ಮಂಗಳವಾರ, ಮೇ 17, 2022
24 °C

ಬೃಹತ್ ಉದ್ಯೋಗ ಮೇಳ: ಸಿದ್ಧತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜ್ಯದ ಪ್ರತಿಷ್ಠಿತ ಕಂಪೆನಿಗಳ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಶನಿವಾರ (ಜೂ. 23) ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದು, ಸಿದ್ಧತೆಗಳು ನಡೆದಿವೆ.ಬೆಳಿಗ್ಗೆ 10ಕ್ಕೆ ಮೇಳವನ್ನು ಸಂಸದ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಯಾರು ಭಾಗವಹಿಸಬಹುದು?: ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ. ಬಿಕಾಂ, ಬಿಎಸ್ಸಿ, ಐಟಿಐ, ಜೆಒಸಿ, ಡಿಪ್ಲೊಮಾ, ಎಂಬಿಎ ಸೇರಿದಂತೆ ಇತರೆ ಪದವಿ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ವಿದ್ಯಾರ್ಹತೆ ಮೂಲ ದಾಖಲಾತಿಗಳು ಮತ್ತು ನೆರಳಚ್ಚು ಪ್ರತಿಗಳು, ಭಾವಚಿತ್ರಗಳನ್ನು ತರಬೇಕು.ಯಾವ ವಿಭಾಗಗಳಲ್ಲಿ ನೇಮಕ?: ಬ್ಯಾಕಿಂಗ್, ಬಿಪಿಒ, ಉತ್ಪಾದನೆ, ಆಟೋ ಮೊಬೈಲ್, ಹಾಸ್ಪಿಟಾಲಿಟಿ, ಸೆಕ್ಯೂರಿಟಿ , ಕನ್ಸಲ್ಟಿಂಗ್ ಹಾಗೂ ಟ್ರೈನಿಂಗ್ ಅಂಡ್ ಪ್ಲೇಸ್‌ಮೆಂಟ್ ಸೇರಿದಂತೆ ಹಲವು ವಿಭಾಗಗಳಲ್ಲಿ ನೇಮಕಾತಿಗಳು ನಡೆಯಲಿದೆ.ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದು, ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುತ್ತದೆ. ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊ: 9964626811, 9742174815 ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.