ಮಂಗಳವಾರ, ಜನವರಿ 21, 2020
29 °C
ಪಂಚರಂಗಿ

ಮಕ್ಕಳ ಟ್ಯಾಟೂ ಪ್ರೀತಿಗೆ ದಿಕ್ಕು ತೋಚದ ಅಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ ಫುಟ್ಬಾಲ್ ತಂಡದಲ್ಲಿ ಹೆಸರುವಾಸಿಯಾಗಿದ್ದ ಡೇವಿಡ್‌ ಬೆಕಮ್ ಅವರಿಗೆ ಟ್ಯಾಟೂ ವ್ಯಾಮೋಹ ವಿಪರೀತ. ಅವರ ದೇಹದ ತುಂಬೆಲ್ಲಾ 30ಕ್ಕೂ ಹೆಚ್ಚು ಟ್ಯಾಟೂಗಳಿವೆ. ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮಾತ್ರ ಅವರು ಟ್ಯಾಟೂ ವಿರೋಧಿಯಾಗಿಬಿಡುತ್ತಾರಂತೆ.

ದೇಹದ ಮೇಲೆಲ್ಲಾ ಈಗಲೇ ಹಚ್ಚೆ ಹಾಕಿಸಿಕೊಳ್ಳುವುದು ಬೇಡ ಎಂದು ಮಕ್ಕಳಿಗೆ ಎಷ್ಟೇ ಹೇಳಿದರೂ ಅವರನ್ನು ಒಪ್ಪಿಸುವುದು ಡೇವಿಡ್‌ಗೆ ಅಸಾಧ್ಯವಾಗುತ್ತಿದೆಯಂತೆ. ‘ಹದಿನಾಲ್ಕು ವರ್ಷದ ಬ್ರೂಕ್ಲಿನ್‌, ಹನ್ನೊಂದು ವರ್ಷದ ರೋಮಿಯೊ ಹಾಗೂ ಎಂಟು ವರ್ಷದ ಕ್ರಜ್‌ ದೊಡ್ಡವರಾದ ಮೇಲೆ ಟ್ಯಾಟೂ ಹಾಕಿಸಿಕೊಂಡೇ ಹಾಕಿಸಿಕೊಳ್ಳುತ್ತಾರೆ. ಅದನ್ನು ತಪ್ಪಿಸುವುದು ಅಸಾಧ್ಯ.

ಆದರೆ ಈಗಲೇ ಟ್ಯಾಟೂ ಹಾಕಿಕೊಳ್ಳುತ್ತೇವೆ ಎಂದು ಅವರು ಹೇಳುತ್ತಿದ್ದಾರೆ. ಬೇಡ ಎಂದರೂ ಕೇಳುತ್ತಿಲ್ಲ. ‘ಒಂದೇ ಒಂದು ಟ್ಯಾಟೂ ಹಾಕಿಸಿಕೊಳ್ಳುತ್ತೇವೆ, ಅದು ನಿಮ್ಮ ಹಾಗೂ ಅಮ್ಮನ ಚಿತ್ರ ಎನ್ನುತ್ತಿದ್ದಾರೆ. ಆಗ ನನಗೆ ಬೇಡ ಎಂದೆನ್ನಲು ಸಾಧ್ಯವಾಗಲೇ ಇಲ್ಲ’ ಎಂದು ಡೇವಿಡ್‌ ತಮ್ಮ ಗೊಂದಲವನ್ನು ಬಿಚ್ಚಿಟ್ಟಿದ್ದಾರೆ. ಅದೂ ಅಲ್ಲದೆ ಎರಡು ವರ್ಷದ ಮಗಳು ಹಾರ್ಪರ್‌ ತನ್ನ ಅಮ್ಮನ ಹಾದಿಯನ್ನೇ ತುಳಿಯುತ್ತಿದ್ದಾಳಂತೆ.

ಡೇವಿಡ್‌ ಪತ್ನಿ ವಿಕ್ಟೋರಿಯಾಗೆ ಫ್ಯಾಷನ್‌ ಎಡೆಗೆ ಅಪಾರ ಪ್ರೀತಿ. ಹಾರ್ಪರ್‌ ಕೂಡ ಮರುದಿನ ಯಾವ ದಿರಿಸು ತೊಟ್ಟುಕೊಳ್ಳಬೇಕು ಎಂಬುದನ್ನು ರಾತ್ರಿಯೇ ನಿರ್ಧರಿಸುತ್ತಾಳಂತೆ. ಆದರೆ ಬೆಳಿಗ್ಗೆ ಎದ್ದು ಮನಸನ್ನು ಬದಲಾಯಿಸಿಬಿಡುತ್ತಾಳಂತೆ. ಡೇವಿಡ್‌ ಅಥವಾ ವಿಕ್ಟೋರಿಯಾ ಯಾವ ಉಡುಗೆಯನ್ನು ಆಯ್ದುಕೊಟ್ಟರೂ ಅವಳದನ್ನು ಬದಿಗೆ ಸರಿಸಿಡುತ್ತಾಳೆ ಎಂದೆಲ್ಲ ಪ್ರೀತಿಯ ಮಗಳ ವರ್ತನೆಯನ್ನು ಹೇಳಿಕೊಂಡಿದ್ದಾರೆ ಡೇವಿಡ್‌.

ಪ್ರತಿಕ್ರಿಯಿಸಿ (+)