ಶನಿವಾರ, ಫೆಬ್ರವರಿ 27, 2021
31 °C

ಬಿಎಫ್‌ಸಿ- ಮುಂಬೈ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ- ಮುಂಬೈ ಹಣಾಹಣಿ

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌  (ಬಿಎಫ್‌ಸಿ) ತಂಡದವರು ಭಾನುವಾರ ಇಲ್ಲಿ ನಡೆಯುವ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ಫುಟ್‌ಬಾಲ್‌ ಕ್ಲಬ್‌ ತಂಡದ ಸವಾಲನ್ನು ಎದುರಿಸಲಿದ್ದಾರೆ.



ಟೂರ್ನಿಯಲ್ಲಿ ಇನ್ನು ಕೇವಲ ಒಂಬತ್ತು ಪಂದ್ಯಗಳು ಮಾತ್ರ ಬಾಕಿ ಇವೆ.  ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಮೂಲಕ  ಅಗ್ರಸ್ಥಾನ ಭದ್ರ ಪಡಿಸಿಕೊಳ್ಳುವುದು ತಂಡದ ಗುರಿ.



ಆ್ಯಶ್ಲೆ ವೆಸ್ಟ್‌ವುಡ್‌ ಗರಡಿಯಲ್ಲಿ ಪಳಗಿರುವ ಆತಿಥೇಯ ತಂಡದ ಆಟ ಗಾರರು  ಟೂರ್ನಿಯ ಆರಂಭ ದಿಂದಲೂ ಗಮನಾರ್ಹ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಈ ಪಂದ್ಯದಲ್ಲೂ ಇದೇ ಆಟವನ್ನು ಪುನ ರಾವರ್ತಿಸುವ ಉತ್ಸಾಹದಲ್ಲಿದ್ದಾರೆ.



ಇನ್ನೊಂದೆಡೆ ಪಾಯಿಂಟ್‌ ಪಟ್ಟಿ ಯಲ್ಲಿ 10 ನೇ ಸ್ಥಾನ ಪಡೆದಿರುವ ಮುಂಬೈ ಕೂಡಾ ಜಯ ದಾಖಲಿಸುವ ಲೆಕ್ಕಾಚಾರದಲ್ಲಿದೆ. ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ತೋರುವಲ್ಲಿ ಈ ತಂಡದ ಆಟಗಾರರು ವಿಫಲರಾಗಿದ್ದಾರೆ. ಉಭಯ ತಂಡಗಳ ಬಲಾಬಲವನ್ನು ಗಮನಿಸಿದರೆ ಬಿಎಫ್‌ಸಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.