ಬುಧವಾರ, ಮೇ 12, 2021
20 °C

ಬೀದಿ ಹಂದಿಗಳನ್ನು ಸೆರೆಹಿಡಿದು ಮಾರಾಟ ಮಾಡಲು ಪಾಲಿಕೆ ನಿರ್ಧಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೀದಿ ನಾಯಿಗಳ ಹಾವಳಿಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಬಿಬಿಎಂಪಿಯು ಇದೀಗ ಬೀದಿ ಹಂದಿಗಳ ಹಾವಳಿ ನಿಯಂತ್ರಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ಅದು ಇದೀಗ ಇ-ಟೆಂಡರ್ ಕರೆದಿದೆ.ನಗರದಲ್ಲಿ ಸುಮಾರು 1000ದಿಂದ 1,500ರಷ್ಟು ಬೀದಿ ಹಂದಿಗಳಿದ್ದು, ಅವುಗಳ ಹಾವಳಿ ಮಿತಿ ಮೀರಿದೆ.

`ಹಂದಿಗಳನ್ನು ಸಾಕುವಂತಹ ಜನ ಅವುಗಳನ್ನು ಬೀದಿಗೆ ಬಿಡುತ್ತಿದ್ದಾರೆ.

 

ಇದರಿಂದ ನಗರದಲ್ಲಿ ಬೀದಿ ಹಂದಿಗಳ ಹಾವಳಿ ಮಿತಿ ಮೀರಿದೆ. ಇಂತಹ ಬೀದಿ ಹಂದಿಗಳನ್ನು ಸೆರೆಹಿಡಿದು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪಾಲಿಕೆ ನಿರ್ಧರಿಸಿದೆ~ ಎಂದು ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಪರ್ವೀಜ್ ಅಹಮದ್ ಪೀರನ್ ತಿಳಿಸಿದ್ದಾರೆ.`ಸಾಕು ಹಂದಿಗಳನ್ನು ಬೀದಿಗೆ ಬಿಡದಂತೆ ಸೂಚಿಸಿ ಈಗಾಗಲೇ ಸಂಬಂಧಪಟ್ಟ ಹಂದಿ ಸಾಕಣೆದಾರರಿಗೆ ನೋಟಿಸ್ ಜಾರಿಗೊಳಿಸಿ 15 ದಿನ ಕಾಲಾವಕಾಶ ನೀಡಿದ್ದೇವೆ. ಆನಂತರವೂ ಬೀದಿಗಳಲ್ಲಿ ಹಂದಿಗಳು ಕಾಣಿಸಿಕೊಂಡಲ್ಲಿ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸುತ್ತೇವೆ~ ಎಂದರು.ಈ ಉದ್ದೇಶಕ್ಕಾಗಿ ಪಾಲಿಕೆ ಅಲ್ಪಾವಧಿ ಇ-ಟೆಂಡರ್ ಕರೆದಿದೆ. ಸೆ. 30 ಕಡೇ ದಿನ. ಬೀದಿ ಹಂದಿಗಳನ್ನು ಸೆರೆಹಿಡಿಯಲು ಗುತ್ತಿಗೆದಾರರಿಗೆ 3 ಲಕ್ಷ ರೂಪಾಯಿ ಮೊತ್ತ ನಿಗದಿಪಡಿಸಲಾಗಿದೆ.ಒಮ್ಮೆ ಬೀದಿ ಹಂದಿಗಳನ್ನು ಸೆರೆ ಹಿಡಿದ ನಂತರ ಅವುಗಳನ್ನು ಮಾರಾಟ ಮಾಡಲಾಗುವುದು. ಇದರಿಂದ ಪಾಲಿಕೆ 9 ಲಕ್ಷ ರೂಪಾಯಿ ವರಮಾನ ನಿರೀಕ್ಷಿಸಿದೆ ಎಂದು ಪೀರನ್ ತಿಳಿಸಿದ್ದಾರೆ.ಯಾರು ಟೆಂಡರ್‌ನಲ್ಲಿ ಕಡಿಮೆ ಮೊತ್ತ ನಮೂದಿಸುತ್ತಾರೋ ಅಂತಹವರಿಗೆ ಗುತ್ತಿಗೆ ನೀಡಲಾಗುತ್ತದೆ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.