ಗುರುವಾರ , ಮೇ 6, 2021
32 °C

ಬಿಜೆಪಿ ಚಳವಳಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಉತ್ತರಾಖಂಡದಲ್ಲಿ ಮಳೆ ಅನಾಹುತದಿಂದಾಗಿ ನೂರಾರು ಜನರು ಮೃತಪಟ್ಟು, ಸಾವಿರಾರು ಮಂದಿ ಸಂಕಷ್ಟದಲ್ಲಿ ಇರುವುದರಿಂದ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ `ಜೈಲ್ ಭರೋ' ಚಳವಳಿಯನ್ನು ಬಿಜೆಪಿ ಸ್ಥಗಿತಗೊಳಿಸಿದೆ.ಕೇಂದ್ರದ ಹಗರಣಗಳು, ಬೆಲೆ ಏರಿಕೆ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯನ್ನು ವಿರೋಧಿಸಿ ಈ ತಿಂಗಳ 17ರಿಂದ 30ರ ವರೆಗೆ ಬಿಜೆಪಿ ಜೈಲ್ ಭರೋ ಚಳವಳಿಯನ್ನು ಹಮ್ಮಿಕೊಂಡಿತ್ತು. ಮೊದಲಿಗೆ ಮೇ 27ರಿಂದ ಜೂನ್ 2ರ ವರೆಗೆ ಎಂದು ಈ ಚಳವಳಿ ನಿಗದಿಯಾಗಿತ್ತು. ಆದರೆ ಛತ್ತೀಸಗಡದಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ನಕ್ಸಲರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಳವಳಿಯನ್ನು ಮುಂದೂಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.