ಮಂಡ್ಯ: ಸುರಕ್ಷತಾ ವಲಯದಲ್ಲಿಲ್ಲದ ಜಲ್ಲಿಕಲ್ಲು ಕ್ರಷರ್ ಘಟಕಗಳು ಕಾರ್ಯ ನಿಲ್ಲಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ನಂತರವೂ ಜಿಲ್ಲೆಯಲ್ಲಿ ಕ್ರಷರ್ಗಳ ಸದ್ದು ನಿಲ್ಲಿಸಿಲ್ಲ. ಸುರಕ್ಷತಾ ವಲಯ ಗುರುತಿಸಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.
ಜಲ್ಲಿಕಲ್ಲು ಘಟಕಗಳಿಂದ ತೀವ್ರ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕಾಗಿ ನ್ಯಾಯಾಲಯವು 2011ರಲ್ಲಿ ಕೈಗಾರಿಕಾ ವಲಯಗಳಂತೆ ಕ್ರಷರ್ಗಳಿಗೂ ಸುರಕ್ಷತಾ ವಲಯ ನಿರ್ಮಿಸಿ, ಅಲ್ಲಿಯೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಸುರಕ್ಷತಾ ವಲಯದಿಂದ ದೂರ ಇರುವ ಘಟಕಗಳ ಕಾರ್ಯ ನಿಲ್ಲಿಸಬೇಕು ಎಂದು ಸೂಚಿಸಿತ್ತು.

ಜಿಲ್ಲೆಯಲ್ಲಿ 98 ಜಲ್ಲಿಕಲ್ಲು ಕ್ರಷರ್ ಘಟಕಗಳಿವೆ. ಸುರಕ್ಷತಾ ವಲಯ ಗುರುತಿಸದ ಕಾರಣ ಬಹಳಷ್ಟು ಘಟಕಗಳನ್ನು ಇಂದಿಗೂ ನಿಲ್ಲಿಸಲು ಸಾಧ್ಯವಾಗಿಲ್ಲ.

ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಶಿವಪುರ, ನಾಗಮಂಗಲ ತಾಲ್ಲೂಕಿನ ರಂಗಸಮುದ್ರ, ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ ಹಾಗೂ ಶ್ರೀರಂಗಪಟ್ಟಣದ ಮುಂಡಗದೊರೆ ಬಳಿ ಸುರಕ್ಷತಾ ವಲಯಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ.

ಆ ಪೈಕಿ ಶಿವಪುರ ಹಾಗೂ ರಂಗಸಮುದ್ರದ ಸುರಕ್ಷತಾ ವಲಯಗಳಿಗೆ ಹಸಿರು ನಿಶಾನೆ ದೊರೆತಿದೆ. ಬೇಬಿಬೆಟ್ಟದಲ್ಲಿ ಗುರುತಿಸಿರುವ ಜಾಗದ ಆರ್ಟಿಸಿಯಲ್ಲಿ ಬದಲಾವಣೆಯಾಗಬೇಕಿದೆ. ಮುಂಡಗದೊರೆ ಬಳಿ ಗುರುತಿಸಿರುವ ಜಾಗವು ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾಗಿದ್ದು, ಅದು ಇತ್ಯರ್ಥವಾಗಬೇಕಿದೆ ಎನ್ನುತ್ತಾರೆ ವಿಜ್ಞಾನ ಮತ್ತು ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಲಕ್ಷಮ್ಮ.

ಶಿವಪುರ ಹಾಗೂ ರಂಗಸಮುದ್ರದ ಸುರಕ್ಷಿತಾ ವಲಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. 40 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯ ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆದಿದೆ.

