ಬುಧವಾರ, ಜನವರಿ 22, 2020
28 °C

ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚುವೆ: ರಜನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಚೆನ್ನೈ, (ಪಿಟಿಐ): ~ನನ್ನ ಮುಂದಿನ ಚಿತ್ರ ~ಕೊಚಡೈಯನ್~ ಮೂಲಕ ನಾನು ಪುನಃ ಬೆಳ್ಳಿ ತೆರೆಯಲ್ಲಿ ಮಿಂಚಲಿದ್ದೇನೆ~ ಎಂದು  ಮೂತ್ರಪಿಂಡ ತೊಂದರೆಯಿಂದ ಚೇತರಿಸಿಕೊಂಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರನ್ನು ಶುಕ್ರವಾರ ಭೇಟಿ ಮಾಡಿದ ರಜನಿಕಾಂತ್ ಅವರು, ಈಚೆಗೆ ~ಥಾಣೆ~ ಚಂಡಮಾರುತ ದಿಂದ ಸಂತ್ರಸ್ತರಾದವರ ಪರಿಹಾರ ನಿಧಿಗೆ 10 ಲಕ್ಷ  ರೂಪಾಯಿ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ  ಮಹಾತ್ವಕಾಂಕ್ಷೆಯ ಚಿತ್ರದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಾಹಸಮಯ ~ಕೊಚಡೈಯನ್~ ಚಿತ್ರವು ಅತ್ಯಾಧುನಿಕ ತಂತ್ರಾಜ್ಞಾನದ ಸಹಾಯದಿಂದ ತಯಾರಾಗಲಿದ್ದು, ದೇಶದ ಚಿತ್ರರಂಗದ ಇತಿಹಾಸದಲ್ಲಿ ಮೊದಲ 3ಡಿ ಚಿತ್ರವಾಗಲಿದೆ. ಇದನ್ನು ನನ್ನ ಮಗಳು ಸೌಂದರ್ಯ ನಿರ್ದೇಶಿಸಲಿದ್ದಾಳೆ. ಈ ಚಿತ್ರದ ಚಿತ್ರೀಕರಣವು ಶೀಘ್ರದಲ್ಲಿಯೇ ಆರಂಭವಾಗಲಿದೆ~ ಎಂದರು.

 

ಪ್ರತಿಕ್ರಿಯಿಸಿ (+)