ಭಾನುವಾರ, ಮೇ 9, 2021
19 °C

ಮಕ್ಕಳ ಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಗರದ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ಹೊಸ ಕ್ಷುದ್ರಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮುದಾಯವು ಈ ಸಾಧನೆಯನ್ನು ದೃಢಪಡಿಸಿದೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಶನಿವಾರ ಹೇಳಿದೆ.ಅಖಿಲ ಭಾರತ ಕ್ಷುದ್ರಗ್ರಹ ಶೋಧನಾ ಅಭಿಯಾನದ ಭಾಗವಾಗಿ ದಕ್ಷಿಣ ದೆಹಲಿಯ ಅಮಿಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶೌರ್ಯ ಛಾಂಬಿಯಲ್ ಮತ್ತು ಗೌರವ್ ಪಾಟಿ ಹೊಸ ಕ್ಷುದ್ರಗ್ರಹವನ್ನು ಪತ್ತೆ ಮಾಡಿದ್ದಾರೆ. `ಈ ಸಂಶೋಧನೆಯನ್ನು ಅಂತರರಾಷ್ಟ್ರೀಯ ಅಂತರಿಕ್ಷ ಸಮುದಾಯ ದೃಢಪಡಿಸಿದೆ. ತಾತ್ಕಾಲಿಕವಾಗಿ ಈ ಆಕಾಶಕಾಯಕ್ಕೆ 2013 ಎಲ್‌ಎಸ್28 ಎಂದು ಹೆಸರಿಡಲಾಗಿದೆ' ಎಂದು ಅಭಿಯಾನವನ್ನು ಆಯೋಜಿಸಿದ್ದ `ಸ್ಪೇಸ್' ಸ್ವಯಂ ಸೇವಾ ಸಂಸ್ಥೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.