ಫ್ರಾಂಚೈಸಿ ಇಂಡಿಯಾ ಬೆಂಗಳೂರಿನಲ್ಲಿ ನಡೆಸಿದ 42 ನೇ ಫ್ರಾಂಚೈಸಿ, ರಿಟೇಲ್ ಎಕ್ಸ್ಪೊ ಯಶಸ್ವಿಯಾಗಿ ನಡೆಯಿತು.ಹೂಡಿಕೆದಾರರು ಮತ್ತು ಕಂಪನಿ ಮುಖ್ಯಸ್ಥರ ನೇರ ಮುಖಾಮುಖಿಗೆ ವೇದಿಕೆ ಒದಗಿಸಿದ ಈ ಎಕ್ಸ್ಪೊದಲ್ಲಿ ಫ್ರಾಂಚೈಸಿಂಗ್, ಪರವಾನಗಿ, ರಿಟೇಲ್ ವ್ಯಾಪಾರ, ರಿಯಲ್ ಎಸ್ಟೇಟ್, ಫ್ಯಾಶನ್, ಲೈಫ್ ಸ್ಟೈಲ್, ಆಹಾರ ಮತ್ತು ಪಾನೀಯ, ಶಿಕ್ಷಣ, ಆರ್ಥಿಕ ಸೇವೆಗಳು, ಔಷಧಿ ಹಾಗೂ ಸ್ವಾಸ್ಥ್ಯ, ಪ್ರಯಾಣ ಸೇರಿದಂತೆ ವಿವಿಧ ವಲಯಗಳ 150 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು.

ಡಿಟಿಡಿಸಿ, ಪೋದಾರ್, ಜಂಬೊ ಕಿಡ್ಸ್, ಮೆಕ್ಸಿಸ್ ಎಜ್ಯುಕೇಶನ್, ಎವೆರಾನ್, ನ್ಯಾಚುರಲ್ಸ್, ಲಿಟಲ್ ಲಿಲ್ಲಿ, ವೆಬ್ಕಾಮ್ ಇ ಟ್ರೇಡ್, ಟಿಟಿಕೆ ಪ್ರೆಸ್ಟೀಜ್, ಎಂಡಿಎನ್ ಎಡಿಫೈ ಎಜ್ಯುಕೇಶನ್, ಪ್ರೆಸ್ಟೊ ಪರ್ಸನಲೈಸ್ಡ್ ವಂಡರ್ಸ್, ಮೋಹನ್ ಇಂಪ್ರೆಷನ್ಸ್, ಮೇರಿ ಬ್ರೌನ್, ಪ್ರೊಟೈನರ್, ಡೊನೇರ್ ಇಂಡಸ್ಟ್ರೀಸ್, ಮದರ್ ಅರ್ಥ್, ಫುಲ್ ಮಾರ್ಕ್ ಸೇಲ್ಸ್ ಪಿಟಿಇ, ಕ್ಲಾಸಿಕ್ ಪೊಲೊ, ಎಸ್ಟಿಸಿ ಟೆಕ್ನಾಲಜಿ, ಮ್ಯೋಕ್ಸ್ ಹೈರ್, ಡ್ರೀಮ್ ಝೋನ್, ಸ್ಪೋರ್ಟಿ

ಬೀನ್ಸ್, ಕಾಸಾ ಡಿ ಬಂಬಿನಿ, ತರಾಜ್ ಫ್ಯಾಷನ್, ಆಶಾ ಟೆಕ್ಸ್ಟೈಲ್ಸ್, ಫ್ರೆಶ್ ಅಂಡ್ ನ್ಯಾಚುರಲ್ ಐಸ್ಕ್ರೀಮ್, ಡಾಟಾ ಪಿಒಆರ್ಒ ಕಂಪ್ಯೂಟರ್ಸ್, ಇಂಟರ್ನ್ಯಾಶನಲ್ ಸ್ಕೂಲ್ ಆಫ್ ಡಿಸೈನ್ಸ್, ಜಿಂಕ್ ಸ್ಕ್ವಾರ್, ಕಿಂಗ್ಫಿಶರ್ ಅಕಾಡೆಮಿ, ಸಿಬಿಟಿಎಲ್ ಮತ್ತಿತರ ಕಂಪೆನಿಗಳು ಮಾಹಿತಿ ನೀಡಿದವು.

ಈ ಸಂದರ್ಭದಲ್ಲಿ ಸ್ಟಾರ್ಟ್ ಅಪ್ ಶೃಂಗ 2011ವೂ ನಡೆಯಿತು. ಹೊಸ ಕಂಪನಿ ರಚನೆ, ವ್ಯಾಪಾರ ಯೋಜನೆ ಸಿದ್ಧಪಡಿಸುವುದು, ಹಣಕಾಸು ಹೊಂದಿಸಿಕೊಳ್ಳುವುದು, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಪರಿಣಿತರು ಮಾಹಿತಿ ನೀಡಿದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಲ್ಲಿನ ಸಂಭಾವ್ಯ ಉದ್ಯಮಿಗಳ ಜೊತೆ ನೆಟ್ವರ್ಕಿಂಗ್ ಹಾಗೂ ತಮ್ಮ ಫ್ರಾಂಚೈಸಿಂಗ್ ಪರಿಕಲ್ಪನೆಗಳ ಬಗ್ಗೆ ಸಮಾಲೋಚನೆ ಮತ್ತು ವಿಸ್ತರಣೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು ಎಂದು ಫ್ರಾಂಚೈಸಿ ಇಂಡಿಯಾ ಸಿಇಒ ಅಶ್ನಾ ಶರಣ್, ಅಧ್ಯಕ್ಷ ಗೌರವ್ ಮೌರ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.