ವಿದ್ಯಾಮಾನ್ಯನಗರ, ಓಂಕಾರನಗರ, ಶ್ರೀರಾಘವೇಂದ್ರನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, `ಡಿ~ ಗ್ರೂಪ್ ಎಂಪ್ಲಾಯೀಸ್ ಕಾಲೋನಿ, ವಿದ್ಯಮಾನ್ಯನಗರ ಪಶ್ಚಿಮ, ಕಾಳಿಕಾನಗರ, ಏಕದಂತನಗರ, ಆಂಧ್ರಹಳ್ಳಿ ಇತರೇ ಬಡಾವಣೆಗಳು ಒಂದರ ಪಕ್ಕದಲ್ಲೊಂದು ಇವೆ.

ಸುತ್ತಲೂ ಫ್ಯಾಕ್ಟರಿಗಳಿದ್ದು ಜನಸಂಖ್ಯೆ 25,000ಕ್ಕೂ ಮೀರಿದೆ. ಆದುದರಿಂದ ಯಾವುದಾದರೂ ರಾಷ್ಟ್ರೀಕೃತ ಅಧಿಕಾರಿಗಳು ತಮ್ಮ ಬ್ಯಾಂಕಿನ ಒಂದು ಶಾಖೆಯನ್ನು ವಿದ್ಯಮಾನ್ಯನಗರದಲ್ಲಿ ತೆರೆಯಲು ಕೋರಲಾಗಿದೆ. ಬ್ಯಾಂಕ್ನೊಂದಿಗೆ ಎಟಿಎಂ ಸೌಲಭ್ಯವನ್ನೂ ನೀಡಿದರೆ ಇಲ್ಲಿಯ ವಾಸಿಗಳಿಗೆ ಅನುಕೂಲವಾಗುತ್ತದೆ.
- ಕೆ. ಆರ್. ರಾಘವೇಂದ್ರರಾವ್

ಪೋಷಕರಿಗೆ ತಂಗುದಾಣ ನಿರ್ಮಿಸಿ
ಬೃಹತ್ ಬೆಂಗಳೂರು ಮಹಾನಗರದ ಖಾಸಗಿ ಶಾಲೆಗಳು ಮಕ್ಕಳ ಪೋಷಕರು ನೀಡುವ ವಂತಿಗೆಯಿಂದಲೇ ಶಾಲಾ ಕಟ್ಟಡ, ಸಿಬ್ಬಂದಿ ಸಂಬಳ ಎಲ್ಲವನ್ನೂ ನಿರ್ವಹಿಸುತ್ತಾರೆ. ಹೊಸ ಕಟ್ಟಡಗಳ ನಿರ್ಮಾಣವನ್ನೂ ಮಾಡುತ್ತಾರೆ. ಅದೇ ಹಣದಲ್ಲಿಶಾಲೆಯ ಹೊರಗೊಂದು ತಂಗುದಾಣ ನಿರ್ಮಿಸುವುದು ಕಡ್ಡಾಯವಾಗಲಿ.

ಶಾಲೆಯಿಂದ ಮಕ್ಕಳನ್ನು ಕರೆತರಲು ಬರುವ ಪೋಷಕರಿಗೆ ಅನುಕೂಲವಾಗುತ್ತದೆ ಇಲ್ಲದಿದ್ದಲ್ಲಿ ಮಳೆಯಲ್ಲಿ ನೆನೆಯುತ್ತ, ಬಿಸಿಲಿನಲ್ಲಿ ಕಾಯುತ್ತಿರುತ್ತಾರೆ. ಹೆಚ್ಚಾಗಿ ಮಕ್ಕಳನ್ನು ಕರೆತರಲು ಬರುವವರು ಮಹಿಳೆಯರು ಅಥವಾ ಹಿರಿಯರೇ ಆಗಿರುತ್ತಾರೆ.

ಸಾವಿರಾರು ರೂಪಾಯಿಗಳನ್ನು ಪೋಷಕರಿಂದ ಪಡೆಯುವ ಶಾಲಾ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಹಿರಿಯರ ಅನುಕೂಲಕ್ಕೆ ಆಡಳಿತ ಮಂಡಳಿಯವರು ಶಾಲೆಯ ಆವರಣದಲ್ಲಿ ಪೋಷಕರಿಗಾಗಿ ತಂಗುದಾಣ ನಿರ್ಮಿಸುವ ವ್ಯವಸ್ಥೆ ಮಾಡಿಸಬೇಕೆಂದು ಕೋರುತ್ತೇನೆ.
- ವಿ. ಹೇಮಂತ್ಕುಮಾರ್

