ಗುಲ್ಬರ್ಗ: ಚರಿತ್ರೆಯ ‘ಸುವರ್ಣಯುಗ’ ಎಂದೇ ಖ್ಯಾತಿ ಪಡೆದ ವಿಜಯನಗರ ಅರಸರ ಆಳ್ವಿಕೆಯು, ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಮೂಡಿಸಿದೆ. ವಿಜಯನಗರದ ಅರಸರ ಪೈಕಿ ಜಗತ್ಪ್ರಸಿದ್ಧಿ ಪಡೆದ ಶ್ರೀಕೃಷ್ಣದೇವರಾಯನ ಆಡಳಿತ ಕಂಡು ವಿದೇಶಿ ಪ್ರವಾಸಿಗರು ಮನದುಂಬಿ ಹೊಗಳಿದ್ದಾರೆ.

ಶ್ರೀ ಕೃಷ್ಣದೇವರಾಯನ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವನ್ನು ರಾಜ್ಯ ಸರ್ಕಾರ ಈಗಾಗಲೇ ಹಂಪಿಯಲ್ಲಿ ನಡೆಸಿದೆ. ವಿಜಯನಗರದ ವೈಭವದ ಬಗ್ಗೆ ಇತರೆಡೆಯ ಜನರಿಗೂ ಮಾಹಿತಿ ನೀಡಲು ಸಂಚಾರಿ ಧ್ವನಿ ಬೆಳಕು ಏರ್ಪಡಿಸಲಾಗುತ್ತಿದೆ. ಇದರ ಅಂಗವಾಗಿ ಗುಲ್ಬರ್ಗದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ನಡೆಯಿತು.

ಬ್ರಿಟಿಷ್ ಮೂಲದ ಬಾರ್ಬಸ್ಗೆ ನಾಡಿನ ವೈಭವ ಪರಿಚಯಿಸುವ ರೀತಿಯಲ್ಲಿ ಇಡೀ ವಿಜಯನಗರದ ಸಾಮ್ರಾಜ್ಯದ ಆ ದಿನಗಳನ್ನು ಜನರ ಮುಂದಿಡಲಾಗಿದೆ. ಸುಮಾರು 230 ಚದರ ಅಡಿ ವಿಸ್ತೀರ್ಣ ಹಾಗೂ 40 ಅಡಿ ಎತ್ತರದ ವೇದಿಕೆಯನ್ನು ಇದಕ್ಕಾಗಿಯೇ ಪ್ರತ್ಯೇಕವಾಗಿ ನಿರ್ಮಿಸಲಾಗಿತ್ತು. ವಿಜಯನಗರ ಆಡಳಿತದಲ್ಲಿ ನಿರ್ಮಾಣಗೊಂಡ ಗಣಪತಿ, ಸಂಗೀತದ ಶಿಲಾ ಕಂಬಗಳು, ವಿರೂಪಾಕ್ಷ ದೇಗುಲ, ಅಂದದ ಉದ್ಯಾನ, ರಥ, ಅಂತಃಪುರ, ಶಿವಲಿಂಗ ಹೀಗೆ ವಿವಿಧ ಸ್ಮಾರಕಗಳ ಸೆಟ್ಗಳನ್ನು ವೇದಿಕೆಯ ವಿವಿಧೆಡೆ ಅಳವಡಿಸಿ, ಕಾರ್ಯಕ್ರಮವು ಹಂಪಿಯ ಹಳೇ ವೈಭವವನ್ನು ನೆನಪಿಸುವಂತೆ ಮಾಡಲಾಗಿತ್ತು. ಹಂಪಿಯಿಂದ ಹಿಡಿದು ಕಾವೇರಿ ತೀರದ ಗಗನಚುಕ್ಕಿ ಭರಚುಕ್ಕಿಯ ಇತಿಹಾಸ ಹೇಳುವ ಪರಿ ನಮ್ಮನ್ನೊಮ್ಮೆ ರಾಜ್ಯ ಸಂಚಾರ ಮಾಡಿಸುತ್ತದೆ.

ವಿಜಯನಗರದ ಅರಸರ ಪೈಕಿ ಹೆಚ್ಚು ಖ್ಯಾತಿ ಗಳಿಸಿದ ಶ್ರೀಕೃಷ್ಣದೇವರಾಯನ ಜೀವನ-ಸಾಧನೆಯ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸಿದ ಧ್ವನಿ ಬೆಳಕು ಕಾರ್ಯಕ್ರಮ, ನೋಡುಗರನ್ನು ಮೋಡಿ ಮಾಡಿತು. ಅರಸನಾಗಿ ಅಧಿಕಾರಕ್ಕೆ ಬಂದ ದಿನಗಳು, ಆತನ ಪಟ್ಟಾಭಿಷೇಕ, ರಾಜ್ಯ ವಿಸ್ತರಿಸಲು ನಡೆಸಿದ ವಿವಿಧ ಯುದ್ಧಗಳ ಶಬ್ದ ವಿನ್ಯಾಸವು ಜನರನ್ನು ಆ ದಿನಗಳಿಗೆ ಕರೆದೊಯ್ದವು.

