ಬೆಂಗಳೂರು: ಲಿಖಿತ ಉತ್ತರದ ಪರೀಕ್ಷೆಯಲ್ಲಿ ಫೈನಲ್ ತಲುಪಲು ಅರ್ಹತೆ ಗಿಟ್ಟಿಸದೆ ಸಭಿಕರಲ್ಲಿ ಕುಳಿತಿದ್ದ ಹುಡುಗ ಪೂರ್ಣಪ್ರಜ್ಞ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸುಹಾಸ್ ಅಡಿಗ. ಕ್ವಿಜ್ ಮಾಸ್ಟರ್ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ ಈ ಹುಡುಗ ಕೈಎತ್ತಿ ಉತ್ತರ ಹೇಳಲು ತವಕಿಸುತ್ತಿದ್ದ. ಯಾವುದೇ ಪ್ರಶ್ನೆ ಕೇಳಿದರೂ ಕೈ ಎತ್ತುತ್ತಿದ್ದ ಆತನನ್ನು ಕಂಡು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು.

ಪ್ರೇಕ್ಷಕರಿಗೆ ವರ್ಗಾವಣೆಗೊಂಡ ಪ್ರಶ್ನೆಗಳಲ್ಲಿ ಒಂದೂ ಸುಹಾಸ್ನತ್ತ ಸುಳಿಯದಿದ್ದಾಗ ಸ್ವತಃ ಕುಲಪತಿ ಅವರು ಮೈಕ್ ಪಡೆದು ಆತನ ಕೈಗಿತ್ತರು. ಸರಿ ಉತ್ತರ ಹೇಳಿದ ಆತ, ಬಹುಮಾನ ಪಡೆದು ಸಂಭ್ರಮಿಸಿದ.

‘ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸಲು ನಿತ್ಯ ಕೆಲಕಾಲ ಮೀಸಲಿಡುತ್ತೇನೆ’ ಎಂದು ಆತ ಹೇಳಿದ. ‘ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಮೊದಲ ಪ್ರಶಸ್ತಿ ಪಡೆಯಲು ಯತ್ನಿಸುತ್ತಿದ್ದೆ’ ಎಂದು ಆತ್ಮವಿಶ್ವಾಸದಿಂದ ನುಡಿದ. ಉತ್ತರ ಹೇಳಿ ಬಹುಮಾನ ಪಡೆದಿದ್ದಕ್ಕೆ ಸ್ನೇಹಿತರು ಆತನನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.