ನವದೆಹಲಿ (ಪಿಟಿಐ): ಬ್ಲ್ಯಾಕ್ಬೆರಿಯ ಎಂಟರ್ಪ್ರೈಸ್ ಮೇಲ್ ಸೇವೆಗಳನ್ನು ಪರಿಶೀಲಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಸೌಲಭ್ಯ ಒದಗಿಸದಿದ್ದರೆ ಅಂತಹ ಸೇವೆಗಳನ್ನು ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ಮೊಬೈಲ್ ಸೇವಾ ಸಂಸ್ಥೆಗಳಿಗೆ ಸೂಚಿಸಿದೆ.

ಕಾಯ್ದೆ ಜಾರಿಗೊಳಿಸುವ ಮತ್ತು ಬೇಹುಗಾರಿಕಾ ಸಂಸ್ಥೆಗಳಿಗೆ ತೃಪ್ತಿದಾಯಕವಾಗುವಂತೆ ಎಂಟರ್ಪ್ರೈಸ್ ಮೇಲ್ಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗದಿದ್ದರೆ ಮೊಬೈಲ್ ಸೇವಾ ಸಂಸ್ಥೆಗಳು ಅಂತಹ ಸೇವೆ ನಿಲ್ಲಿಸಬೇಕು ಎಂದೂ ಆದೇಶಿಸಿದೆ.

ತನ್ನ ಜನಪ್ರಿಯ ಎಂಟರ್ಪ್ರೈಸ್ ಸರ್ವಿಸ್ (ಬಿಇಎಸ್) ಸೇವೆಗಳ ಮೇಲೆ ನಿಗಾ ಇಡುವ , ಗೂಢ ಲಿಪಿ ಭೇದಿಸುವ ಸೌಲಭ್ಯ ತನ್ನ ಬಳಿ ಇಲ್ಲ ಎಂದು ಬ್ಲ್ಯಾಕ್ಬೆರಿ ಸಾಧನ ತಯಾರಿಸುವ ರಿಸರ್ಚ್ ಇನ್ ಮೋಷನ್ (ರಿಮ್) ಸಂಸ್ಥೆ ತಿಳಿಸಿದೆ. ‘ಎಂಟರ್ಪ್ರೈಸ್ ಮೇಲ್’ಗಳ ಮೇಲೆ ನಿಗಾ ಇರಿಸುವುದಕ್ಕೆ ಸಂಬಂಧಿಸಿದ ವಿವಾದವು ಲೈಸೆನ್ಸ್ ಪಡೆದ ಮೊಬೈಲ್ ಸೇವಾ ಸಂಸ್ಥೆ ಮತ್ತು ‘ರಿಮ್’ ಮಧ್ಯೆ ಇದೆ. ಸರ್ಕಾರ ಬಯಸಿದ ಸೌಲಭ್ಯ ಒದಗಿಸದಿದ್ದರೆ ನಮ್ಮ ಸಂಪರ್ಕ ಜಾಲ ಬಳಸಬಾರದು ಎಂದು ಸೇವಾ ಸಂಸ್ಥಗಳು ‘ರಿಮ್’ಗೆ ತಾಕೀತು ಮಾಡಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ. ಕೆ. ಪಿಳ್ಳೈ ಪ್ರತಿಕ್ರಿಯಿಸಿದ್ದಾರೆ.

ಬ್ಲ್ಯಾಕ್ಬೆರಿ ಸಾಧನಗಳ ಮಧ್ಯೆ ಹರಿದಾಡುವ ಸಂದೇಶ ಸೇವೆಗೆ ಬಳಸುವ ಸರ್ವರ್ ದೇಶದ ಒಳಗೆ ಇಲ್ಲದಿರುವುದರಿಂದ ಇಂತಹ ‘ಇ- ಮೇಲ್’ ಮೇಲೆ ನಿಗಾ ಇರಿಸಲು ಭದ್ರತಾ ಪಡೆಗಳಿಗೆ ಸಾಧ್ಯವಾಗುವುದಿಲ್ಲ. ಇದು ರಾಷ್ಟ್ರದ ಭದ್ರತೆಗೆ ಗಂಡಾಂತರ ಒಡ್ಡಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

ಬ್ಲ್ಯಾಕ್ಬೆರಿ ಸೇವೆಯು ಗಮನಾರ್ಹವಾಗಿ ರಹಸ್ಯ ಲಿಪಿ ರೂಪದಲ್ಲಿ ಇರುವುದರಿಂದ ಅವುಗಳನ್ನು ಭೇದಿಸುವ ತಂತ್ರಜ್ಞಾನವೂ ಭದ್ರತಾ ಪಡೆಗಳ ಬಳಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.