ಶುಕ್ರವಾರ, ಜೂನ್ 18, 2021
23 °C

ಬಿರುಕು ಬಿಟ್ಟ ರೈಲ್ವೆ ಹಳಿ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ರೈಲು ಹಳಿ ಬಿರುಕುಬಿಟ್ಟ ಘಟನೆ ತಾಲ್ಲೂಕಿನ ನಿಡಘಟ್ಟ ಬಳಿ ನಡೆದಿದ್ದು, ಯಾವುದೇ ಅಪಾಯ ಸಂಭ­ವಿಸಿಲ್ಲ. ಆದರೆ, ಪ್ರಯಾಣಿಕರು ಆತಂಕಕ್ಕೆ ಒಳಗಾದದರು.ಮೈಸೂರಿನಿಂದ ಬೆಂಗಳೂರಿಗೆ ಹೊರಟ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು ಬೆಳಿಗ್ಗೆ 9 ಗಂಟೆ ವೇಳೆಗೆ ನಿಡ­ಘಟ್ಟ ಬಳಿ ಬರುತ್ತಿದ್ದಂತೆ, ಗಡ ಗಡ ಸದ್ದು ಕೇಳಿ ಬಂತು. ಸದ್ದು ಆಲಿಸಿದ ಚಾಲಕ ರೈಲನ್ನು ಕೂಡಲೇ ನಿಲ್ಲಿಸಿ­ದರು. ಹಳಿ ಪರೀಕ್ಷಿಸಿದಾಗ ಬಂಧದ ನಡುವೆ ಎರಡು ಇಂಚು ಬಿರುಕು ಬಿಟ್ಟಿದ್ದು ಕಂಡು ಬಂತು.ಅಲ್ಲಿಂದಲೇ ಹಿರಿಯ ಅಧಿಕಾರಿ­ಗ­ಳನ್ನು ಸಂಪರ್ಕಿಸಿದ ಚಾಲಕ ದೂರು ನೀಡಿ­­­ದರು. ಮದ್ದೂರು ಬಳಿ ಜೋಡಿ ಹಳಿ ನಿರ್ಮಾಣ ಕಾರ್ಯದಲ್ಲಿ ತೊಡ­­ಗಿದ್ದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಹಳಿಯನ್ನು ದುರಸ್ತಿ­ಗೊಳಿಸಿ­ದ­ರು­.ಈ ಘಟನೆಯಿಂದಾಗಿ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು 45 ನಿಮಿಷಗಳ ಕಾಲ ತಡವಾಗಿ ಬೆಂಗಳೂರಿಗೆ ತೆರಳಿತು.  ಆಗಬಹುದಾಗಿದ್ದ ಭಾರಿ ಅನಾಹುತ ಚಾಲಕನ ಸಮಯಪ್ರಜ್ಞೆಯಿಂದಾಗಿ ತಪ್ಪಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.