ಗುರುವಾರ , ಜನವರಿ 23, 2020
20 °C

ಬಿಂದ್ರಾ ಆರೋಪ ಅಲ್ಲಗಳೆದ ಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಭಾರತದ ಕ್ರಿಕೆಟಿಗರು 2010ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಐ.ಎಸ್.ಬಿಂದ್ರಾ ಮಾಡಿರುವ ಆರೋಪಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಲ್ಲಗಳೆದಿದೆ.`ನಿಯಮ ಉಲ್ಲಂಘನೆಯ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಮೇಲೆ ಬಿಸಿಸಿಐ ಒತ್ತಡ ಹೇರಿ ಅದನ್ನು ತೆಗೆಸಿತ್ತು' ಎಂದೂ ಬಿಂದ್ರಾ ಆರೋಪಿಸಿದ್ದರು.`ಈ ರೀತಿಯ ಪ್ರಕರಣವೇ ನಡೆದಿಲ್ಲ. ಯಾರಿಗೂ ವರದಿ ನೀಡಿಲ್ಲ. ಈಗ ಮಾಡಲಾಗಿುವ ಆರೋಪ ಸುಳ್ಳಿನ ಕಂತೆ' ಎಂದು ಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆ್ಯಷ್ಲೆ ಡಿ ಸಿಲ್ವಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ಬಿಂದ್ರಾ ಸೋಮವಾರ ಮತ್ತೊಮ್ಮೆ ನುಡಿದಿದ್ದಾರೆ.

ಪ್ರತಿಕ್ರಿಯಿಸಿ (+)