ಶುಕ್ರವಾರ, ಮೇ 14, 2021
21 °C

ಮಾಹಿತಿ ದಾಖಲೆ ಕೆಲಸ ಸಮರ್ಪಕವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಮ್ಮ ದೇಶದಲ್ಲಿ ಉಪಯುಕ್ತವಾದ ಮತ್ತು ಐತಿಹಾಸಿಕ ಮಾಹಿತಿಯ ದಾಖಲೆಗಳನ್ನು ಸಂರಕ್ಷಿಸುವ ಕೆಲಸ ಸಮರ್ಪಕವಾಗಿ ಆಗಿಲ್ಲ. ವಿದೇಶಗಳಲ್ಲಿ ಆಗಿರುವ ಕೆಲಸ ನಮ್ಮಲ್ಲಿ ಆಗಬೇಕಾದ ನಿಟ್ಟಿನಲ್ಲಿ ಮಾಹಿತಿ ನಿರ್ವಹಣಾ ಕ್ಷೇತ್ರದ ವಿದ್ಯಾರ್ಥಿಗಳ ಮುಂದೆ ಸವಾಲಿನ ಹಾದಿ ಇದೆ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ರಾಮಕೃಷ್ಣ ರಾಮಸ್ವಾಮಿ ಹೇಳಿದರು.ಮಾನಸಗಂಗೋತ್ರಿಯ ಅಂತರರಾಷ್ಟ್ರೀಯ ಮಾಹಿತಿ ನಿರ್ವಹಣಾ ಮತ್ತು ವ್ಯವಸ್ಥಾಪನಾ ಸಂಸ್ಥೆಯ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, `ಪುರಾತನವಾದ ಮತ್ತು ಐತಿಹಾಸಿಕ ಮಹತ್ವದ ಮಾಹಿತಿ ಹಾಗೂ ಭಾಷೆಗೆ ಸಂಬಂಧಿಸಿದ ಮಾಹಿತಿಗಳನ್ನು ದಾಖಲೆ ಮಾಡುವಲ್ಲಿ ಹೆಚ್ಚಿನ ಗಮನ ನೀಡಿಲ್ಲ. ಇದರಿಂದ ಹಲವು ಸ್ಥಳೀಯ ಭಾಷೆಗಳು ನಶಿಸಿಹೋಗುವ ಅಪಾಯವಿದ್ದು, ಅದರೊಂದಿಗೆ ಕಲೆ, ಸಾಹಿತ್ಯ ಮ್ತು ಸಾಂಸ್ಕೃತಿಕ ಸೊಗಡು ನಾಶವಾಗುತ್ತವೆ. ಇದರಿಂದ ಎಷ್ಟೋ ಅಮೂಲ್ಯವಾದ ವಿಷಯಗಳು ನೇಪಥ್ಯಕ್ಕೆ ಸರಿಯುತ್ತವೆ~ ಎಂದು ವಿವರಿಸಿದರು.`ಮಾಹಿತಿ ನಿರ್ವಹಣಾ ಕ್ಷೇತ್ರ ಎನ್ನುವುದು ಬಹಳ ವಿಶಾಲ ವ್ಯಾಪ್ತಿಯದ್ದು. ಇದೊಂದು ಅಂತರ್ ಶಿಸ್ತೀಯ ವಿಭಾಗವಾಗಿದೆ. ಎಲ್ಲ ವಿಷಯಗಳ ಗೊಂಚಲು ಇದಾಗಿದ್ದು, ಅಪಾರ ಜ್ಞಾನವನ್ನು ಪಡೆದು ಕಾರ್ಯನಿರ್ವಹಿಸುವ ಸವಾಲು ಇದರಲ್ಲಿ ಪದವಿಧರ ರಾಗಿರುವ ಅಭ್ಯರ್ಥಿಗಳ ಮುಂದೆ ಇದೆ~ ಎಂದರು.`ಪ್ರತಿ ಹಂತದಲ್ಲೂ ಹೆಚ್ಚುತ್ತಿರುವ ಆಧುನಿಕ ತಂತ್ರಜ್ಞಾನದ ಬಳಕೆ ಹೊಸ ಕ್ರಾಂತಿಯನ್ನೇ ತರುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.ಅದಕ್ಕನುಗುಣವಾಗಿ ಉಪನ್ಯಾಸಕರ ಲಭ್ಯತೆ ಕಷ್ಟವಾಗುತ್ತಿದೆ. ಮುಂದೊಂದು ದಿನ ಉಪನ್ಯಾಸಕರೇ ಇಲ್ಲದ ಕೊಠಡಿಗಳಲ್ಲಿ ಡಿಜಿಟಲ್ ಸ್ಕ್ರೀನ್ ಮತ್ತು ಟ್ಯಾಬ್ಲೆಟ್‌ಗಳ ಮೂಲಕ ಕಲಿಯುವ ವಿಧಾನ ಬರುವ ಎಲ್ಲ ಸಾಧ್ಯತೆಗಳೂ ಇವೆ. ಇಂತಹ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣೆಯ ರಂಗಕ್ಕೆ ವಿಫುಲ ಅವಕಾಶಗಳು ಇವೆ~ ಎಂದು ಹೇಳಿದರು.`ವೃತ್ತಿ ಜೀವನದಲ್ಲಿ ಅದೇ ಹಳೆಯ ಸಿದ್ಧ ಮಾದರಿಗಳನ್ನು ಪುನರಾವರ್ತನೆ ಮಾಡಿ ಕೆಲಸ ನಿರ್ವಹಿಸುವ ಪದ್ಧತಿ ಈಗ ನಡೆಯುವುದಿಲ್ಲ. ಹೊಸತನದ ಸೃಷ್ಟಿ ಮಾಡುವವರಿಗೆ ಮಾತ್ರ ಹೆಚ್ಚಿನ ಯಶಸ್ಸು ಸಾಧ್ಯವಿದೆ~ ಎಂದು ಹೇಳಿದರು.ಮುಖ್ಯ ಅತಿಥಿ, ಬೆಂಗಳೂರಿನ ರಾಷ್ಟ್ರೀಯ ಸಮೀಕ್ಷಾ ಮತ್ತು ಮಾನ್ಯತಾ ಸಮಿತಿಯ ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ್, `ಈ ಸಂಸ್ಥೆಯು ಅಂತರ ಶಿಸ್ತಿಯ ಸಂಸ್ಥೆಯಾಗಿದ್ದು, ಸ್ವಾಯತ್ತ ಸಂಸ್ಥೆಯಾ ಗಿಯೂ ಉತ್ತಮ ಕಾರ್ಯ ನಿರ್ವಹಿ ಸುತ್ತಿದೆ. ವಿವಿ ಇಂತಹ ಹಲವು ಸಂಸ್ಥೆಗಳನ್ನು ಗುರುತಿಸಿ ಸ್ವಾಯತ್ತತೆ ನೀಡಬೇಕು~ ಎಂದು ಹೇಳಿದರು.ಮೈಸೂರು ವಿವಿ ಕುಲಪತಿ ಪ್ರೊ. ವಿ.ಜಿ. ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರೊ. ಶಾಲಿನಿ ಆರ್. ಅರಸ್ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.