ಶೀಘ್ರವೇ ಅನುಮತಿ ನೀಡಲಾಗುವುದು. ಜಲ್ಲಿಕಲ್ಲು ಕ್ರಷರ್ಗಳನ್ನು ನಿಲ್ಲಿಸಬಾರದು ಎಂದು ಕ್ರಷರ್ ಮಾಲೀಕರುಗಳು ನ್ಯಾಯಾಲಯದ ಮೊರೆ ಹೋಗಿದ್ದು. ಇತ್ತೀಚೆಗೆ ಶಿವಮೊಗ್ಗ ನ್ಯಾಯಾಲಯವು ಜೂನ್ 14ರ ನಂತರ ಸುರಕ್ಷಿತ ವಲಯದಲ್ಲಿಲ್ಲದ ಕ್ರಷರ್ಗಳನ್ನು ಬಂದ್ ಮಾಡಿಸುವಂತೆ ಆದೇಶ ನೀಡಿದೆ. ಅದರ ಆಧಾರದ ಮೇಲೆ ಸೆಸ್ಕ್ ಅಧಿಕಾರಿಗಳಿಗೆ ವಿದ್ಯುತ್ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕೆ.ಆರ್. ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಸುರಕ್ಷತಾ ವಲಯ ಕಾರ್ಯಾರಂಭಿಸಿದೆ. ಆದ್ದರಿಂದ ಆ ಎರಡೂ ತಾಲ್ಲೂಕಿನಲ್ಲಿರುವ ಕ್ರಷರ್ಗಳನ್ನು ಆರು ತಿಂಗಳ ಒಳಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಷರತ್ತಿನ ಮೇಲೆಗೆ ಅನುಮತಿ ನೀಡಲಾಗಿದೆ ಎನ್ನುತ್ತಾರೆ ಪರಿಸರ ಇಲಾಖೆಯ ಉಪನಿರ್ದೇಶಕ ಬಿ.ಎಂ. ಪ್ರಕಾಶ್. ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿನಲ್ಲಿರುವ ಕ್ರಷರ್ ಘಟಕಗಳನ್ನು ಬಂದ್ ಮಾಡಿಸಲು ಭೂ ವಿಜ್ಞಾನ ಇಲಾಖೆಯು ಮೈಸೂರು ವಿಭಾಗ ಕಚೇರಿಗೆ ಈಗಾಗಲೇ ಆದೇಶ ಹೊರಡಿಸಿದೆ. ಶೀಘ್ರದಲ್ಲಿಯೇ ಘಟಕಗಳ ವಿದ್ಯುತ್ ಅನ್ನು ಸೆಸ್ಕ್ ಅಧಿಕಾರಿಗಳು ಕಡಿತಗೊಳಿಸಲಿದ್ದಾರೆ ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಎರಡು ವರ್ಷದಿಂದ ಸುರಕ್ಷತಾ ವಲಯ ಗುರುತಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಪರಿಣಾಮ ಜಲ್ಲಿಕಲ್ಲು ಕ್ರಷರ್ ಘಟಕಗಳನ್ನು ಬಂದ್ ಮಾಡಬೇಕಾಗಿದೆ.

ಸುರಕ್ಷತಾ ವಲಯ ಜಾಗ ಗುರುತಿಸುವ ಕೆಲಸ ಆಗಿಲ್ಲ. ಗುರುತಿಸಿಕೊಟ್ಟರೆ ಸ್ಥಳಾಂತರಿಸಲು ಸಿದ್ಧರಿದ್ದೇವೆ. ಜಾಗ ನೀಡದೆ ಇದ್ದರೆ ನಾವೇನು ಮಾಡಬೇಕು. ಸಾವಿರಾರು ಜನರು ನಿರುದ್ಯೋಗಿಗಳಾಗುತ್ತಾರೆ ಎನ್ನುತ್ತಾರೆ ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಕಾರ್ಯದರ್ಶಿ ರಾಮದೇವ್.

ಸರ್ಕಾರದ ಕಾಮಗಾರಿಗಳಿಗೆ ಬೇಕಾಗುವ ಜಲ್ಲಿಕಲ್ಲುಗಳಿಗಾಗಿ ಕ್ರಷರ್ಗಳಿಗೆ ತಾತ್ಕಾಲಿಕ ಅನುಮತಿಯನ್ನು ನೀಡಬಹುದಾಗಿದೆ. ಖಾಸಗಿ ಕಟ್ಟಡಗಳಿಗೆ ಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.