ಯಾದಗಿರಿ: ವಿದ್ಯುತ್ ಇಲ್ಲದೇ ಒಣಗುತ್ತಿರುವ ಬೆಳೆಗಳು, ಪರೀಕ್ಷೆಗಳು ಹತ್ತಿರ ಬಂದಿದ್ದರೂ ಓದಲಾಗದ ವಿದ್ಯಾರ್ಥಿಗಳ ಬವಣೆಯಿಂದ ಬೇಸತ್ತ ಸುಮಾರು 32 ಗ್ರಾಮಗಳ ರೈತರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಕ್ರವಾರ ಸಮೀಪ ಭೀಮಾ ಸೇತುವೆಯ ಬಳಿ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶಹಾಪುರ ತಾಲ್ಲೂಕಿನ ವಡಗೇರಾ ಹೋಬಳಿಯ ವಡಗೇರಾ, ಬಿಳ್ಹಾರ, ಅರ್ಜುಣಗಿ, ಬೆನಕನಳ್ಳಿ, ಸುಗೂರು, ಸಂಗಮ್, ಜೋಳದಡಿಗಿ, ಅಗ್ನಿಹಾಳ, ಗುಂಡ್ಲೂರ, ಮಾಚನೂರು, ಶಿವಪುರ, ಕಂದಳ್ಳಿ, ಬೆಂಡೆಬೆಂಬಳಿ, ಕದ್ರಾಪುರ, ಕೋನಳ್ಳಿ ಸೇರಿದಂತೆ ಸುಮಾರು 32 ಗ್ರಾಮಗಳ ರೈತರು ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸಿದ್ಧಣ್ಣಗೌಡ ಕಾಡಂನೋರ್, ರೈತ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದ್ದರೂ, ಬೆಳೆ ಬೆಳೆಯಲು ಅಗತ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಅನ್ನ ಬೆಳೆಯುವ ರೈತರೇ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ದುರ್ದೈವ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲುವೆಗಳಲ್ಲಿ ಹರಿಯುವ ನೀರು ವಡಗೇರಾ ಭಾಗದ ರೈತರಿಗೆ ಸಿಗುತ್ತಿಲ್ಲ. ಇದರಿಂದಾಗಿ ಕೃಷ್ಣಾ ಭೀಮಾ ನದಿ ತೀರದಲ್ಲಿ ಪಂಪ್ಸೆಟ್, ಬೋರ್ವೆಲ್ಗಳನ್ನು ಹಾಕಿಸಿಕೊಂಡು ಕೃಷಿ ಚಟುವಟಿಕೆ ನಡೆಸುವುದು ಅನಿವಾರ್ಯವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪೈಪ್ಲೈನ್ ಅಳವಡಿಸಿಕೊಳ್ಳಲಾಗಿದೆ. ನೀರಾವರಿಯನ್ನು ಅವಲಂಬಿಸಿ, ಭತ್ತ, ಕಬ್ಬು ಬೆಳೆದಿರುವ ರೈತರು, ಬೆಳೆಗಳಿಗೆ ನೀರು ಹಾಯಿಸದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಇದೀಗ ಭತ್ತ ಕಾಳು ಕಟ್ಟುವ ಹಂತಕ್ಕೆ ತಲುಪಿದ್ದು, ಕಬ್ಬು ಕಟಾವಿಗೆ ಬಂದಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಬೆಳೆಗಳು ಒಣಗಿ ಹೋಗುವ ಆತಂಕವನ್ನು ರೈತರು ಎದುರಿಸುವಂತಾಗಿದೆ. ವಿದ್ಯುತ್ ಸಮಸ್ಯೆಯಿಂದ ಬೇಸತ್ತ ರೈತರು, ಜೆಸ್ಕಾಂ ಅಧಿಕಾರಿಗಳ ಮೊಬೈಲ್ಗೆ ಕರೆ ಮಾಡಿದರೆ, ಬಂದ್ ಆಗಿರುತ್ತವೆ. ಇದರಿಂದ ರೈತರ ಸಹನೆಯ ಕಟ್ಟೆ ಒಡೆಯುವಂತಾಗಿದೆ ಎಂದು ಕಿಡಿ ಕಾರಿದರು.

ಡಾ. ಅಂಬ್ರಣ್ಣ ಗಡ್ಡೆಸುಗೂರ ಮಾತನಾಡಿ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಜೆಸ್ಕಾಂ ಸಿಬ್ಬಂದಿ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಶಹಾಪುರ ತಹಸೀಲ್ದಾರ ವೈ.ಎಸ್.ಮಲ್ಲಿಕಾರ್ಜುನ, ಮನವಿ ಸ್ವೀಕರಿಸಿದರು. ಈಗಾಗಲೇ ಸಮಪರ್ಕ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಮೊಬೈಲ್ ಸ್ವಿಚ್ ಆಫ್ ಮಾಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜೆಸ್ಕಾಂ ಸಿಬ್ಬಂದಿ ರೈತರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು.

