ಶುಕ್ರವಾರ, ಏಪ್ರಿಲ್ 16, 2021
32 °C

ಪಿಎಚ್.ಡಿ ವಯೋಮಿತಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಿಎಚ್‌ಡಿ ಪೂರೈಸಲು ಶಿಕ್ಷಕರಿಗಿದ್ದ ವಯೋಮಿತಿಯನ್ನು 45 ರಿಂದ 50 ವರ್ಷಗಳಿಗೆ ಮತ್ತು ಶಿಕ್ಷಕಿಯರ ವಯೋಮಿತಿಯನ್ನು 50ರಿಂದ 55 ವರ್ಷಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಕಳೆದ ವಾರ ಸುತ್ತೋಲೆ ಹೊರಡಿಸಿದೆ.ಮಂಗಳೂರು ವಿ.ವಿ. ಕಾಲೇಜು ಶಿಕ್ಷಕರ ಸಂಘದ (ಅಮುಕ್ತ್) ವತಿಯಿಂದ ನಗರದ ಬೆಸೆಂಟ್ ಕಾಲೇಜಿನಲ್ಲಿ ಭಾನುವಾರ ನಡೆದ ಉನ್ನತ ಶಿಕ್ಷಣದ ಮೇಲಿನ ಸಮಾವೇಶದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ವಿ.ಕಮಲಮ್ಮ ಈ ವಿಷಯ ತಿಳಿಸಿದರು.ಇದರ ಜತೆಗೆ ಪಿಎಚ್‌ಡಿಗೆ ಪೂರ್ವಸಿದ್ಧತೆ ನಡೆಸಲು ಮೂರು ತಿಂಗಳ ವೇತನ  ಸಹಿತ ರಜೆಯನ್ನೂ ಮಂಜೂರು ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಮಲಮ್ಮ ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.