ಮಂಡ್ಯ:  ‘ಬೀಡಿ ಕಾರ್ಮಿಕರ ಹಿತ ರಕ್ಷಣೆ ಹಾಗೂ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಿಳಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿರುವ ರಾಗಿಬೊಮ್ಮನಹಳ್ಳಿಯಲ್ಲಿ ಆದರ್ಶ ಅಧ್ಯಯನ ಟ್ರಸ್ಟ್ ಹೊಸದಾಗಿ ನಿರ್ಮಿಸಿರುವ 30 ಕೊಠಡಿಗಳ ಶಾಲಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇದೂ ಸೇರಿದಂತೆ ಒಟ್ಟು ಮೂರು ಆಸ್ಪತ್ರೆ ಹಾಗೂ ಎರಡು ಡಿಸ್ಪೆನ್ಸರಿ ತೆರೆಯಲು ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ’ ಎಂದರು.

‘ಸೈಕಲ್, ಸೀರೆ ಕೊಡುವುದು ಜನರಿಗೆ ಅಲ್ಪ ಖುಷಿ ನೀಡಬಹುದು. ಆದರೆ, ಜನರಿಗೆ ನೆರವಾಗುವಂತೆ ಸಂಪತ್ತು ನಿರ್ಮಾಣ ಮಾಡದಂತೆ ಆಗುವುದಿಲ್ಲ’ ಎಂದ ಅವರು ‘ ರಾಷ್ಟ್ರೀಯ ಸ್ವಸ್ಥ ಭಿಮಾ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಅನೇಕ ಯೋಜನೆಗಳ ಸದುಪಯೋಗ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.