ಸಂಚಾರ ಸುಗಮವಾಗಲಿ
ಯಲಹಂಕ ಉಪನಗರದ 16ನೇ `ಬಿ~ ಅಡ್ಡರಸ್ತೆಯು ಇತ್ತೀಚೆಗಂತೂ ಬಹಳ ಸಂಚಾರ ದಟ್ಟಣೆಯಿಂದ ತತ್ತರಿಸುತ್ತಿದೆ. ಪೊಲೀಸರು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿಲ್ಲ. ಪಾದಚಾರಿ ರಸ್ತೆಗಳನ್ನು ಸ್ಥಳೀಯ ವ್ಯಾಪಾರಿಗಳು ಅತಿಕ್ರಮಣ ಮಾಡಿದ್ದಾರೆ. ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಲಿ. ಸಂಚಾರ ಸುಗಮವಾಗುವಂತೆ ಮಾಡಲಿ
- ರಾಂನಗರ ದೇವ್ರಾಜ್

ಬಸ್ ಸಂಚಾರಕ್ಕೆ ಅನುಕೂಲ ಮಾಡಿ
ಕೆಂಗೇರಿಯಿಂದ ಯಶವಂತಪುರದ ಕಡೆ ಚಲಿಸುವ 401 ಕೆ ಮಾರ್ಗದ ಬಸ್ಗಳ ಸಂಖ್ಯೆ ಬೆಳಿಗ್ಗೆ 8-30 ರಿಂದ 10 ಗಂಟೆಯ ವಧಿಯಲ್ಲಿ ಬಸ್ಗಳ ಸಂಚಾರ ತೀರಾ ಕಡಿಮೆಯಾಗಿದೆ. ಈ ಮಾರ್ಗದಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಕಾರ್ಮಿಕರು, ಖಾಸಗಿ ಉದ್ಯೊಗಿಗಳು 401 ಕೆ ಬಸ್ಗಳನ್ನೇ ನಂಬಿರುತ್ತಾರೆ.

ಆದರೆ ಈ ಅವಧಿಯಲ್ಲಿ ಬಸ್ಸುಗಳು ತೀರಾ ವಿರಳವಾಗಿರುವುದರಿಂದ ಅಲ್ಲೊಂದು - ಇಲ್ಲೊಂದು ಬರುವ ಬಸ್ಗಳು ತುಂಬಾ ನೂಕು ನುಗ್ಗಲುನಿಂದ ತುಂಬಿರುತ್ತವೆ. ಇದರಿಂದ ನಿಗದಿತ ಸಮಯದಲ್ಲಿ ಕಚೇರಿಗಳಿಗೆ ತಲುಪದೆ ಮೇಲಧಿಕಾರಿಗಳಿಂದ

ಬೈಸಿಕೊಳ್ಳುವಂತಾಗಿದೆ. ಸಂಬಂಧಪಟ್ಟ ಬಿ.ಎಂ.ಟಿ.ಸಿ. ಅಧಿಕಾರಿಗಳು ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಹೆಚ್ಚು ಬಸ್ಗಳನ್ನು ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
- ಗೋವಿಂದಯ್ಯ ಕಾಡುಜಕ್ಕಸಂದ್ರ

ಅಂಚೆ ಕಚೇರಿಯ ಅವ್ಯವಸ್ಥೆ
ಮಾವಳ್ಳಿ ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಯಸ್ಸಾದ ಮಹಿಳೆಯರಿಗೆ ಯಾವ ಸೌಲಭ್ಯಗಳು ಇಲ್ಲದೆ ಬಹಳ ತೊಂದರೆಯಾಗಿದೆ. ಅಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದೆ ಬಹಳ ಹೊತ್ತು ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ತೊಂದರೆಯಾಗಿದೆ.

ಪತ್ರ ಬರೆಯಲು ಸಹ ಯಾವ ಅನುಕೂಲವೂ ಇಲ್ಲ. ಲಕೋಟೆ ಅಂಟಿಸಲು ಅಂಟಿನ ಡಬ್ಬ ಇಲ್ಲ. ಲಾಲ್ಬಾಗ್ ಪಶ್ಚಿಮ ದ್ವಾರ ಅಂಚೆ ಕಚೇರಿ ಮುಚ್ಚಿ ಅದನ್ನು ಮಾವಳ್ಳಿ ಅಂಚೆ ಕಚೇರಿಗೆ ಸೇರಿಸಿರುವುದರಿಂದ ಕೆಲಸ ಹೆಚ್ಚಾಗಿದೆ. ಒಬ್ಬ ಪೋಸ್ಟ್ ಮಾಸ್ಟರ್ ಮಾತ್ರ ಇದನ್ನು ನಿರ್ವಹಿಸಲು ಅಸಾಧ್ಯ. ಈ ಅಂಚೆ ಕಚೇರಿಗೆ ಒಂದು ಅಂಚೆಪೆಟ್ಟಿಗೆಯೂ ಇರುವುದಿಲ್ಲ. ಕಾಗದ ಪತ್ರಗಳನ್ನು ಹಾಕಲು ದೂರದಿಂದ ಇಲ್ಲಿಗೆ ಬರಬೇಕಾಗಿದೆ.