ಜೆಸ್ಕಾಂ ಅಧಿಕಾರಿಗಳು ಮಾತನಾಡಿ, ವಡಗೇರಾ ಫೀಡರ್ಗೆ ಖಾನಾಪುರದ 110 ಕೆ.ವಿ. ಕೇಂದ್ರದಿಂದ ವಿದ್ಯುತ್ ಪಡೆಯಲಾಗಿದೆ. ವಡಗೇರಾ, ನಾಲವಾರ, ಬೆಂಡೆಬೆಂಬಳಿಗಳಿಗೆ ಪ್ರತ್ಯೇಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು. ಲೈನ್ಗಳನ್ನೂ ಬದಲಾವಣೆ ಮಾಡಲಾಗುತ್ತಿದ್ದು, ವಡಗೇರಾ ಉಪಕೇಂದ್ರದಲ್ಲಿ ಬ್ರೇಕರ್ ಸಾಮರ್ಥ್ಯ ಹಾಗೂ ಲೋಡ್ ಹೆಚ್ಚಿಗೆ ಬೀಳುವುದರಿಂದ ಪದೇ ಪದೇ ವಿದ್ಯುತ್ ತೊಂದರೆ ಉಂಟಾಗುತ್ತಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮದ್ನಾಳ, ರೈತ ಮುಖಂಡರಾದ ಸಿದ್ಧಣ್ಣಗೌಡ ಮಳ್ಳಳ್ಳಿ, ಸುಭಾಷ ಮಾಚನೂರ, ಶಿವರಾಜಪ್ಪಗೌಡ ಬೆಂಡೆಬೆಂಬಳಿ, ಗುರುನಾಥರೆಡ್ಡಿ ಕದ್ರಾಪುರ, ಸಿದ್ಧಣ್ಣಗೌಡ ಬಿಳ್ಹಾರ, ಅನಂತರಾವ ದೇಶಪಾಂಡೆ, ಅಯ್ಯಪ್ಪ ಸುಗೂರು, ಚಂದ್ರಯ್ಯ ಕೊಂಕಲ್, ಮಲ್ಲಣ್ಣ ಸಾಹುಕಾರ, ಸೈದಪ್ಪ ಶಿವಪುರ, ವಿರುಪಾಕ್ಷಗೌಡ ಮಾಚನೂರ, ಅಂಬ್ರಣ್ಣ ಬಿಳ್ಹಾರ, ಪೆದ್ದರಾಜ್, ಸಿದ್ಧಪ್ಪಗೌಡ ನಾಯ್ಕಲ್, ರೆಡ್ಡಿ ಬೆನಕನಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಪ್ಪ ಇಟಗಿ, ಬಸ್ಸಪ್ಪ ಜೋಳದಡಿಗಿ, ಹುಸೇನ್ಸಾಬ ಬಿಳ್ಹಾರ, ಮಲ್ಲಣ್ಣಗೌಡ ಗಡ್ಡೆಸುಗೂರು, ಹಣಮಂತ್ರಾಯ ಜಡಿ, ಯಂಕಪ್ಪ ತುಮಕೂರ, ಭೋಜಪ್ಪಗೌಡ ಜೋಳದಡಿಗಿ, ಕಾಸೀಂ ಗಡ್ಡೆಸುಗೂರು, ಕರವೇ ವಡಗೇರಾ ಘಟಕದ ಅಧ್ಯಕ್ಷ ಶಿವಕುಮಾರ ಕೊಂಕಲ್, ಪದಾಧಿಕಾರಿಗಳು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಯಾಣಿಕರ ಪರದಾಟ: ಶಹಾಪುರ-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಭೀಮಾ ಸೇತುವೆಯ ಬಳಿ ರೈತರು ರಸ್ತೆ ತಡೆ ನಡೆಸಿದ್ದರಿಂದ ಎರಡೂ ಬದಿಗಳಲ್ಲಿ ಟಂಟಂ, ಜೀಪು, ಸಾರಿಗೆ ಸಂಸ್ಥೆ ಬಸ್ಗಳು, ಲಾರಿಗಳು ಸೇರಿದಂತೆ ನೂರಾರು ವಾಹನಗಳು ಸಾಲಾಗಿ ನಿಲ್ಲುವಂತಾಯಿತು. ರಾಜ್ಯ ಹೆದ್ದಾರಿ ಇದಾಗಿರುವುದರಿಂದ ಹಲವಾರು ವಾಹನಗಳು ಓಡಾಡುತ್ತಿದ್ದು, ಶಹಾಪುರ, ಸುರಪುರದಿಂದ ಯಾದಗಿರಿಗೆ ಬರುವ ಪ್ರಯಾಣಿಕರು ಪರದಾಡುವಂತಾಯಿತು. ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ವಾಹನಗಳಲ್ಲಿಯೇ ಕುಳಿತು ಕಾಲ ಕಳೆಯುವಂತಾಯಿತು.

ಯಾದಗಿರಿಗೆ ಹೋಗುವ ಪ್ರಯಾಣಿಕರು ಭೀಮಾ ಸೇತುವೆಯಿಂದಲೇ ಕಾಲ್ನಡಿಗೆ ಮೂಲಕ ನಗರಕ್ಕೆ ಆಗಮಿಸಿದರು. ಇನ್ನು ದೂರದ ಪ್ರಯಾಣಿಕರು ಅನಿವಾರ್ಯವಾಗಿ ಬಸ್ಗಳಲ್ಲಿಯೇ ಕುಳಿತುಕೊಳ್ಳಬೇಕಾಯಿತು. ಒಂದೆಡೆ ರೈತರು ಘೋಷಣೆಗಳನ್ನು ಕೂಗುತ್ತಿದ್ದರೆ, ಯಾವಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗುವುದು ಎಂಬ ಚಿಂತೆ ಪ್ರಯಾಣಿಕರದ್ದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.