನಿ ಬಳಿ ₨ 25 ಸಾವಿರ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.