ಇದಕ್ಕೆ ಸಂಬಂಧಪಟ್ಟ ಅಂಚೆ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಂಡು ಕಚೇರಿ ಕೆಲಸಕ್ಕೆ ಇನ್ನೊಬ್ಬರು ಸಹಾಯಕರನ್ನು ನೇಮಿಸಬೇಕು ಮತ್ತು ಲಾಲ್ಬಾಗ್ ಫೋರ್ಟ್ ರಸ್ತೆಯಲ್ಲಿ ಮತ್ತು ಮಾರಮ್ಮ ದೇವಸ್ಥಾನದ ಸಮೀಪ ಹಾಗೂ ಉಪ್ಪಾರಹಳ್ಳಿ ಸಮೀಪ ಅಂಚೆ ಪೆಟ್ಟಿಗೆಗಳನ್ನು ಅಳವಡಿಸಿ ವಯಸ್ಸಾದವರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.
- ಲಕ್ಷ್ಮೀಪತಿ ಮಾವಳ್ಳಿ

ನಾಯಿ ಪಾಡು
ನಗರದಲ್ಲಿ ನಾಯಿಗಳನ್ನು ಸಾಕುವವರ ಸಂಖ್ಯೆ ಕಡಿಮೆಯೇನಿಲ್ಲ. ಸಾಕು ನಾಯಿಗಳು ಸಾಮಾನ್ಯವಾಗಿ ಮನೆಯೊಳಗೆ ಮಲಮೂತ್ರ ಮಾಡುವುದಿಲ್ಲ. ಮನೆಯ ಆವರಣದಲ್ಲೂ ಮಾಡುವುದಿಲ್ಲ. ಅವಕ್ಕೆಲ್ಲ ಮಲಮೂತ್ರ ವಿಸರ್ಜನೆಗೆ ರಸ್ತೆಯನ್ನೇ ಅವಲಂಬಿಸಬೇಕು.

ನಾಯಿಗಳು ಸಹ ಅದಕ್ಕೆ ಹೊಂದಿಕೊಂಡಿವೆ. ಬೆಳಿಗ್ಗೆ ಎದ್ದೊಡನೆ ಮನೆ ಯಜಮಾನ ಅಥವಾ ಯಜಮಾನತಿ ಇಲ್ಲವೇ ಮನೆ ಆಳು ನಾಯಿಗಳನ್ನು ತಮ್ಮ ಜೊತೆಗೆ ಜಾಗಿಂಗ್ಗೆ ಕರೆದೊಯ್ಯುತ್ತಾರೆ. ಅವುಗಳ ಬಹಿರ್ದೆಸೆಯ ವ್ಯವಸ್ಥೆಯೂ ಆಗುತ್ತದೆ. ಆದ್ದರಿಂದ ರಸ್ತೆಯಲ್ಲೆಲ್ಲ ನಾಯಿ ಹೇಸಿಗೆಯನ್ನು ತುಳಿಯದೇ ಅಡ್ಡಾಡುವುದೇ ಉಳಿದವರಿಗೆ ಕಸರತ್ತಾಗಿದೆ.

ಈ ಬಗ್ಗೆ ಮಹಾನಗರ ಪಾಲಿಕೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಾಕು ನಾಯಿಗಳಿಗಾಗಿ ನಾಯಿ ಸಾಕಿದವರು `ಪೆಟ್ ಜೋನ್~ ಮಾಡಿಕೊಳ್ಳುವುದು ಒಳಿತು. ಅವರ ಮನೆಯ ಶುದ್ಧ ಪರಿಸರಕ್ಕಾಗಿ ರಸ್ತೆ ಶುಚಿತ್ವವನ್ನು ಹಾಳುಗೆಡಹುವುದು ನ್ಯಾಯವೇ? ಬಿಬಿಎಂಪಿ ಎಲ್ಲ ಬಡಾವಣೆಗಳಲ್ಲೂ ನಾಯಿಗಳ ಶೌಚಾಲಯವನ್ನು ನಿರ್ಮಿಸಬೇಕು. ನಿರ್ವಹಣೆಗೆ ನಾಯಿ ಸಾಕಿದವರ ಬಳಿ ಶುಲ್ಕ ವಸೂಲಿ ಮಾಡಬೇಕು. ಈ ಬಗ್ಗೆ ಬಿ.ಬಿ.ಎಂ.ಪಿ. ಯವರು ಗಮನ ಹರಿಸುವರೇ?
- ಡಾ. ಭಗವಾನ್ ದಾಸ್ ಆಳ್ವ

