ನವದೆಹಲಿ (ಪಿಟಿಐ): ಭಾರತದ ಗುರುಸಾಯಿದತ್ ಅವರು ಆಕ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಸವಾಲಿಗೆ ತೆರೆಬಿತ್ತು.ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುಸಾಯಿದತ್ 20-22, 23-21, 16-21 ರಲ್ಲಿ ಹಾಂಕಾಂಗ್ನ ವಿಂಗ್ ಕಿ ವೊಂಗ್ ಕೈಯಲ್ಲಿ ಪರಾಭವಗೊಂಡರು.

ಈ ಮ್ಯಾರಥಾನ್ ಹೋರಾಟ ಒಂದು ಗಂಟೆಗೂ ಅಧಿಕ ಕಾಲ ನಡೆಯಿತು. ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದ ಗುರು ಎರಡನೇ ಸೆಟ್ನಲ್ಲಿ ತಿರುಗೇಟು ನೀಡಿದರು. ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಯ ಸೆಟ್ನ್ನು 23-21 ರಲ್ಲಿ ಗೆದ್ದುಕೊಂಡರು. ಆದರೆ ಹಾಂಕಾಂಗ್ನ ಆಟಗಾರ ಮೂರನೇ ಸೆಟ್ನಲ್ಲಿ ಎಚ್ಚರಿಕೆಯ ಆಟವಾಡಿ ಪಂದ್ಯ ತಮ್ಮದಾಗಿಸಿಕೊಂಡರು.ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಅರವಿಂದ್ ಭಟ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದ್ದರು. ಚೈನೀಸ್ ತೈಪೆಯ ಜೆನ್ ಹಾವೊ ಸು 21-19, 21-16 ರಲ್ಲಿ ಅರವಿಂದ್ ವಿರುದ್ಧ ಜಯ ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.