ಬುಧವಾರ, ಜುಲೈ 28, 2021
29 °C

ಭಾರತದಲ್ಲಿ ಕೋಚ್ ಸಿಗಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ‘ವಿಶ್ವ ಚಾಂಪಿಯನ್ ಭಾರತ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಲು ಭಾರತದ ಒಬ್ಬನೇ ಒಬ್ಬ ಕೋಚ್ ಸಿಕ್ಕಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ಶ್ರೀಲಂಕಾ ಟೆಸ್ಟ್ ತಂಡದ ನಾಯಕ ಕುಮಾರ ಸಂಗಕ್ಕಾರ ಟೀಕಿಸಿದ್ದಾರೆ.‘ಇದು ನನಗೆ ಖಂಡಿತ ಅಚ್ಚರಿ ಉಂಟು ಮಾಡಿದೆ. ಕಾರಣ ಭಾರತದಲ್ಲಿಯೇ ಶ್ರೇಷ್ಠ ಕ್ರಿಕೆಟ್ ಆಟಗಾರರು ಇದ್ದಾರೆ. ಆದರೆ ಬಿಸಿಸಿಐಗೆ ಸೂಕ್ತ ವ್ಯಕ್ತಿಯೇ ಸಿಕ್ಕಿಲ್ಲ’ ಎಂದಿದ್ದಾರೆ.‘ಈ ದೇಶದಲ್ಲಿ ಶ್ರೇಷ್ಠ ಕ್ರಿಕೆಟಿಗರು ಜನಿಸಿದ್ದಾರೆ. ಆದರೆ ದೇಶದ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಯೇ ಬಿಸಿಸಿಐಗೆ ಸಿಕ್ಕಿಲ್ಲ. ಇದು ನಾಚಿಕೆಗೇಡಿನ ವಿಷಯ’ ಎಂದು ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿರುವ ಸಂಗಾ ನುಡಿದಿದ್ದಾರೆ.ಸ್ವದೇಶದ ಆಟಗಾರರನ್ನು ಕೋಚ್ ಆಗಿ ನೇಮಿಸಿಕೊಳ್ಳುವುದು ಅಗತ್ಯ. ಅವರಲ್ಲಿಯೂ ಅಪಾರ ಪ್ರತಿಭೆ ಇದೆ. ಅದನ್ನು ಕ್ರಿಕೆಟ್ ಮಂಡಳಿಗಳು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‘ಶ್ರೀಲಂಕಾದಲ್ಲೂ ಇದೇ ರೀತಿ ಆಗಿದೆ. ನಾವು ಚಂಡಿಕಾ ಹತುರುಸಿಂಗಾ ಅವರ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ರಾಷ್ಟ್ರ ಕ್ರಿಕೆಟ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿತ್ತು. ನಾವು ಅವರ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗಾಗಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು’ ಎಂದು ವಿಶ್ವಕಪ್ ರನ್ನರ್ ಅಪ್ ಆದ ಲಂಕಾ ತಂಡದ ಸಂಗಕ್ಕಾರ ವಿವರಿಸಿದ್ದಾರೆ. ‘ನಿಜ, ಕೋಚ್‌ಗಳನ್ನು ಹುಡುಕುವುದು ಕಷ್ಟದ ಕೆಲಸ’ ಎಂದೂ ಅವರು ಒಪ್ಪಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.