ಕಠಿಣ ಕ್ರಮಕೈಗೊಳ್ಳಿ
ಮಾರ್ಚ್ 29 ರಂದು ಉಲ್ಲಾಳ ಉಪನಗರಕ್ಕೆ ಹೋಗಲು ಕೆಂಪೇಗೌಡ ಬಸ್ನಿಲ್ದಾಣದಲ್ಲಿ ಬೆಳಿಗ್ಗೆ 8ಕ್ಕೆ 234 ಇ ಬಸ್ಸಿಗಾಗಿ ಕಾಯುತ್ತಿದ್ದೆವು. ಒಂದು ಗಂಟೆ ಕಾಲ ಕಾದ ಮೇಲೆ ಬಸ್ ಬಂದಿತು. 19 ಎ ಪ್ಲಾಟ್ ಫಾರಂ ತುಂಬ ಎತ್ತರದಲ್ಲಿದೆ. ಬಸ್ ಹತ್ತುವುದು ಕಷ್ಟ.

ಬಸ್ಸಿನ ಚಾಲಕನಿಗೆ ಅದೇನು ಅವಸರವೋ, ಅದೆಷ್ಟು ಅಸಹನೆಯೋ, ವಯಸ್ಸಾದವರೊಬ್ಬರು ಬಸ್ ಹತ್ತಲು ಯತ್ನಿಸುತ್ತಿದ್ದರು. ಒಂದು ಕಾಲು ಮೆಟ್ಟಿಲ ಮೇಲೆ ಇರಿಸಿದ್ದಾಗಲೇ ಬಸ್ ಚಲಿಸಿಬಿಟ್ಟಿತು. ಅಪಘಾತ ಸಂಭವಿಸುವುದೇನೋ ತಪ್ಪಿತು. ಆದರೆ ಈ ಬೇಜವಾಬ್ದಾರಿತನಕ್ಕೆ ಏನು ಹೇಳುವುದು? ಏನಾದರೂ ಆಗಿದ್ದಲ್ಲಿ ಜೀವಹಾನಿಗೆ ಯಾರು ಜವಾಬ್ದಾರಿ ಹೊರುತ್ತಿದ್ದರು?

`ಸೂಕ್ತ ಕ್ರಮ ತೆಗೆದು ಕೊಳ್ಳಲಾಗಿದೆ, ಸಂಬಂಧಪಟ್ಟವರಿಗೆ ಎಚ್ಚರಿಕೆ/ ಸೂಕ್ತ ಮಾರ್ಗದರ್ಶನ ನೀಡಲಾಗಿದೆಯಂತಹ ಮೂಗಿಗೆ ತುಪ್ಪ ಸವರುವ ಸಮಜಾಯಿಷಿಗಳನ್ನು ಬಿ.ಎಂ.ಟಿ.ಸಿ. ಅಧಿಕಾರಿಗಳು ಕೊಡುವುದೇನೂ ಬೇಡ.

ಇಲ್ಲಿಯವರೆಗೂ ಇಂಥ ಹೇಳಿಕೆಗಳು ಹಲವಾರು ಸಲ ಪ್ರಕಟವಾಗಿವೆ. ಪರಿಣಾಮ ಮಾತ್ರ ಶೂನ್ಯ. ಇವರು ನೀಡುವ ಎಚ್ಚರಿಕೆಗಳಿಗೆ ಸಿಬ್ಬಂದಿ ಕ್ಯಾರೇ ಅನ್ನುವುದಿಲ್ಲ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣವಾದ ಶಿಸ್ತುಕ್ರಮಕ್ಕೊಳಪಡಿಸಿದರೆ ಮಾತ್ರ ಸುಧಾರಣೆ ಕಂಡು ಬರಬಹುದೇನೋ? ಆದರೆ ಹಾಗೆ ಮಾಡುವ ಮನಸ್ಸು ಯಾರಿಗಿದೆ?
- ಪಿ. ವಿ ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.