ಕೃಷ್ಣದೇವರಾಯನ ಹುಟ್ಟಿನಿಂದ ಆರಂಭವಾಗುವ ಪ್ರದರ್ಶನವು, ಆತನ ಆಡಳಿತ ಕೌಶಲ, ರಾಜತಾಂತ್ರಿಕ ವಿಚಾರಗಳು, ಯುದ್ಧಗಳಲ್ಲಿ ವಿಜಯೋತ್ಸವ, ಧಾರ್ಮಿಕ ವಿಧಾನಗಳತ್ತ ಆತನ ಒಲವು, ಸಾಹಿತ್ಯ- ಸಂಗೀತಕ್ಕೆ ನೀಡಿದ ಪ್ರೋತ್ಸಾಹ ಮತ್ತಿತರ ಮಾಹಿತಿಯನ್ನು ತೆರೆದಿಟ್ಟಿತು.

ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ವಿಜಯನಗರದ ಸ್ಮಾರಕಗಳ ಕೃತಕ ಸೆಟ್ಗಳು. ಕಲ್ಲಿನ ರಥ, ವಿಜಯವಿಠ್ಠಲ ದೇಗುಲ, ಕಮಲಮಹಲ್, ಕಡಲೇಕಾಳು ಗಣೇಶ, ಸಾಸಿವೆಕಾಳು ಗಣೇಶ, ಉಗ್ರನರಸಿಂಹ, ರಾಜನ ತುಲಾಭಾರ, ವಿರೂಪಾಕ್ಷ ದೇವಸ್ಥಾನ, ಮಹಾನವಮಿ ದಿಬ್ಬ, ತುಂಗಭದ್ರಾ ನದಿ, ಬಸವಣ್ಣ, ತಳವಾರಘಟ್ಟ ದ್ವಾರ, ಇತರ ಶಿಲಾಮಂಟಪಗಳು ಪ್ರೇಕ್ಷಕರನ್ನು ಆಕರ್ಷಿಸಿದವು.

ಹಿನ್ನೆಲೆ ಧ್ವನಿ: ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿ ಆಯೋಜಿಸಲಾಗಿತ್ತು. ಟಿ.ಎಸ್.ನಾಗಾಭರಣ ಅವರ ನಿರ್ದೇಶನ, ಸಂಯೋಜನೆ, ಪರಿಕಲ್ಪನೆಯಲ್ಲಿ ಇಡೀ ಶಬ್ದ ದೃಶ್ಯ ವೈಭವ ಮೂಡಿದೆ. ಜನಪದ ಹಾಡುಗಳು, ಇತಿಹಾಸದ ನೆನಪುಗಳು, ಸಂಗೀತದ ಸ್ಪರ್ಶವು ರೋಮಾಂಚನ ನೀಡಿದೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಗಾಯಕರ ಧ್ವನಿಯನ್ನು ಪ್ರದರ್ಶನಕ್ಕೆ ಬಳಸಿಕೊಂಡಿದ್ದು ಇನ್ನೊಂದು ವಿಶೇಷ. ಭಾವಕ್ಕೆ ತಕ್ಕಂತೆ ಕೆಂಪು, ಹಸಿರು, ಬಿಳಿ... ಹೀಗೆ ಬಣ್ಣಗಳ ಬಳಕೆ ಮಾಡಲಾಗಿದೆ. ಅಲ್ಲದೇ ಬೆಳಕಿನ ಆಟವೂ ಮನೋಹರವಾಗಿದೆ.

ಕಲಾವಿದರಾದ ಸುಧಾರಾಣಿ, ಟಿ.ಎಸ್.ನಾಗಾಭರಣ, ಅನು ಪ್ರಭಾಕರ, ಬಿ.ವಿ.ರಾಜಾರಾಮ್, ಮುರಳಿ, ಕೆ.ಎಸ್.ರವೀಂದ್ರನಾಥ, ಕಲಾಗಂಗೋತ್ರಿ ಕಿಟ್ಟಿ, ಶರತ್ ಲೋಹಿತಾಶ್ವ ಹಾಗೂ ಖ್ಯಾತ ಹಿನ್ನೆಲೆ ಗಾಯಕರಾದ ಹೇಮಂತ ಕುಮಾರ್, ರಾಜೇಶ ಕೃಷ್ಣ, ಚೇತನ ಹಾಗೂ ನಂದಿತಾ ಅವರ ಕಂಠದಿಂದ ಮೂಡಿಬಂದ ಸಂಭಾಷಣೆಗಳು ಪ್ರದರ್ಶನಕ್ಕೆ ಕಳೆ ತಂದವು.

ಆದರೆ ಕಲಾವಿದರಿಲ್ಲದೇ ಬರೀ ಬೆಳಕು ಮತ್ತು ಶಬ್ದಗಳ ಮೂಲಕ ಹೇಳಲು ಪ್ರಯತ್ನಿಸಿದ್ದು ಕಾರ್ಯಕ್ರಮದ ಒಟ್ಟು ಯಶಸ್ಸಿಗೆ ಮಂಕು ಹಿಡಿದಂತಾಯಿತು. ದೃಶ್ಯ ವೈಭವ ಇದ್ದರೂ ಏಕತಾನತೆ ಮೂಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.