ಮಂಗಳವಾರ, ಜನವರಿ 21, 2020
29 °C

ಪ್ರಬಂಧ ಸ್ಪರ್ಧೆ: ರೋಶನಿ ದ್ವಿತೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾದ ರೋಶನಿ ಚನ್ನಾಳ ಒಡಿಶಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾಳೆ. ರೂ 3 ಲಕ್ಷ ಬಹುಮಾನ ಹಾಗೂ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಕಳಿಂಗ ವಿ.ವಿ ಯಲ್ಲಿ ಉಚಿತವಾಗಿ ಮಾಡಬಹುದಾಗಿದೆ.ವಸತಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾಹಿತ್ಯಾ ಆಲಕಟ್ಟಿ ಮಾನವ ಸಂಪನ್ಮೂಲ ಇಲಾಖೆಯಿಂದ ನಡೆದ ವಿದ್ಯಾರ್ಥಿ ಯುವಜನ ವಿನಿಮಯ ಸಂಪರ್ಕ ಜಾಲ ಯೋಜನೆ ಅಡಿಯಲ್ಲಿ ಜಪಾನಿನಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮರಳಿದ್ದಾಳೆ.ವಸತಿ ಶಾಲೆಯ ಮತ್ತೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಸ್ವರ್ಣಗೌರಿ ಹಿರೇಮಠ ಜನವರಿಯಲ್ಲಿ ಪಟೌಡಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ರಾಷ್ಟ್ರೀಯ ಸಾಂಸ್ಕೃತಿಕ ಭಾವೈಕ್ಯ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ.

 

ಪ್ರತಿಕ್ರಿಯಿಸಿ (+)